ಸವಿತಾ ಮುದ್ಗಲ್ ಅವರ ಗಜಲ್

ಊರಲ್ಲಿ ಮೊದಲೆಲ್ಲ ತುಂಬಿರುತಿದ್ದವು ಕೆರೆಬಾವಿ ಎಲ್ಲೆಲ್ಲೂ ಸಂತೋಷದಲ್ಲಿ ಸಾಕಿ
ನೋಡಿ ಖುಷಿ ಪಡುತ್ತಿದ್ದೆ ಹೌದಲ್ಲವೆ ನನ್ನ ಬಾಲ್ಯದಲ್ಲಿ ಸಾಕಿ

ಜಾತಿಗೀತಿ ದೊಡ್ಡೋರು ಸಣ್ಣೋರು ಅನ್ನುವ ಮಾತಿರಲಿಲ್ಲ ಇಲ್ಲಿ
ಮೇಲು ಕೀಳು, ಧರ್ಮದ ತಿಕ್ಕಾಟ ಕಾಣಲಿಲ್ಲ ಕಣ್ಣಿನಲ್ಲಿ ಸಾಕಿ

ಓದುವ ಹಂಬಲ, ಹಸಿವಿನ ದಾಹವಿದ್ದರೂ ಕಷ್ಟವೆನಿಸಲಿಲ್ಲ ಬದುಕು
ಹೊಸಉಡುಪು,ಹೊಸಮನೆಯೆಂದು ಸುಖ ನೀಡಲಿಲ್ಲ ಈ ಜಗದಲ್ಲಿ ಸಾಕಿ

ಹಣದ ಜಂಜಾಟವಿದ್ದರೂ ದುಡಿಯುವೆವು ಎಂಬ ಛಲವಿತ್ತು
ಹಂಗಿಲ್ಲದೆ ಬದುಕು ಸಾಗಿಸುತ್ತಿರುವ ದಾರಿ ಸುಗುಮವಾಗಿತ್ತು ಈ ನೆಲದಲ್ಲಿ ಸಾಕಿ

ಹಬ್ಬ ಹರಿದಿನಗಳಲ್ಲಿ ಹೋಳಿಗೆ ಊಟ ರುಚಿಯಾಗಿರುತ್ತಿತ್ತು
ಆಡಂಬರ,ವೈಡೂರ್ಯಕೆ ಎಣೆ ಮಾಡಿಕೊಡಲಿಲ್ಲ ಯಾವತ್ತು ಈ ಮನದಲ್ಲಿ ಸಾಕಿ

ಬದುಕು ಸಾಗಿದಂತೆ ಬದಲಾವಣೆ ಆಗೋದು ನಿಜವಲ್ಲವೇ
ಸವಿ’ದಾರಿಗೆ ಬರುವ ಸಂಕಷ್ಟಗಳ ಎದುರಿಸಿ ನಡೆಯುವುದೇ ಜೀವನವಿಲ್ಲಿ ಸಾಕಿ


One thought on “ಸವಿತಾ ಮುದ್ಗಲ್ ಅವರ ಗಜಲ್

  1. ಮೊದಲ ಗಜಲ್ ಸಂಗಾತಿ ಯಲ್ಲಿ ಪ್ರಕಟಣೆ ಮಾಡಿದ ಮಧು ಸೂದನ್ sir ಹಾಗು ಬಳಗಕ್ಕೆ ವಂದನೆಗಳು

Leave a Reply

Back To Top