ಶಿವಮ್ಮ ಎಸ್ ಜಿ ಕೊಪ್ಪಳ ಮಕ್ಕಳ ಕವಿತೆ -ಕೊಡುಗೆ

ನಾವು ಮಕ್ಕಳು,
ಈ ನಾಡ ಪ್ರಜೆಗಳು.
ಅರಳುವ ಸುಂದರ.
ಕುಸುಮಗಳು.
ಎಲ್ಲರ ಮುದ್ದಿನ
ಕಂದರು ನಾವು,
ಸುಗಂಧ ಹರಡುವ
ಸುಮಗಳು ನಾವು.

ನಮಗಿದೆ ಮುಂದೆ
ಅಂದದ ಬಾಳು.
ನಮ್ಮಯ ಆಸೆಯ.
ಮಾಡಬೇಡಿ ಗೋಳು.
ಹರುಷದಿ ನಾವು
ವಿದ್ಯೆ ಕಲಿಯುವುವೆವು.
ನಿಮ್ಮೆಲ್ಲರಿಗಿಂತ
ಮುಂದೆ ಸಾಗುವೆವು.

ನಮ್ಮಯ ಲೋಕವು
ಬಲು ಅಂದ.
ಬೇಕಿಲ್ಲ ನಮಗೆ ಜಾತಿ
ಕುಲ ಬಂಧ.
ಚಿಣ್ಣರ ನಾಡಿನ
ಚಿಣ್ಣರು ನಾವು,
ಒಂದಾಗಿ ಸಾಧನೆ.
ಮಾಡುವೆವು.

ಕಡಿಯಬೇಡಿ ನೀವು.
ಮರಗಳನು,
ಪೋಲು ಮಾಡಿದಿರಿ,
ಜೀವ ಜಲವನ್ನು.
ಮರಗಳು, ಹಕ್ಕಿ
ಮರಿಗಳಿಗೆ ಆಸರ.
ಜಲವೇ ನಮಗೆಲ್ಲ
ಈ ಪರಿಸರದ ದೊಡ್ಡ ವರ.

ನಮಗೆ ಬೇಕು ನಿಮ್ಮ
ಪ್ರೀತಿ ವಿಶ್ವಾಸ.
ನೀವೇ ನಮ್ಮಯ
ಮಾದರಿ ಆದರ್ಶ.
ನಿಮ್ಮೊಲವ ಸಾರುವ.
ಬಾಲರು ನಾವು.
ಜಗವನು ಬೆಳಗಲು
ಸದಾ ತಯಾರು ನಾವು.

ಆಲಿಸಿ ನಮ್ಮಯ.
ಮನವಿಯನು.
ಪಾಲಿಸಿ ನಿಮ್ಮಯ
ಆದರ್ಶವನು.
ನಮಗೂ ಉಳಿಸಿ
ಶುಧ್ಧ ಗಾಳಿ ನೀರನು.
ಮರೆಯೆವು ಎಂದೂ
ನಿಮ್ಮ ಕೊಡುಗೆಯನು.

ನಿಮ್ಮಯ ಹೆಮ್ಮೆಯ
ಕುಡಿಗಳು ನಾವು.
ಒಳ್ಳೆಯವರಾಗಿ.
ಬದುಕುವೆವು ನಾವು.
ಚಂದದ ನಾಡನು
ಕಟ್ಟುವೆವು ನಾವು.
ಸುಂದರ ನಾಳೆಗಳ
ರೂವಾರಿಗಳು ನಾವು.


4 thoughts on “ಶಿವಮ್ಮ ಎಸ್ ಜಿ ಕೊಪ್ಪಳ ಮಕ್ಕಳ ಕವಿತೆ -ಕೊಡುಗೆ

  1. ಮಕ್ಕಳ ಕವಿತೆ ತುಂಬಾ ಚೆನ್ನಾಗಿದೆ ಮೇಡಮ್.
    ಮಸ್ತ..!!
    ಅನಸೂಯ ಜಹಗೀರದಾರ.

Leave a Reply

Back To Top