ಕೋಣದ ನೆತ್ತಿಯ ಮೇಲೆ ಮುತ್ತೈದೆಯ ಬೆಳಕಿನ ರೂಪ-ವೈಚಾರಿಕ ಲೇಖನ,ಭೋವಿ ರಾಮಚಂದ್ರ

ಭಾರತ ದೇಶ ಸಂಪ್ರದಾಯದ ತವರೂರು ಎಂದು ಇಡೀ ಜಗತ್ತು ಹಾಡಿ ಹೊಗಳಿ ವರ್ಣನೆಯ ಮೂಲಕ ಒಂದು ಶಾಶ್ವತ ಸಾಂಪ್ರದಾಯಿಕ ಕೇಂದ್ರದ ದೇಶವಾಗಿ ಬಿಂಬಿಸಿದೆ ಆದರೆ ಭಾರತದಲ್ಲಿ ಹಲವಾರು ಮೂಢನಂಬಿಕೆಗಳಿಂದ ಜನರು ಇಷ್ಟ ಕಷ್ಟದಲ್ಲಿ ಇರುವರು , ಕ್ರಿಸ್ತ ಪೂರ್ವದಿಂದ ಹಿಡಿದು ಕ್ರಿಸ್ತ ಶಕದಿಂದಲೂ ಕೂಡ ಭಾರತ ತನ್ನದೇ ಆದ ವೈಚಾರಿಕತೆ, ಸಾಂಸ್ಕೃತಿಕ ವೈವಿಧ್ಯತೆ, ಪ್ರಕೃತಿ ಸೌಂದರ್ಯ, ಹಲವಾರು ಭಾಷೆಯ ಸೌಹಾರ್ದತೆ, ರಾಜತ್ವದಿಂದ ನಡೆದು ಪ್ರಜಾಪ್ರಭುತ್ವ ದಂಡಿಗೆ ಮುಟ್ಟಿ, ಇಂದು ಬೃಹತ್ ಸಂವಿಧಾನವನ್ನು ನಾವು ಭಾರತ ದೇಶದ ಸೇತುವೆಯಾಗಿ, ದೇಶವನ್ನು ಕಟ್ಟುವ ಮೂಲಕ ಮಹಾತ್ಮರು ನಮಗೆಲ್ಲ ಮರುಜನ್ಮವನ್ನು ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಭಾರತ ದೇಶದ ಇತಿಹಾಸದ ಬಗ್ಗೆ ಚರ್ಚೆ ಮಾಡುವುದಿಲ್ಲ , ಭಾರತದಲ್ಲಿ ಇರುವ ಮೂಢನಂಬಿಕೆಗಳ ಬಗ್ಗೆ ಮಾತನಾಡೋಣ.

“ಕೋಣದ ನೆತ್ತಿಯ ಮೇಲೆ ಮುತ್ತೈದೆಯ ಬೆಳಕಿನ ರೂಪ” ಯಾಕೆ ಈ ಶೀರ್ಷಿಕೆ ಇಲ್ಲಿ ನಾನು ಯಾವ ವಿಷಯದ ಬಗ್ಗೆ ಹೇಳುತ್ತಿರುವೆ‌ ಅಂತ ಯೋಚನೆ ಮಾಡಬೇಡಿ , ಇದು ನಾವು ಉಣ್ಣುವ ನಾವು ನೋಡುವ , ನಾವೇ ಮಾಡುವ ಗ್ರಾಮದೇವತೆ ಹಬ್ಬ, ಮಾರಿಹಬ್ಬ, ಊರ ಹಬ್ಬ ಇನ್ನೂ ಹಲವಾರು ಹೆಸರುಗಳಿಂದ ಮಾಡುವ ಹೆಣ್ಣು ದೇವತೆಯ ಹಬ್ಬವು ಕೂಡ . ಭಾರತದಲ್ಲಿ ಪುನರುಜ್ಜೀವನ ಯುಗದಲ್ಲಿ ಭಾರತದಲ್ಲಿ ನಡೆಯುವ ಅನೇಕ ಬಗೆಯ ಮೂಢನಂಬಿಕೆಗಳ ಆಚರಣೆಗೆ ಮಹಾತ್ಮರು ವಿರೋಧ ವ್ಯಕ್ತಪಡಿಸಿದ್ದಾರೆ ಆದರೂ ಕೂಡ ಮಿತಿಯಲ್ಲಿ ಸಾಗುತ್ತಿರುವ ಈ ಮೂಢನಂಬಿಕೆಗಳ ಆಚರಣೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜೀವಂತವಾಗಿ ಉಸಿರಾಡುತ್ತಿದೆ, ಸತಿ ಪದ್ಧತಿ, ಬಾಲ್ಯ ವಿವಾಹ, ವಿಧವಾ ಪುನರ್ ವಿವಾಹ, ದೇವದಾಸಿ ಪದ್ಧತಿ, ಇನ್ನು ಮುಂತಾದ ಕೆಟ್ಟ ಆಚರಣೆಗಳು ದೇವರ ನಾಮದಲ್ಲಿ ನಡೆಸುತ್ತಿವೆ ಹಳ್ಳಿಯ ದೇವರ ಗುಡಿಗಳು. ತಿನ್ನುವ ನಾಲಿಗೆಗೆ ಮಾರಿ ಹಬ್ಬ, ಕಾಮದ ಬಯಕೆಗೆ ದೇವದಾಸಿ ಪದ್ಧತಿ, “ಭಾರತದಲ್ಲಿ ಕಾಮವು ಕತ್ತಲೆಯಲ್ಲಿ ಶುರುವಾಗಿ ಬೆಳಕಿನ ಕಣ್ಣೀರಿಗೆ ಸಾಕ್ಷಿಯಾಗುತ್ತದೆ “ಕಾಮ ಎಂದರೆ ಭಯ ಪಡುವ ಭಾರತ , ಕಾಮಕ್ಕಾಗಿ ಧರ್ಮ, ಭಾಷೆ, ಜಾತಿ,ಮತ , ಪಂಥ, ಸನ್ಯಾಸತ್ವ, ಭೂಮಿಯ ಮೇಲೆ ಇರುವ ಎಲ್ಲಾ ರೀತಿಯ ಭೋಗ ಜೀವನವನ್ನು ತ್ಯಜಿಸಿ ಶಾರೀರಿಕವಾದ ಆಸೆಯ ಕಾಮಕ್ಕೆ ಮಾತ್ರ ಮೊದಲ ಮನ್ನಣೆ ನೀಡುತ್ತಿದೆ, ಇದು ಸತ್ಯ ಯಾರೇ ಏನೇ ಹೇಳಿದ್ರು ಇದು ಸತ್ಯ , ಕಾಮವೇ ಪ್ರಸ್ತುತ ಜನಕ್ಕೆ ಮುಕ್ತಿ ಮಾರ್ಗ, ಎಲ್ಲದರಲ್ಲೂ ಜಾತಿ ಧರ್ಮ ಮತ ಪಂಥವನ್ನು ಹುಡುಕುವ ಜನಕ್ಕೆ ಕಾಮದಲ್ಲಿ ಮಾತ್ರ ಎಲ್ಲವನು ತನ್ನೊಳಗೆ ತ್ಯಜಿಸುತ್ತಾರೆ , ಇರಲಿ ಈ ವಿಷಯದ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡೋಣ , ಸ್ವಲ್ಪ ಮಾರಿ ಹಬ್ಬ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸುವೆ .

ನಾನು ಕಂಡಂತೆ ಗ್ರಾಮದೇವತೆಯ ಹಬ್ಬದ ಬಗ್ಗೆ ಹೇಳುತ್ತಾ ಹೋಗುವೆ , ಅದಕ್ಕೂ ಮುಂಚೆ ನೇರವಾಗಿ ವಿಷಯವನ್ನು ತಿಳಿಸುವೆ ತಾಯಿ ಹತ್ತು ಜನ ಮಕ್ಕಳಿಗೆ ಜನ್ಮ ನೀಡಿರುತ್ತಾಳೆ ಆ ಹತ್ತು ಮಕ್ಕಳಿಗೆ ಯಾವುದೇ ಸಮಸ್ಯೆ ಬಂದರು ಸಹಿಸುವುದಿಲ್ಲ ಹೀಗಿರುವಾಗ ಜಗತ್ತಿಗೆ ಒಬ್ಬಳೇ ತಾಯಿಯಾದ ದೇವತೆಗೆ ಸರ್ವ ಜೀವಸಂಕುಲವು ಮಕ್ಕಳೇ ಅದು ಹೇಗೆ ಅವರ‌ ಸಾವಿನಲ್ಲಿ ಮುತ್ತೈದೆ ಭಾಗ್ಯ ಪಡೆಯುತ್ತಾಳೆ ಅಂತ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒಂದು ಕಾರ್ಯಕ್ರಮದಲ್ಲಿ ಹೇಳುತ್ತಾರೆ ,” ನಾಲಿಗೆಗೆ ಉಪ್ಪು ಬೇಕು ರುಚಿ ಸಿಗಲು ಆಗಿರುವಾಗ ಸಮುದ್ರವನ್ನು ನೆಕ್ಕಲು ಆಗುತ್ತಾ ” ಇಲ್ಲ ಉಪ್ಪನ್ನೇ ತಿನ್ನಬೇಕು , ಮಾಂಸದ ರುಚಿ ಕಂಡ ನಮಗೆ ದೇವರ ನಾಮದಲ್ಲಿ ಏಕೆ ಪ್ರಾಣಿ ಬಲಿ ಕೊಡುವುದು , ತಿನ್ನುವುದು ತಪ್ಪಲ್ಲ ನಿಮ್ಮ ಜೀರ್ಣಾಂಗದ ಶಕ್ತಿ ನೀವು ಏನಾದರೂ ತಿನ್ನಿ , ತಿನ್ನುವುದು ನಿಮ್ಮ ಹಕ್ಕು ಇದರಲ್ಲಿ ನನ್ನ ಯಾವ ತಕರಾರು ಇಲ್ಲ , ಆ ರೀತಿಯ ಭೋಗಕ್ಕೆ ದೇವರನ್ನು ಏಕೆ ಮುಂದಾಳು ತರಬೇಕು, ಕುರಿ , ಮೇಕೆ, ಕೋಳಿ , ಮೀನು ಇನ್ನು ಮುಂತಾದ ಪ್ರಾಣಿಗಳು ಮಾನವನಿಗೆ ಮಿಶ್ರ ಆಹಾರವಾಗಿವೆ , ನೀವು ತಿನ್ನಿ ಬೇರೆಯವರಿಗು ತಿನ್ನಿಸಿ ಯಾರಾದ್ರೂ ಏನಾದ್ರೂ ಅಂದ್ರೆ ಕೇಳಿ ಆದರೆ ದೇವರ ಹೆಸರಲ್ಲಿ ಈ ರೀತಿ ಮಾಡುವುದು ತಪ್ಪು ಇದು ಕಾನೂನಿನ ಮೂಲಕ ನಿಷೇಧವಾಗಿದೆ ಆದರೂ ಜನರು ಇನ್ನು ಅದೇ ಆಚರಣೆಯಲ್ಲಿ ಇರುವರು ಸರ್ವೇ ಜನಾ ಸುಖಿನೋ ಭವಂತು ಎಂಬ ವ್ಯಾಖ್ಯಾನ ತುಂಬಾ ಮಹತ್ವವಾಗಿ ಭಾರತದಲ್ಲಿ ಪ್ರಾಮುಖ್ಯತೆ ಪಡೆದಿದೆ.

ಹೇಗೆ ಈ ಹಬ್ಬ ಮಾಡುತ್ತಾರೆ ಅಂತ‌ ನೋಡೋಣ ಈಗ , ಎಲ್ಲ ಊರಲ್ಲಿ ಊರ ದೇವತೆ ಇರುತ್ತೆ , ಇಲ್ಲಿ “ಇರುತ್ತೆ ” ಎನ್ನುವುದು ತುಂಬಾ ಮುಖ್ಯವಾದ ಪದ ಕೂಡ ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಇದರ ಬಗ್ಗೆ ನಾನು ಪೂರ್ಣ ವಿಷಯ ತಿಳಿಸುವುದಿಲ್ಲ ಇದಕ್ಕೆ ನಿಮ್ಮ ನಕಾರಾತ್ಮಕ ಭಾವನೆ ವ್ಯಕ್ತ ಪಡಸಬೇಡಿ , ಇರುತ್ತೆ ಅಷ್ಟೇ .
