ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ವಿಪತ್ತು
ಆಪತ್ತು ವಿಪತ್ತುಗಳ ನಡುವೆ
ಒಂದು ಹಕೀಕತ್ತು
ಏನು ಮಾಡಿದರೊಂದು
ಜಯಪಜಯ ಇರುವುದು
ಸುಗಮ ದಾರಿ ಎಲ್ಲಿದೆ
ದಾರಿಗೆ ವಿಘ್ನ ಅನೇಕ
ಸರಿತೂಗಿಸ ಬೇಕದಕ
ಬಳ್ಳಿ ಒಂದು ತೊಡರು ನೂರು
ನೀತಿ ನಿಯಮ ಪಾಲನೆ
ಬೇರೆ ಇಲ್ಲ ಯೋಚನೆ
ಸರಿದಾರಿಯದೇ ಗಣನೆ
ಇದಕ್ಕಿಲ್ಲ ಯೋಚನೆ
ಆಪತ್ತು ವಿಪತ್ತುಗಳಿಗೆ
ಹೆದರುವುದೇ ಆಗುವುದೇ
ಕೆಲಸ ಜಯಿಸಿ ಮುಂದೆ
ಹೋಗುವುದೇ ಸರಸರ
ಬದುಕು ಬಾಳು ನಿತ್ಯ ಸೂರು
ಜಗವಿದು ಅಗಲ ಭೂಮಂಡಲ
ನಿರಂತರವಾಗಿ ಜಟಿಲ
ನಿತ್ಯದ ಫಲ ಸಫಲ
ಗಾಯತ್ರಿ ಎಸ್ ಕೆ