ಅಪ್ಪನ ದಿನದ ವಿಶೇಷ
ಸುಜಾತಾ ರವೀಶ್
ಗಜಲ್
ರೂವಾರಿಯಾಗಿ ಜೀವ ಜೀವನದ ನಕ್ಷೆಯಬರೆಸಿದವರು ನೀವು
ಮಾದರಿಯಾಗಿ ಭಾವ ಭಾವನೆಗಳ ಹತೋಟಿ ಮೆರೆಸಿದವರು ನೀವು
ಚದುರಂಗ ಆಡುವ ಚಾತುರ್ಯವನುಮಸ್ತಕದಲಿ ತುಂಬಿದಿರಿ
ಪದರಂಗ ಬಿಡಿಸುವ ಕೌಶಲ್ಯವನು ಕಲಿಸಿದವರು ನೀವು
ಮುನ್ನುಡಿಯಂತೆ ಸಮರ್ಥ ಶಿಕ್ಷಣದಮಹತ್ವ ತಿಳಿಸಿದಿರಿ
ಕನ್ನಡಿಯಂತೆ ನಿರ್ಮಲ ಚಿಂತನೆಯ ಮೂಡಿಸಿದವರು ನೀವು
ಹಣದ ವ್ಯಾಮೋಹವನ್ನು ಬೆಳೆಸಿಕೊಳ್ಳದ ಅರಿವು ನೀಡಿದಿರಿ
ಗುಣದ ಪ್ರಾಮುಖ್ಯತೆಯ ಮೆಚ್ಚಿಕೊಳ್ಳುವಂತೆ ಮಾಡಿಸಿದವರು ನೀವು
ದಾರಿದೀಪವಾಗಿ ಜವಾಬ್ದಾರಿಗಳ ನಿಭಾವಣೆ ನಿರ್ವಹಿಸಿದಿರಿ
ನಂದಾದೀಪವಾಗಿ ಸುಜಿಯ ಅಂತರಂಗವನು ಬೆಳಗಿಸಿದವರು ನೀವು
ಸುಜಾತಾ ರವೀಶ್
ಚೆನ್ನಾಗಿದೆ ತಮ್ಮ ಅಪ್ಪನ ಕುರಿತ ಗಜಲ್ ಮೆಡಮ್
— ಶುಭಲಕ್ಷ್ಮಿ ನಾಯಕ
Super madam
Excellent sujatha..
ಅಪ್ಪನ ಕುರಿತಾದ ಚೆಂದದ ಗಝಲ್
Sripad Algudkar ✍️
ಅಪ್ಪನ ಕುರಿತು ಹೃದಯ ತುಂಬಿದ ಗಜಲ್
Yashoda ramakrishna