ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ನನ್ನ ಪ್ರೇಮ ವಿರಹದಿ ನೋವಿನಲಿ ಕೊನೆ ಆಗಬೇಕೆ
ಹೃದಯವು ಮಧ್ಯದಿ ಬಿರುಕುಬಿಟ್ಟ ಮನೆ ಆಗಬೇಕೆ
ನಿರ್ಮಲ ಪ್ರೇಮದಿ ಕಾಮದ ಛಾಯೆ ಕಂಡಿತ್ತೇ ನಿನಗೆ
ನಾ ಯಾರಿಗೂ ಕಾಣದ ಕಾಡ ಬಾಳೆ ಗೊನೆ ಆಗಬೇಕೆ
ಎಕಾಯಕಿ ತಿರಸ್ಕಿಸಿದೆನೆಂದು ಅನುಕಂಪ ತೋರೆಯಾ
ನನ್ನೊಲವು ಟೊಳ್ಳುಕಾಳ ಜೋಳದ ತೆನೆ ಆಗಬೇಕೆ
ನನ್ನೊಂದು ತಪ್ಪ ನಡೆಯನು ಉದಾಹರಿಸಿ ತೋರ ಬಲ್ಲಯಾ
ನಾ ಚಂದ ಕುದಿಸಿ ತಣ್ಣಗಾದ ಹಾಲ ಕೆನೆ ಆಗಬೇಕೆ
ಕೃಷ್ಣಾ! ರುಕ್ಮಿಣಿ ಭಕ್ತಿಯಂಥ ನಿನ್ನೆಡೆಗೆ ಪ್ರೇಮ ನಂದು
ಬೇಡದ ಆಕಾಲೀಕ ಮಳೆ ಜಡಿಯಂತೆ ಸೋನೆ ಆಗಬೇಕೆ.
ಬಾಗೇಪಲ್ಲಿ