ವ್ಯಾಸ ಜೋಶಿ ಅವರ ತನಗಗಳು

ಮೊದಲ ಕತ್ತಲಲ್ಲಿ
ನವಜೋಡಿ ಕಣ್ಣಲ್ಲಿ ,
ಮಿಂಚೊಂದು ಕಾಣಿಸಿತು
ಬಾಳು ಬೆಳಕಾಯಿತು.
**
ಧರಸಿದ ಉಡುಪು
ಹಾಸಿಗೆಯೂ ಹೊಸತು
ಒಬ್ಬರಿಗೊಬ್ಬರೂನು
ಇಂದೆಲ್ಲವೂ ಹೊಸತು.
*
ಇಬ್ಬರ ನಡುವಿನ
ಬಿಡಿಸದ ಬಂಧನ,
ತನು ಮನ ಗಳಿಗೆ
ಬಂಧನವೇ ಬಯಲು.
**
ಮಲ್ಲಿಗೆ ವಾಸನೆಗೆ
ಕರಗಿ ನೀರಾದಳು,
ತಂಪಾದ ಮಲ್ಲಿಗೆಯು
ಹೇಗಾಯಿತು ಬಿಸಿಯು!


ಸಂಗೀತ ಕಲಿಯದೆ
ಯುಗಳ ಗೀತೆಯಲಿ
ಆಲಾಪ, ತಾಳವಿತ್ತು
ರಂಜಿನಿ ರಾಗವಿತ್ತು.
**
ನಾನಾ ಹೂಗಳ ಹಸೆ
ಸುಗಂಧ ದ್ರವ್ಯ ಘ್ರಾಣ,
ನಿದ್ರೆ, ಪ್ರಜ್ಞೆ ಇಲ್ಲದೇ
ಬೆಳಗಾಯಿತುಕಾಣ.

————————-

Leave a Reply

Back To Top