ಡಾ.ಸುಮತಿ ಪಿ ಅವರ ಕವಿತೆ-‘ಬಸಿರಿಗೆ ಜೀವ ತುಂಬವ್ಳೆ’

ಬಳಲಿದ ಭೂತಾಯಿ ನೀರಾಗ ನೆನೆದವ್ಳೆ
ಗಂಗೆಯು ಹರಿದು ಕುಣಿದಾವ್ಳೆ|ರೈತನ|
ಮನದಾಗ ಖುಷಿಯ ತುಂಬವ್ಳೆ

 ಗದ್ದೇಲಿ ಬಿತ್ತಿದ ನೇಜಿಯ ಹರಿದವ್ರೆ
ನಾಟಿಯ ಮಾಡಲು ಒಯ್ತವ್ರೆ|ನಾರಿಯರು|
ಸಂತಸದಿ ಎತ್ಕೊಂಡು ನಡೆದವ್ರೆ

ಹೊಲವನ್ನು ಉತ್ರವ್ರೆ ನಾಟಿಯ ಮಾಡವ್ರೆ
ಧರಣಿಯು ಹಸಿರನ್ನು ಹೊದ್ದವ್ಳೆ|ಸುತ್ತೆಲ್ಲ|
ಬೆಳೆಯಿಂದ ಕಂಗೋಳಿಸಿ ನಿಂದವ್ಳೆ.

ಹಸಿರಲ್ಲಿ ಭೂತಾಯಿ ಉಸಿರನ್ನು ನೀಡವ್ಳೆ
ಬಸಿರಿಗೆ ಜೀವವ ತುಂಬವ್ಳೆ |ನಮ್ಮವ್ವ|
ಹಸನಾಗಿ ಪೋಷಣೆ ಮಾಡ್ತವ್ಳೆ.

Leave a Reply

Back To Top