ಕಾಡಜ್ಜಿ ಮಂಜುನಾಥ ಅವರ ಕವಿತೆ-ಮತದ ನೆರೆಗೆ ಕರದ ಬರೆ….!!

ಬದುಕಿನಲಿ
ಏರಿಳಿತ ಸಹಜ
ತಾಳ್ಮೆ ಮನುಜ !

ಜಯವಾದಾಗ
ಹಿಗ್ಗದಿರು ,ಸೋತಾಗ
ಕುಗ್ಗದೆ ಇರು !

ವಾಸ್ತವತೆಯ
ಜೀವನ ಅರಿತುಕೋ
ಬದಲಾಗದೆ !

ಕಷ್ಟಗಳೇನು
ನಮ್ಮ ಮನೆದೇವರೆ
ಕೇಳಿ ಬರಲು !

ಏರಿಳಿತದ
ಜೀವನ ಎದುರಿಸಿ
ವಿಜಯಿಯಾಗು

ತಾಳ್ಮೆಮನದಿ
ಬದುಕು, ಎದುರಿಸಿ
ಗೆಲುವಾಗಿಸು !!


Leave a Reply

Back To Top