ಕಾವ್ಯ ಸಂಗಾತಿ
ಲೀಲಾ ಗುರುರಾಜ್
ಕೆಸರಲಿರುವ ಕಮಲದಂತೆ
ಬಾಳಿನಲ್ಲಿ ಗುರಿ ಇರಬೇಕು
ನಮ್ಮ ಬೆನ್ನಿಂದೆ ಗುರುವೂ ಬೇಕು
ಆಗಲೇ ಗಮ್ಯ ತಲುಪುವುದು
ಈ ಮಾತು ಎಲ್ಲಾ ಕಾಲಕೂ ಗೊತ್ತಿಹುದು
ಎಲ್ಲರಿಗೂ ಒಂದೊಂದು ರೀತಿಯದು
ಸಾಧಿಸಲು ಅನೇಕ ಮಾರ್ಗ ಹಿಡಿವುದು
ಒಳ್ಳೆಯ ಕಾರ್ಯಕೆ ಫಲವೂ ಒಳ್ಳೆಯದು
ಕೆಟ್ಟ ನೀಚ ಕೆಲಸಕ್ಕೆ ತಕ್ಕಂತೆ ಶಾಸ್ತ್ರಿ ದೊರೆವುದು
ಇರಬೇಕು ಕೆಸರಲ್ಲಿರುವ ಕಮಲದಂತೆ
ಕಸ ಕೊಳೆ ಅಂಟಿದರೂ ಶುಭ್ರವಾಗಿರುವಂತೆ
ಏನೂ ಸೋಕಿಸಿಕೊಳ್ಳದೆ ಜಾರಿ ಹೋಗುವಂತೆ
ಆದರೂ ದೇವರಿಗೆ ಶ್ರೇಷ್ಠತೆಯ ಮೆರೆಯುವಂತೆ
ಸಮಾಜದಲಿ ನಾಲ್ಕು ಜನ ಮೆಚ್ಚುವ ಹಾಗಿದ್ದರೆ
ಕಷ್ಟ ನೋವಿನಲ್ಲಿ ಸಹಾನುಭೂತಿ ತೋರಿದರೆ
ಎಲ್ಲರೂ ಬಯಸಿ ನಮ್ಮನ್ನು ಹರಿಸಿದರೆ
ಅದೇ ಭಾಗ್ಯವಲ್ಲವೇ ಬಾಳಿ ತೋರಿಸಿದರೆ.
ಮಳೆಬಿಲ್ಲು ಲೀಲಾ ಗುರುರಾಜ್