ಹನಮಂತ ಸೋಮನಕಟ್ಟಿ ಅವರ ಕವಿತೆ-ನವ ವಧು

ನವ ವಧುವಿನ
ಕೆನ್ನೆ ಮೇಲೊಂದು ಕಾಡಿಗೆ
ಕುಳಿತು ಕೋಣೆಗೆಲ್ಲ
ಕತ್ತಲು ತುಂಬಿತ್ತು

ನವ ವಧು
ಬಟ್ಟಲು ತುಂಬಾ
ಮಧು ತುಂಬಿ
ಕೈಯಲಿ ಹಿಡಿದು
ಮಧ್ಯ ರಾತ್ರಿ
ಮಲಗುವ ಕೋಣೆಗೆ ಬಂದಾಗ
ಮಧು ಚಂದ್ರ ಗಿಡಕಿಯಲಿ ಇಣುಕುತ್ತಿತ್ತು

ಮೈಗಂಟಿದ
ರೇಶಿಮೆ ಶೀರೆಯಲಿ
ನವ ವಧು
ಸಿಂಗಾರಗೊಂಡು
ಸೌಂದರ್ಯ ದೇವತೆಯಂತೆ
ಸುಂದರ ಇರುಳಲಿ
ಪತಿಯ ಜೊತೆ
ಪಲ್ಲಂಗದ ಮೇಲೆ
ಕುಳಿತು ಮೆಲ್ಲನೆ ಮಾತಾಡುತ್ತಿದ್ದರೆ
ಸ್ವರ್ಗ ಲೋಕವೇ ಸನಿಹದಲ್ಲಿತ್ತು

ನವ ವಧು
ಕಪ್ಪು ಒಪ್ಪಾದ ಜಡೆಗೆ
ಮುಡಿದ ಮಲ್ಲಿಗೆಯ ಮಾಲೆ
ಬಾನಲ್ಲಿನ ಬೆಳ್ಳಕ್ಕಿಗಳ ಹಾಗೆ
ಕರಿ ಬಿಳಿ ಮೋಡ ತಾಕಿದಂತೆ
ಮನ್ಮಥನ ಕೈ ಸ್ಪರ್ಶಕ್ಕೆ ಸಿಕ್ಕು
ಒಳಗೆ ಕೆಳಗೆ ಕುಣಿಯುತ್ತಿದ್ದವು
ಒಬ್ಬರ ಮೈಗೊಬ್ಬರ ಮೈತಾಗಿದಾಗ
ಮೈಜುಮ್ಮೆಂದು ನಡುಗಿ
ಜಿನುಗುವ ಬೆವರಿನಲ್ಲಿ
ಶ್ರೀಗಂಧದ ಪರಿಮಳ ಸುತ್ತೆಲ್ಲ ಪಸರಿಸಿತ್ತು

ಚಂದ್ರಮನಿಗಿಂತ ಹೊಳೆಯುವ
ನಕ್ಷತ್ರಗಳ ಬೆಳಕು
ಕತ್ತಲಾದ ಕೋಣೆಗೆ ಇಣುಕದಂತೆ
ತಡೆ ನೀಡಿದ
ಗೋಡೆ ತಂಗಾಳಿ ಸುಳಿಯಲು
ಸಾಧ್ಯವಾದಷ್ಟು ಬಾಗಿಲ ಮಧ್ಯ ಬಿರುಕು ಮೂಡಿ
ಇನಿಯನ ಮೆಲ್ಲುಸಿರು
ಗಾಳಿಯಲಿ ತೇಲಿ
ಉನ್ಮಾದದ ಸ್ವರವಾಗಿ
ಸಂಗೀತದ ರಾತ್ರಿಯಾಗಿತ್ತು

ಸಪ್ತಸ್ವರಗಳು
ಸ್ವಪ್ನದಲಿ ಬಂದು ಮೇಲೊಂದು ಕೆಳಗೊಂದು
ಹಾರುತ್ತಾ ಇಳಿಯುತ್ತಾ
ಕುಣಿದು ಕುಪ್ಪಳಿಸಿ
ಮುದ್ದಾಡುವಾಗ ಒಂದಕ್ಕೊಂದು ಅಪ್ಪಳಿಸಿದ ನವ ಕನಸಿಗರು
ಆನಂದದ ಕಡಲ ಅಲೆಯಲ್ಲಿ ತೇಲುತ್ತಿದ್ದರು

ಹಸಿಯಾಗಿ ಬಿಸಿಯಾಗಿ
ನಲ್ಲ ನಲ್ಲೆಯರಂತೆ ಹಾಸಿಗೆಯ ಮೇಲೆ
ಒಂದಕ್ಕೊಂದು ಅಂಟಿಕೊಂಡು
ನಿದ್ದೆಯಿರದೆ ಒದ್ದೆಯಾದ ದೇಹಗಳು
ಶಯನಾಗೃಹದಲ್ಲಿ
ಅಸ್ತವ್ಯಸ್ತವಾದ ವಸ್ತ್ರದಲ್ಲಿ ವರ್ಣನಾತೀತವಾಗಿ
ಕಲಾಕಾರ ಬಿಡಿಸಿದ
ಕಲೆಯಲ್ಲಿ ಕಲ್ಪಿಸಿಕೊಳ್ಳದಂತೆ
ಕಾಣುತ್ತಿದ್ದರು


Leave a Reply

Back To Top