ಶಿವಮ್ಮ ಎಸ್.ಜಿ.ಕೊಪ್ಪಳ ಮಕ್ಕಳ ಕವಿತೆ-ಗುಬ್ಬಚ್ಚಿ

ಮರದಲಿ ಅಂದದ
ಗುಬ್ಬಚ್ಚಿ ಗೂಡಮ್ಮ
ಅದರಲಿ, ಮರಿಗಳು
ಉಂಟು ಹಲವಮ್ಮ
ಕಾಳನು ಹೆಕ್ಕಲು
ತಂದೆ ತಾಯಮ್ಮ

ಎಚ್ಚರ ಹೊರಗೆ
ನೀವು ಬರಬೇಡಿ
ದುಷ್ಟರ ಕಾಟಕೆ
ನೀವು ಸಿಲುಕಬೇಡಿ
ಮರಳುವೆವು ನಾವು
ಕಾಳುಗಳಗೂಡಿ

ತರುವೆವು ನಮಗೆಲ್ಲ
ಹೊಟ್ಟೆಗೆ ಆಹಾರ
ನಿಮಗೆ ರುಚಿರುಚಿ
ಆದ ಆಹಾರ
ಹುಡುಕುತ ಹೋದವು
ಹಾರುತ ದೂರ

ಹೊರಗೆ ದುಷ್ಟರ
ಕಾಟ ಇದೆಯಮ್ಮ
ಒಳಗೆ ಆಡುತ್ತಾ
ಇರಿ ನೀವಮ್ಮ
ಗೂಡೇ ನಿಮಗೆ
ರಕ್ಷಣೆಯಮ್ಮ

ಬಂದವು ಓಡುತಾ
ತಂದೆ ತಾಯಮ್ಮ
ತಂದವು ರುಚಿ
ರುಚಿ ಕಾಳಮ್ಮ
ಹರುಷದಿ ತಿನ್ನಲು
ಮರಿಗಳುಕಾದಿರಲು

ಪಕ್ಕದ ಗೂಡಿನಲಿದ್ದ ಮರಿಯೊಂದು,
ಇಣುಕಿ ಇಣುಕಿ
ನೋಡಲುಆಸೆಯಿಂದ
ಆ ಮರಿಯನ್ನು
ನೋಡಿತು ತಾಯಮ್ಮ

ಚಕ್ಕನೆ ಹಾರಿತು
ಆ ಮರಿಯೆಡೆಗೆ
ಕೊಕ್ಕಿನಲಿ ಹಿಡಿದು
ಕಾಳುಗಳ ಆ ಗೂಡಿಗೆ
ನೀಡಿತು ಗುಟುಕು
ಪ್ರೀತಿಯಲಿ ಮರಿಗೆ.

ಮರಿಯೊಂದು
ಕೇಳಿತು ಕಾತುರದಿ
ಏಕೆ ಕೊಟ್ಟೆ ಅಮ್ಮ
ನಮ್ಮ ಕಾಳನ್ನು?
ಹಂಚಿ ತಿನ್ನಲು
ನಮಗೆ ಸುಖವಮ್ಮ

ಸರಿ. ಹಂಚಿ ತಿನ್ನಲು.
ಕಲಿಯೋಣ.
ನಾವು ಎಲ್ಲರೂ ಕೂಡಿ ನಲಿಯೋಣ
ಬನ್ನಿ ನಾವು ಕೂಡಿ
ಸಂತಸದಿ ಬಾಳೋಣ.

ನೀನು ಬಾರೆ
ನಮ್ಮೊಡನೆ.
ನಾವು ಇರುವೆವು
ಎಂದೂನಿನ್ನೊಡನೆ
ಪ್ರೀತಿಯ ಹಂಚುವ
ಜಗದೊಡನೆ.


Leave a Reply

Back To Top