ಡಾ.ಡೋ.ನಾ.ವೆಂಕಟೇಶ ಕವಿತೆ-ಎರಡು ಮೊಗ್ಗುಗಳು

ತನ್ವಿ ಮರಿ ಈ ದಿನ ಕೇಳಿದಳು
ಅಜ್ಜಾ
ನನ್ನ ಬಗೆ ಏನು ಬರೆಯುವೆ
ಅಜ್ಜಾ

ನಾನಾಡಿದ ಸೀ ಸಾ ಬಗ್ಗೆ ಬರಿ
ನಾ ಮೆಚ್ಚಿದ ಕಥೆ ಬಗ್ಗೆ ಬರಿ ಮತ್ತು
ನನ್ನ ನಾಟ್ಯದ ಬಗ್ಗೆ ಬರಿ
ನಾ ರಚಿಸಿದ ಕಲೆಯ ಬಗ್ಗೆ ಬರಿ ಅಜ್ಜಾ
ನನ್ನ ಶಾಲೆ ಹೇಗಿತ್ತು
ನಾ ಹೋದ ಔಟಿಂಗ್ ಹೇಗಿತ್ತು
ನಾ ಹಾಡಿದ್ದ ಹಾಡು ಹೇಗಿತ್ತು-
ಹೇಳಜ್ಜ, ಕೇಳಿದಳು ತನ್ವಿ ಮರಿ
ಗುಂಡಮ್ಮ

ಏನೆಂದು ಬರೆಯಲಿ ಚಿನ್ನ
ಎಷ್ಟೆಂದು ಕವನಿಸಲಿ ನಿನ್ನ
ನೀ ಬಂಗಾರ ನೀ ಸಿಂಗಾರ
ನೀ ಬಿರು ಬಿಸಿಲಲ್ಲಿ ಸುರಿದ
ವರ್ಷಾಧಾರೆ
ನೀ ನಮ್ಮ ಜೀವನದ ಈ ಹಂತದ
ಮೈ ತುಂಬಿ ಬಂದ ಮರೀಚಿಕೆ!!

ತನ್ವೀ ಸೂಕ್ಷ್ಮ- ಸಂವೇದನೆ
ತನ್ವೀ ಲಕ್ಷ್ಮಿ , ತನ್ವೀ ದುರ್ಗೆ

ತನ್ವಿಯಜ್ಜ


ಮಿಷ್ಕ ಮರಿ ನೀ ಹೋದ ಮೇಲೆ ಇಲ್ಲಿಂದ ನಮ್ಮ ಬಾಳು ಬರೆ ಶುಷ್ಕ

ಬೆಳಗಿಂದ ರಾತ್ರಿ ಮಲಗುವ ತನಕ
ಅಜ್ಜನಿಗೆ ಹೇಳುತ್ತ ಹೇಳುತ್ತ-
ಅಜ್ಜ ನೀ ಹೇಳುವ ಕಥೆ ಅದ್ಭುತ-ನಿಜ್ಜ!

ನೀ ಹೇಳಿದ್ದ ನಾ ಮಾಡುವೆ.
ನಿನ್ನೊಡನೆ ಆಡುವೆ ಸ್ನೇಕ್ ಲ್ಯಾಡೆರ್
ಮತ್ತು ಲ್ಯೂಡೋ!
ಪಿಕ್ಷನರಿಯಲ್ಲಿ ನಾನೇ ಗೆದ್ದು ನಿನಗೆ
ಆಟ ಕಲಿಸಿದ್ದು ಹೇಗಿತ್ತು ಗೊತ್ತ?

ರೆಸ್ಟಾರೆಂಟ ಕಟ್ಟಿ ರುಚಿ ರುಚಿ ತಿಂಡಿ
ಬಡಿಸಿದ್ದು ಹೇಗಿತ್ತು ಹೇಳಜ್ಜ
ನೀ ತಿನ್ನಿಸಿದ ತಿನಿಸು
ತೋರಿಸಿದ ಕನಸು ನಾ
ನನಸು ಮಾಡುವೆ ಕೇಳಜ್ಜ
ಓ! ನನ್ನಜ್ಜ
ರಾತ್ತಿ ಮಲಗುವ ಮುನ್ನ
ಭಾರತ ರಾಮಾಯಣದ ಕಥೆಗಳು
ಮತ್ತೆ ಹೇಳಿದ “ರಾಮಾಸ್ಕಂದಂ” ಗಳು ಮತ್ತು
“ಸೀತಾ ತಾರ ಮಂಡೋದರಿಯರು”
ಮತ್ತು” ಎಲ್ಲಾರಿಗೂ ಗುಡ್ ನೈಟ್”ಗಳು ಚಿನ್ನ
ನಮ್ಮ ನನಸಲ್ಲೂ ನಾವ್ ಕಂಡ
ಸುಂದರ ಕನಸು ಚೆನ್ನ!

ನಿನ್ನೊಡನೆ ಮತ್ತೆ ಆಡುವ ಬಯಕೆ
ಮತ್ತೆ ಮತ್ತೆ ಮಾತನಾಡುವ ಬಯಕೆ
ಅನೂಚನ ಚಿನ್ನ
ಮಿಷ್ಕ

ಮಿಷ್ಕಳಜ್ಜ


2 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಎರಡು ಮೊಗ್ಗುಗಳು

  1. ನಿಮ್ಮ ಕವಿತೆ ಚೆನ್ನಾಗಿ ಮೂಡಿ ಬಂದಿದೆ. ಮೊಮ್ಮಕ್ಕಳು ತನ್ವಿ ಮತ್ತು ಮಿಷ್ಕಾ ಮೇಲಿನ ಪ್ರೀತಿ ಮತ್ತು ಅವರ ಜತೆಯಲ್ಲಿ ಕಳೆದ ಬಾಲ್ಯದ ತುಂಟಾಟಗಳನ್ನು ಚೆನ್ನಾಗಿ ವ್ಯಕ್ತ ಪಡಿಸಿದ್ದೀರಿ.
    ಧನ್ಯವಾದಗಳು.

Leave a Reply

Back To Top