‘ಬೆಕ್ಕಣ್ಣ’ ಮಕ್ಕಳಪದ್ಯ ಎಸ್ ಜಿ ಕೊಪ್ಪಳ ಅವರಿಂದ

ಬೆಕ್ಕೇ ಬೆಕ್ಕೇ ಬೆಕ್ಕಣ್ಣ
ಸೋನಿ ನಿನ್ನ ಹೆಸರಣ್ಣ.
ಮನೆಯ ಕಣ್ಣುನೀನಣ್ಣ
ಇಲಿಯ ಕಂಡರೆಸಾಕಣ್ಣ

ನೀನೇ ನಮ್ಮಪ್ರೀತಿಯು
ನೀನೇ ನಮ್ಮ ಜೀವವು.
ನೀನು ಬಹಳ ಸುಂದರ
ನಿನ್ನಧ್ವನಿಅತೀಮಧುರ.

ಇಲಿಯಕಾಟನೀಗಿಸುವೆ
ಜೊತೆಗೆ ಬೇಸರ ಕಳೆವೆ
ನೀನಿರೆ ಆಟಕೆ ಚಿನ್ನಾಟ
ನಮ್ಮ ಜೊತೆಗೆ ಚೆಲ್ಲಾಟ

ಹಾಲು ಸಕ್ಕರೆ ನಿನಗಿಷ್ಟ.
ಇಲಿಗೆ ನಿನ್ನಿಂದ ಸಂಕಷ್ಟ
ಅಕ್ಕನ ಪಾಲಿಗೆ ಮುದ್ದು
ಅಮ್ಮನ ಪಾಲಿಗೆ ಪೆದ್ದು

ಮನೆಗೆ ಅಂದ ಓಡಾಟ
ಇಲಿಗಳಕಂಡರೆಚೆಲ್ಲಾಟ
ಇಲಿಯೇನಿನ್ನಹಬ್ಬದೂಟ
ಇಲಿಗದೇಪ್ರಾಣಸಂಕಟ

ಬಾರೇ ಬಾರೇ ಸೋನಿ
ಬಾರೇ ಮುದ್ದಿನ ರಾಣಿ.
ಓಡಲುಬಿಡೆನುನಿನ್ನನ್ನ
ನೀನುಮನೆಗೆಮಗನಣ್ಣ

ಕೂಗುವೆ ಮ್ಯಾವ್ ಮ್ಯಾವ್
ಓಡುವೆ ನೀಚಂಗು ಚಂಗನೆ
ನೋಡುವೆ ನೀ ಪಿಳ ಪಿಳನೆ
ಕಣ್ಗಳುಹೊಳೆವವುಫಳಫಳನೆ.

ಮುದ್ದಿನ ಬಣ್ಣವು ನಿನ್ನದು.
ಓಡುವ ಕಾಲ್ಗಳು ನಿನ್ನವು
ಮೋಟು ಬಾಲವು ನಿನ್ನದು.
ವಯ್ಯಾರದ ನಡಿಗೆನಿನ್ನದು.


One thought on “‘ಬೆಕ್ಕಣ್ಣ’ ಮಕ್ಕಳಪದ್ಯ ಎಸ್ ಜಿ ಕೊಪ್ಪಳ ಅವರಿಂದ

Leave a Reply

Back To Top