ಕಾವ್ಯ ಸಂಗಾತಿ
ಸವಿತಾ ಮುದ್ಗಲ್
‘ನನ್ನೊಳಗಿನ ಅಸುರ’
ಸುರ ಅಸುರರ ಗುಣಗಳು
ಅಡಗಿರಲು ನಮ್ಮಲ್ಲಿ
ಕಾಲಕ್ಕೆ ತಕ್ಕಂತೆ ಹೊರ ಹೊಮ್ಮವುದು
ಬೆಂಬಿಡದೆ ತಳ್ಳುವವು
ನನ್ನೊಳಗಿನ ಅಸುರ ಗುಣಗಳು
ಹೀನನಂತಾಗಿ ಮಾಡಿಬಿಟ್ಟಿವೆ
ನಾನು ನನ್ನದು ಎಂಬ ಅಹಂಭಾವ
ದಡವೇರಿ ನರ್ತನ ಮಾಡುತ್ತಲಿವೆ
ಮುಖದದಲ್ಲಿಯ ಭಾವಕು
ಮನದಲ್ಲಿಯ ಭಾವನೆಗಳಿಗೂ
ಅಜಾಗಜಾಂತರ ವ್ಯತ್ಯಾಸವಿರಲು
ತೋರುವ ಗುಣಗಳು ಅದರಂತೆಯೇ
ಸ್ವಾರ್ಥ ನಿಸ್ವಾರ್ಥ ಜೊತೆಜೊತೆಗೆ
ಸಾಗಲು, ಹೊಡೆದು ಹಾಕಲು
ಮನದ ಮತ್ಸರವ ನೀ ತೊರೆದು
ನಡೆದರೆ ಸಾಗುವ ಜೀವನವು
ಬಲು ಸುಂದರವು!..
ಮಾತು ಮಾತುಗಳು ಸೇರಿ ಅಸುರರಂತೆ
ವರ್ತಿಸೋ ಗುಣಗಳು ಕೆಟ್ಟ ಪರಿಣಾಮ
ಬೀರದೆ, ಹಾಲಿನ ಅಭಿಷೇಕ ಮಾಡಲು
ಮನದಿ ಶುದ್ಧವಾಗದೆ ಹೇ ಮನವೇ?
ಸವಿತಾ ಮುದ್ಗಲ್
ಕವನ ಪ್ರಕಟಿಸಿದ ಪತ್ರಿಕೆ ಬಳಗಕ್ಕೆ ವಂದನೆಗಳು
ಸುಂದರ ಭಾವಪೂರ್ಣ ಅರ್ಥಗರ್ಭಿತ ಕವನ.
ಚಂದದ ಕವಿತೆ. ಅಭಿನಂದನೆಗಳು. ಶರಣುಗಳು ತಮಗೆ.