ನಾಗರಾಜ ಬಿ.ನಾಯ್ಕ ಅವರ ಕವಿತೆ-ಸಾಧ್ಯತೆ……

ಮಣ್ಣಿನೊಳಗೆ ಅದೆಷ್ಟು ಭಾವ ಬಂಧ
ಮಳೆಯೆಂದರೆ ಹಾಗೆ
ಹಸಿರು ಬೇರು ಎಳೆಚಿಗುರು
ಸುತ್ತ ಮುತ್ತ ನಗೆಯ ಬಗೆ

ಚಂದ ಮಾತು ತುಂಬಿದ ಮೌನ
ಬೀಸುವ ತಂಗಾಳಿಗೆ
ಉಳಿವ ಒಲವು ಮಣ್ಣ ಕಣದಿ
ಸಾವಿರ ಹನಿ ಮಳೆಗೆ

ಬಳ್ಳಿ ಬದುಕು ಭರವಸೆ ನೂರು
ಹಕ್ಕಿ ಹಾಡೊಳಗೆ
ಚಿತ್ರ ಸಾಲು ಮೋಡದ ತೇರು
ಕಣ್ಣ ಕವಿತೆಯೊಳಗೆ

ರಾಗ ಇಳೆ ತಾಳ ಕಾಡು
ಹಸಿರು ಉಸಿರ ಜಾಡು
ಕಡಲ ತೆರೆ ಕುಣಿವ ತೊರೆ
ಹೊಸತು ಸಾಲಿನ ಮೊರೆ

ಸಾಧ್ಯತೆ ಸಾವಿರ ಮಣ್ಣಿನಲ್ಲಿ
ಹೂವ ಸೊಬಗು ಚೆಲುವಿನಲ್ಲಿ
ಗೆಲುವು ಗುರುತು ಬುವಿಯಲ್ಲಿ
ನಾವು ಉಳಿವ ಲೋಕದಲ್ಲಿ


5 thoughts on “ನಾಗರಾಜ ಬಿ.ನಾಯ್ಕ ಅವರ ಕವಿತೆ-ಸಾಧ್ಯತೆ……

  1. ಹಸಿರು ಕಾಡು ಕಡಲು ನಮ್ಮ ಭೂತಾಯಿಯ ಮಡಿಲು ಇವುಗಳ ಬಗ್ಗೆ ಎಷ್ಟೇ ಬರೆದರೂ ಬರೆದು ಮುಗಿಯಲಾರದು … ಹೂವಿನ ಸೊಬಗಿನಂತೆ ಕವಿತೆಯ ಸೊಬಗು ಸಾಧ್ಯತೆಯನ್ನ ಮೀರಿ ಮನವ ಸೆಳೆಯುವಂತಿದೆ.. ಸುಂದರ ಸುಮಧುರ ಕವಿತೆಯನ್ನ ಮತ್ತೆ ಮತ್ತೆ ಓದಿದಾಗ ಹೊಸದೇ ಅನುಭ ನೀಡುವಂತಿದೆ..

    ನಾನಾ ಬಾಡ

  2. ಅಗೆದಷ್ಟು ಆಳ ಬಗೆದಷ್ಟು ಜ್ಞಾನ ಎಂಬ ಧೋರಣೆ ತಮ್ಮ ಕವಿತೆಯಲ್ಲಿ ವ್ಯ ಕ್ತ ವಾಗು ತ್ತ ದೆ.

Leave a Reply

Back To Top