“ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿವಸ”ಮಾಧುರಿ ದೇಶಪಾಂಡೆ

ಜೂನ್ 2ನೇ ತಾರೀಖು ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಕಾರ್ಯಕರ್ತರು ಎಂದರೆ ತಮ್ಮ ದೇಹದ ವ್ಯಾಪಾರ ