ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೆ
ವಚನ ಪಿತಾಮಹ
ಫ ಗು ಹಳಕಟ್ಟಿ
ಬಾಲ್ಯದಲ್ಲೇ ಬಾಡಿತ್ತು ಜೀವವಿತ್ತ ಜೀವ
ಮೋಹವೆಲ್ಲಾ ಸುಟ್ಟಿತೇನೊ ಆಗಲೆ
ಮಗನ ಸಾವು ಬಾಧಿಸಲಿಲ್ಲ
ವಚನ ಶೋಧನೆಯ ಮುಲಾಮಿಗೆ
ಠಾಕು ಠೀಕು ಕೋಟಿನ ಒಳಗೆ
ಅಡಗಿದ ಬಡತನಕೆ ಅಳುಕಿನಿತಿಲ್ಲ
ಪದವಿ, ಪ್ರಶಸ್ತಿ ದಕ್ಕಿದರೂನು ತುಂಡು ಬಟ್ಟೆಗೆ ಗತಿಯೇ ಇಲ್ಲ
ಇಂತಪ್ಪ ಫ.ಗು ಹಳಕಟ್ಟಿಯ ನೆನೆಯದ ವಚನದ ಓದು, ಅರಿವು ಶೂನ್ಯ ಕಾಣಾ ಸರ್ವೇಶ್ವರ
————————————-
ಶಕುಂತಲಾ ಎಫ್ ಕೆ