ಸವಿತಾ ದೇಶಮುಖ ಕವಿತೆ-ಸಂಬಂಧಗಳು

ಎನಿತು ಪೇಳಲಿ ಸಂಬಂಧಗಳ
ಕಥನವ…
ಬಂಧನದ ಬಂಧದಲಿ
ಸಿಲು- ಸಿಲುಕಿ ಓಲಾಡುತ್ತಿರುವ ಮನ-ಮನೆ- ಕುಟುಂಬಗಳ ಸಂಧಿ…
ಏರಿಳಿತ ಪಯಣದ ಬಂಧಿ..

ಇಷ್ಟ ಅನಿಷ್ಟ ಅಪರೂಪದ ರೂಪ,
ತನಗೆ ತಿಳಿದ ದಾಟಿಯಲಿ ಹೆಣೆಯುತ, ಇಳಿದಷ್ಟು ಆಳ, ಅರ್ಥೈಸಿದಷ್ಟು ಘನ‌ ಸಂಬಂಧ,
ಅರಿಯದಿದ್ದರೆ ನಿಂತ ನೀರು
ಕೊಳೆತು ನಾರುವ ನಾಲಿಗಳು…

ಅರ್ಥ- ಅಪಾರ್ಥಗಳ ಎಣಿಕೆಯ ಸಂಬಂಧ
ಆಕಾರ-ರೂಪ-ರೇಷೆ ಇಲ್ಲದ
ಎಲ್ಲೇ ಎಲ್ಲಾ ದಾಟಿ ನಿಂತು
ಹೋದಷ್ಟು ಎತ್ತರಕ್ಕೆ ಕೈಗೆ ಏಟುಕದ ಸಂಬಂಧ

ಸಂದ ಸುಸಂಬಂಧಗಳ ಬಂಧನ
ಉಳಿಸಿ ಬೆಳೆಸಿ ಓಲೈಸಿ
ದಿಟವ ಅರಿತು ಬಾಳಿದವನೇ ಪುಣ್ಯವಂತ
ತೆಲೆ‌ ಎತ್ತಿ ಬಾಳಿನ ಸಾರ್ಥಕ ಕಳೆಯು..

Leave a Reply

Back To Top