ಈ ದೇವತೆ ಊರನ್ನು ಕಾಯುತ್ತೆ , ಇದು ನಂಬಿಕೆ ಮತ್ತು ಧೈರ್ಯ ಕೂಡ , ಊರಿನ ಎಲ್ಲಾ ಜನತೆ ಮೂರು ವರ್ಷ ಇಲ್ಲ ಐದು , ಒಂಬತ್ತು ವರ್ಷಗಳಿಗೊಮ್ಮೆ ದೊಡ್ಡ ಹಬ್ಬವನ್ನು ಮಾಡುತ್ತಾರೆ , ಹಬ್ಬ ಮಾಡಬೇಕು ಅಂತ ಚರ್ಚೆ ಆದಾಗ ಒಂದು ಕೋಣವನ್ನು ಗ್ರಾಮ ದೇವತೆಗಾಗಿ ಬಿಡುವರು ಆ ಕೋಣ ದೇವರ ಕೋಣ , ಹೀಗಿರುವಾಗ ಮನೆ ಮನೆಗೆ ಎರಡು ಮೂರು ಕುರಿ ಕೋಳಿಗಳು , ಇನ್ನೇನು ಹಬ್ಬದ ದಿನಗಳು ಹತ್ತಿರ ಬಂದಿವೆ ಅಂತ ಗೊತ್ತಾದಾಗ ಆ ಕೋಣವನ್ನು ಹಿಡಿದು , ಅದಕ್ಕೆ ಪೂಜೆ ಸಲ್ಲಿಸಿ ಊರಿನ ಸುತ್ತಲೂ ಸುತ್ತಾಡಿಸುವರು ಒಂದು ವಾರನೋ ಇಲ್ಲ , ಐದು ದಿನನೋ ಆ ಕೋಣಕ್ಕೆ ಆಹಾರ ನೀಡುವುದಿಲ್ಲ , ಆ ದಿನದಲ್ಲಿ ಆ ಕೋಣಕ್ಕೆ ಸುಣ್ಣದ ನೀರನ್ನು ಕುಡಿಸುವರು ಅಂತ ಹೇಳುತ್ತಾರೆ ಹಿರಿಯರು ಇರಲಿ ಹಬ್ಬ ಬಂತು , ಊರ ತುಂಬಾ ಚಿತ್ತಾರದ ಬ್ಯಾನರ್ ಕಟೌಟ್ ಫೋಟೋಗಳು , ಮನೆಯಂಗಳದಲ್ಲಿ ರಂಗು , ಊರ ತುಂಬಾ ಹಾಡುಗಳ ಸ್ವರಗಳು , ಬಣ್ಣ ಬಣ್ಣದ ಬಟ್ಟೆಗಳು , ಮಂಗಳವಾರ ಸಿಹಿಯ ಊಟ ಅವರವರ ಮನೆಯಲ್ಲಿ ಏನು ಇದೆ ಅದು , ಬುಧವಾರ ಬೆಳಿಗ್ಗೆ ಅಂದರೆ ಬೆಳಗಿನ ಜಾವ ಮೂರು ಗಂಟೆಗೆ ಶುರು ಆ ಕೋಣವನ್ನು ಹಿಡಿದು ತಂದು ಗುಡಿಯ ಸುತ್ತ ಸುತ್ತಿಸಿ , ಆ ಕೋಣದ ಚೆಂಡಿಗೆ ಬಲವಾಗಿ ಹೊಡಿದು ಮೆತ್ತನೆ ಮಾಡಿ , ಕತ್ತನ್ನು ಕತ್ತರಿಸುವುದು ಮೂಢನಂಬಿಕೆಗಳ ಸಂಪ್ರದಾಯ , ಗುಡಿಯ ಒಳಗೆ ಆ ದಿನ ದೇವತೆ ವಿಧವೆಯಾಗಿ ಇರುತ್ತೆ , ಕೋಣ ಕಡಿದ ಮೇಲೆ ಪೂಜ್ಯರಿಗಳು ದೇವಿಯನ್ನು ಶೃಂಗಾರಿಸಿ ಮುತ್ತೈದೆ ಮಾಡುವರು , ಗುಡಿಯೊಳಗೆ ದೇವತೆಯ ಕೈಯಲ್ಲಿ ಇರುವ ಬಳೆಗಳು ಹೊಡೆಯುತ್ತವೆ ಅನ್ನುತ್ತಾರೆ ಇದನ್ನು ನಾನು ನೋಡಿಲ್ಲ ಆಗಾಗಿ ಇದರ ಬಗ್ಗೆ ಮಾತನಾಡುವುದಿಲ್ಲ , ಅನಂತರ ದೇವರು ಮುತ್ತೈದೆ ಆಗುತ್ತೆ ಅನ್ನುವುದು ಹಿರಿಯರು ಹೇಳಿದ ವಾಡಿಕೆ ಇದು .

