ಮಕ್ಕಳ ಸಂಗಾತಿ
ಎಸ್ ಎಸ್ ಜಿ ಕೊಪ್ಪಳ
ಚಿಟ್ಟೆ
ಚಿಟ್ಟೆ ಬಣ್ಣದಚಿಟ್ಟೆ
ಯಾರುಕೊಟ್ಟರುಬಣ್ಬದಬಟ್ಟೆ
ಬಡಿಯುವೆ ರೆಕ್ಕೆ ಪುಕ್ಕ
ನೀ ಪಾತರಗಿತ್ತಿ ಪಕ್ಕ.
ಹಸಿರು ಕೆಂಪು ಹೊಚ್ಚಿ
ಮೇಲಕ್ಕರಿಷಿಣ ಹಚ್ಚಿ
ಬಣ್ಣ ಬಣ್ಣದ ಮೋಡಿ
ಕಣ್ಣು ಸಾಲದು ನೋಡಿ
ಹಾರುವೆ ದೂರ ದೂರ.
ನನ್ನಜೊತೆ ಒಮ್ಮೆಬಾರ.
ನನಗೂ ಕೊಡು ಬಣ್ಣ
ನೀನೇ ನಮ್ಮಯ ಅಣ್ಣ
ನಾನೂ ಬರಲೇಜೊತೆಗೆ
ಕಲಿಸು ಹಾರಲು ನನಗೆ.
ತರಲೇಬಣ್ಣದಹೂರಾಶಿ
ಸುಗಂಧವಹರಡಿಸೂಸಿ
ಆಡಲುಕೊಡುವೆಆಟಿಕೆ
ನೀಬರಲುಜೊತೆಆಟಕೆ
ನಿನ್ನರೂಪ ಬಲುಅಂದ
ನೋಡುತಿರಲುಆನಂದ
ನಿನ್ನಲುಂಟುಸಾವಿರಬಣ್ಣ
ಕಾಣಲುಸೊಗಸುನಿನ್ನಕಣ್ಣ
ನಾನುನೀನುಹಾರೋಣ.
ಜಗಕೆ ಸೌಂದರ್ಯಸಾರೋಣ
ಎಸ್ ಎಸ್ ಜಿ ಕೊಪ್ಪಳ
ಚೆಂದ ಕವಿತೆ
ಧನ್ಯವಾದಗಳು