ನಾಗರಾಜ ಜಿ. ಎನ್. ಬಾಡ ಕವಿತೆ-ಜೀವನ

ಹೆಜ್ಜೆಗೊಂದು ಕನಸಿದೆ
ಖುಷಿಯ ನೀಡಿದೆ ಜೀವನ
ನಾಳೆಗಳಲ್ಲಿ ಭರವಸೆ ಇದೆ
ಕ್ಷಣ ಕ್ಷಣವು ರೋಮಾಂಚನ

ಜಗದ ತುಂಬಾ ಸೊಗಸಿದೆ
ನೋಡುವ ರೀತಿ ಬದಲಾದರೆ
ಕಣ್ಣಿನಲ್ಲಿ ಹೊಳಪಿದೆ
ಮನದ ತುಂಬಾ ನಲಿವಿರೆ

ನಮ್ಮ ಪಯಣ ಸಾಗಿದೆ
ತಲುಪಬೇಕಾದ ಗುರಿಯ ಅರಿವಿದೆ
ಕಣ್ಣಿನಲ್ಲಿ ಭರವಸೆಯ ಬೆಳಕಿದೆ
ಹೊಸ ಸಾಹಸದ ಸಾಧನೆಗೆ

ನೋವು ಕಲಿಸಿದೆ ಬದುಕಿಗೆ
ನೂರು ಪಾಠ
ಅಂತರಂಗವನ್ನು ಅರಳಿಸಿದೆ
ಸುಂದರ ನೋಟ

ನಿಲ್ಲದು ಬದುಕಿನ ಓಟ
ಇಲ್ಲಿ ಎಲ್ಲವೂ ಅವನು
ಆಡಿಸುವ ಆಟ
ನಮ್ಮದೇನಿದ್ದರೂ ಬರೀ ಪಾತ್ರ


Leave a Reply

Back To Top