ಕೋಣವನ್ನು ಕಡಿದು ಆ ಕೋಣದ ಚೆಂಡನ್ನು ಒಂದು ಸಾಂಪ್ರದಾಯಿಕ ರಂಗೋಲಿ ಹಾಕಿ ದವಸ ಧಾನ್ಯಗಳಲ್ಲಿ ಚಿತ್ತಾರಿಸಿ , ಮನೆ ಮನೆಯಿಂದ ಬಂದ ಅನ್ನವನ್ನು ಒಂದು ರಾಶಿ ಮಾಡಿ , ಆ ಕೋಣದ ತಲೆಗೆ ಪೂಜೆ ಸಲ್ಲಿಸಿ , ನೆತ್ತಿಯ ಮೇಲೆ ದೀಪ ಹಚ್ಚಿ ಇಟ್ಟು , ಕಡಿದ ಕೋಣದ ಹೊಟ್ಟೆಯಲ್ಲಿ ಇದ್ದ ಆಹಾರವನ್ನು ಉಲುಸು ಅಂತ ಊರಿನ ತುಂಬಾ ಬೆಳಗಿನ ಜಾವ ಹಾಕುತ್ತಾ ಬರುವರು , ಇದಕ್ಕೆ ನಿರ್ದಿಷ್ಟ ಜನರು ನೇಮಕಗೊಳ್ಳುತ್ತಾರೆ ಅವರನ್ನು ಬಿಟ್ಟು ಬೇರೆ ಯಾರೇ ಆಗಲಿ ಆ ಉಲುಸು ಮುಟ್ಟಿದ್ರೆ ಅವರನ್ನು ಸಾಯೋ ತರ ಹೊಡೆಯುತ್ತಾರೆ ಇಲ್ಲ ಬೆರಳು ಕಿವಿ ಕತ್ತರಿಸುತ್ತಾರೆ ಇದು ಎಂತ ಸಂಪ್ರದಾಯ ಅಂತ ನನಗೆ ಗೊತ್ತಿಲ್ಲ ದಯಮಾಡಿ ಕಾನೂನಿನ ಮೂಲಕ ಕ್ರಮ ತೆಗೆದುಕೊಳ್ಳಬೇಕು ಈ ಸಂಪ್ರದಾಯ ಬಗ್ಗೆ ಈ ಒಂದು ಉಲುಸು ಊರಿನ ತುಂಬಾ ಹಾಕಿದ್ರೆ ಯಾವುದೇ ರೀತಿಯ ಖಾಯಿಲೆ , ಕಷ್ಟ ಬರುವುದಿಲ್ಲ , ಹಾಗೆ ಒಳ್ಳೆ ರೀತಿಯ ಮಳೆ ಬರುತ್ತದೆ ಎನ್ನುವುದು ನಂಬಿಕೆ , ಈ ನಂಬಿಕೆ ಬೇರೆ ಊರಿನ ಜನ ಉಲುಸು ತೆಗೆದುಕೊಂಡು ಅವರ ಊರಿಗೆ ಹೋಗುವುದಾಗಿ ಕೂಗಿ ಹೋದರೆ ಆ ವ್ಯಕ್ತಿ ಸಿಕ್ಕರೆ ಸಾಯಿಸುವುದು ಅಂತ ಇದೆ ಇದುವರೆವಿಗೂ ಈ ಘಟನೆ ಆಗಿಲ್ಲ ಖುಷಿ ವಿಚಾರ ಕೂಡ.

