‘ತಪ್ಪಿಗೆ ಶಿಕ್ಷೆ’ಮಕ್ಕಳ ಕಥೆ-ಎಸ್ ಎಸ್ ಜಿ ಕೊಪ್ಪಳ’

ಚಿಂಟು ಪಿಂಟು ಒಳ್ಳೆಯ ಗೆಳೆಯರು.ಜಾಣರಾಗಿದ್ದ ಇಬ್ಬರೂ ಸದಾ ಓದಿನಲ್ಲಿ ಆಟ ಪಾಠಗಳಲ್ಲಿ ತರಗತಿಯಲ್ಲಿ ಮುಂದಿದ್ದರು.ಉತ್ತಮ ಗುಣವುಳ್ಳವರಾಗಿ ಇರುವುದರಿಂದ  ಎಲ್ಲರಿಗೂ ಅಚ್ಚುಮೆಚ್ಚು.ಹೀಗೆ ದಿನಗಳು ಕಳೆದವು.ಈ ಬಾರಿ ಹೊಸ ಮಿತ್ರ ಬಂಟಿ ಇವರ ತರಗತಿಗೆ ದಾಖಲಾದ.ಸ್ವಭಾವತಹ ಬಂಟಿ ತುಂಟನಾಗಿದ್ದ . ಅವನಿಗೆ ಇನ್ನೊಬ್ಬರನ್ನು ಸತಾಯಿಸುವದು ಬಹಳ ಇಷ್ಟದ ಕೆಲಸವಾಗಿತ್ತು .ಹಾಗಾಗಿ ಅವನು ಎಲ್ಲರ ಜೊತೆ ಚೇಷ್ಟೆ ಮಾಡುವುದು ಜಗಳ ಆಡುವುದು ಸಾಮಾನ್ಯ ಆಗಿತ್ತು .ಆದರೆ ಚಿಂಟು ಮತ್ತು ಪಿಂಟು ಈ ಗುಣವನ್ನು ಇಷ್ಟಪಡುತ್ತಿರಲಿಲ್ಲ ಅವರು ಬಂಟಿಯನ್ನು ಬಳಿ ಸೇರಿಸುತ್ತಿರಲಿಲ್ಲ . ಇತ್ತ ಬಂಟಿಗೆ ಅವರನ್ನು ಸತಾಯಿಸಬೇಕೆಂಬ ಚಪಲ ಪದೇ ಪದೇ ಉಂಟಾಗುತ್ತಿತ್ತು. ಆದರೆ ಗುರುಗಳು ಹಾಗೂಎಲ್ಲರೂ ಚಿಂಟು ಮತ್ತು ಪಿಂಟುವನ್ನು ಪ್ರೋತ್ಸಾಹಿಸುತ್ತಿರುವುದರಿಂದ ಹೆಚ್ಚಿನ ಅವಕಾಶ. ಆದರೆ ಒಮ್ಮೆ ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಯುವ ಸಂದರ್ಭದಲ್ಲಿ ಬಂಟಿ ಚಿಂಟುವಿನ ವಸ್ತುಗಳನ್ನು ಕಳ್ಳತನ ಮಾಡಿಬಿಟ್ಟ ಆಗ ಚಿಂಟು ಮತ್ತು ಪಿಂಟು ಇಬ್ಬರೂ ಕೂಡಿ ವಸ್ತುಗಳನ್ನು ಹುಡುಕಾಡಿದರು ಸಿಕ್ಕೇ ಇರಲಿಲ್ಲ ಆದರೆ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವಾಗ ಹೂವಿನ ಬ್ಯಾಗಿನಲ್ಲಿ ಚಿಂಟು ವಿನ ವಸ್ತುಗಳು ಇದ್ದು ಅವುಗಳನ್ನು ಗೆಳೆಯನಿಗೆ ಹಿಂದಿರುಗಿಸಬೇಕೆನ್ನುಷ್ಟರಲ್ಲಿ ಅವನು ಮನೆ ತಲುಪಿಯಾಗಿತ್ತು ಮರುದಿನ ಶಾಲೆಗೆ ರಜೆಯಾಗಿದ್ದರಿಂದ ಕೊಡಲಾಗಲಿಲ್ಲ. ಹೀಗೆ ಎರಡು ದಿನ ಕಳೆದ ಮೇಲೆ ತರಗತಿಗೆ ಎಲ್ಲರೂ ಹೋದಾಗ ಅವನ ವಸ್ತುಗಳನ್ನು ವಾಪಸ್ ಮಾಡಬೇಕು ಎಂದು ಅಂದುಕೊಂಡಿದ್ದ .ಆದರೆ ಇತ್ತ ಗೆಳೆಯನಿಗೆ ತನ್ನ ವಸ್ತುಗಳನ್ನು ಯಾರು ಕದ್ದಿರಬಹುದು ಎನ್ನುವ ಚಿಂತೆ ಮನೆಯಲ್ಲಿ ಪಾಲಕರು ಗದರಬಹುದು ಎನ್ನುವ ಭಯ ಕೂಡಿ ಜ್ವರ ವೇ ಬಂದು ಮೈಯಲ್ಲಿ ಹುಷಾರಿಲ್ಲದಂತಾಗಿ ಅಂದು ತರಗತಿಗೆ ಹಾಜರಾಗಲಿಲ್ಲ ಪಿಂಟು ಶಾಲೆ ಬಿಟ್ಟ ನಂತರ ಗೆಳೆಯನ ಮನೆಗೆ ಹೋಗಿ ಕೊಡಲು ಮುಂದಾದ. ಆದರೆ ಚಿಂಟುವಿಗೆ ಇವನೇ ಕಳ್ಳತನ ಮಾಡಿರಬಹುದು ಎಂಬುವ ಅನುಮಾನ ಮೊದಲೇ ಶುರುವಾಗಿದ್ದರಿಂದ ಅವನ ತಲೆಯಲ್ಲಿ ಗೆಳೆಯನ ಬಗ್ಗೆ ಇಲ್ಲಸಲ್ಲದ  ಭಾವನೆಗಳು ಮೂಡಿದ್ದವು. ಮನೆಗೆ ಹೋದಾಗ ಸರಿಯಾಗಿ ಮುಖ ಕೊಟ್ಟು ಮಾತನಾಡಲಾರದ ಚಿಂಟುವನ್ನು ಕಂಡು ಪಿಂಟುವಿಗೆ ತುಂಬಾ ಬೇಸರವಾಯಿತು, ಆದರೂ ಗೆಳೆಯ ಮೈಯಲ್ಲಿ ಹುಷಾರಿಲ್ಲದ ಕಾರಣ ಹಾಗೆ ಮಾಡಿರಬಹುದು.ಸ್ವಭಾವತಎಂದುಕೊಂಡು ಮನೆಗೆ ಹೋದ ಆದರೆ ಮರುದಿನ ತರಗತಿಯಲ್ಲಿ ಚಿಂಟು ಬಾಲಕರೊಂದಿಗೆ ಬಂದು ಗುರುಗಳ ಹತ್ತಿರ ಪಿಂಟು ಕಳ್ಳತನ ಮಾಡಿದ ಎಂಬ ಅಪವಾದ ಹೊರಿಸಿದಾಗ ತುಂಬಾ ನೊಂದು ಅಳುತ್ತ ಕುಳಿತುಬಿಟ್ಟನು ಕೊನೆಗೆ ಉಳಿದ ಗೆಳೆಯರ ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋದರು ಶಾಲೆಯ ಮುಖ್ಯ ಗುರುಗಳು ಇಬ್ಬರಿಗೂ ಸಮಾಧಾನ ಹೇಳಿ ಮತ್ತೆ ಮೊದಲಿನಂತೆ ಚೆನ್ನಾಗಿರಿ ಎಂದರೂ ಕೂಡ ಇಬ್ಬರಿಗೂ ಮನಸ್ಸು ಬರಲಿಲ್ಲ .ಹೀಗೆ ಅವರಿಬ್ಬರ ಗೆಳೆತನ ಮೋಸಕ್ಕೆ ಬಲಿಯಾಗಿತ್ತು. ಆದರೆ ಬಂಟಿ ಮಾತ್ರ ಇಬ್ಬರ ಜೊತೆ ಚೆನ್ನಾಗಿರುವಂತೆ ನಟಿಸುತ್ತಿದ್ದ. ಇದರಿಂದ ಅವರಿಬ್ಬರಲ್ಲಿ ದ್ವೇಷ  ಇನ್ನೂ ಹೆಚ್ಚಾಯಿತು. ಆದರೂ ಚಿಂಟುಮತ್ತು ಪಿಂಟು ಒಮ್ಮೆ ಆಟದ ಅವಧಿಯಲ್ಲಿ ಬೈಲಿನಲ್ಲಿ ಆಟವಾಡುತ್ತಿರುವಾಗ ಬಂಟಿ ಗೆಳೆಯರ ಜೊತೆಗೆ ಹೇಳುವುದನ್ನು ಗುರುಗಳ ಕೇಳಿಸಿಕೊಂಡು ವಿಷಯ ಏನೆಂದು ವಿಚಾರ ಮಾಡಿದ ತರಗತಿಯ ಹುಡುಗರು ನಡೆದ ವಿಷಯವನ್ನು ಹೇಳಿದರು. ಚಿಂಟುವಿನ ಮೇಲೆ ಆರೋಪ ಬರುವಂತೆ ಮಾಡಿದ್ದು ನಾನೇ ಎಂದು ಹೇಳಿ ಜಂಭ ಪಡುತ್ತಿದ್ದ ಎಂದು ತಿಳಿದಾಗ ಗುರುಗಳು ಅದರ ಬಗ್ಗೆ ವಿಚಾರ ಮಾಡಿ ಮತ್ತೆ ಚಿಂಟು ಮತ್ತು ಹಾಗೂ ಪಿಂಟುನನ್ನು ಕರೆದು ನಡೆದ ವಿಷಯವೆಲ್ಲವನ್ನು ತಿಳಿಸಿದಾಗ ಪಾಪ ಚಿಂಟು ಹಿಂದೆ ಮುಂದೆ ಯೋಚಿಸದೆ ಗೆಳೆಯನನ್ನು ತಪ್ಪು ತಿಳಿಯದೆ ಎಂದು ವಿಷಾದಿಸಿದ .ಕೆಟ್ಟವರ ಸಹವಾಸ ಮಾಡುವುದು ಸರಿಯಲ್ಲ. ಅದರಿಂದಲೇ ನಮಗೆ ಹೀಗೆ ಮುಖಭಂಗವಾಯಿತು ಎಂದು ಹೇಳಿ ಮತ್ತೆ ಮೊದಲಿನಂತೆ ಸಂತೋಷದಿಂದ ಗೆಳೆಯರಾದರು. ಆದರೆ ಬಂಟಿ ಯನ್ನುಶಾಲೆಯಿಂದ ಬೇರೆ ಶಾಲೆಗೆ ಕಳುಹಿಸಲಾಯಿತು.


Leave a Reply

Back To Top