ಕೋಣದ ನೆತ್ತಿಯ ಮೇಲೆ ದೀಪ ಇಟ್ಟಂತೆ , ದೇವತೆ ಹೆಸರು ಹೇಳಿ ಬಲಿ ಕೊಟ್ಟ ಪ್ರಾಣಿಗಳು ಸಾಂಬಾರ್ ಆಗಿ ಜನರ ಹೊಟ್ಟೆ ಸೇರುತ್ತವೆ , ಇನ್ನು ಒಂದು ಬೇವಿನ ಸೊಪ್ಪು ಸೇವೆ , ಈ ಪದ್ಧತಿ ಅನಿಷ್ಟವಾದ ಪದ್ಧತಿ, ಬೆತ್ತಲೆಯಾಗಿ ಬೇವಿನ ಸೊಪ್ಪು ಕಟ್ಟಿ ದೇವತೆಗೆ ಹರಕೆ ಹೊತ್ತು ತೀರಿಸುವುದು ಮೂಢನಂಬಿಕೆ , ಜನ್ಮ ನೀಡುವಾಗ ತಾಯಿ ಶುದ್ಧಿಯಾಗಿ ಯಾವುದೇ ರೀತಿಯ ಕೆಟ್ಟ ಯೋಚನೆ ಇಲ್ಲದೇ ನಿನಗೆ ಬೆತ್ತಲೆಯ ರೂಪದಲ್ಲಿ ಜನ್ಮ ನೀಡುತ್ತಾಳೆ ಮತ್ತೇಕೆ ಆ ತಾಯಿಯ ಮುಂದೆ ಬೆತ್ತಲೆಯಾಗುತ್ತಿಯಾ ಅನ್ನುವುದು ನನ್ನ ಪ್ರಶ್ನೆ ದಯಮಾಡಿ ಕರ್ನಾಟಕ ಸರ್ಕಾರ ಕಾನೂನಿನ ಮೂಲಕ ಅನಿಷ್ಟವಾದ ಪದ್ಧತಿಗಳನ್ನು ನಿಷೇಧ ಮಾಡಬೇಕು ಈ ರೀತಿಯ ಮೂಢನಂಬಿಕೆಗಳಿಗೆ ಕ್ರೂರವಾದ ಕೆಲಸಗಳಿಗೆ ಶಿಕ್ಷೆಯನ್ನು ನೀಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುವೆ, ತಿನ್ನಿ ನಿಮ್ಮ ಆಹಾರವನ್ನು ಆದರೆ ಮೂಢನಂಬಿಕೆಗಳ ಆಧಾರದ ಮೇಲೆ ತಿನ್ನಬೇಡಿ , ಸಮಾಜಕ್ಕೆ ಉತ್ತಮ ಸಂದೇಶ ಸಾರಿ , ಅಭಿವೃದ್ಧಿ ತನ್ನಿ , ದೇವರಿಗೆ ಇಡೀ ವಿಶ್ವದಲ್ಲೇ ಇರುವ ಜೀವಸಂಕುಲವು ಮಕ್ಕಳಂತೆ ಯಾವ ತಾಯಿ ಮಕ್ಕಳನ್ನು ಬಲಿ ಕೇಳುವುದಿಲ್ಲ , ಹೆಣ್ಣು ಎಂದಿಗೂ ಕೂಡ ವಿಧವೆ ಆಗುವುದಿಲ್ಲ ಅವಳು ಹುಟ್ಟುವಾಗಲೇ ಮುತ್ತೈದೆ, ಕೋಣದ ಒಳಗೆ ದೇವತೆಯ ಗಂಡ ಇರುವನು ಅಂತ ಕೋಣವನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲುವುದು ಬೇಡ , ಸಂಪ್ರದಾಯ ಬೇರೆ ರೀತಿಯಲ್ಲಿ ಆಗಲಿ ಚಿತ್ರಹಿಂಸೆಯಲ್ಲಿ ಆಗುವುದು ಬೇಡ, “ಹುಟ್ಟಿನಿಂದ ಹಿಡಿದು ಸಾಯುವವರಿಗೂ ಕೂಡ ಹೆಣ್ಣು ಮುತ್ತೈದೆ ” ತಿಳಿಸಿ , ತಿಳಿದು ಸಂಪ್ರದಾಯದ ಹಬ್ಬಗಳನ್ನು ಆಚರಣೆ ಮಾಡಿ ,
ಧನ್ಯವಾದಗಳು ಸರ್ವರಿಗೂ .


Leave a Reply

Back To Top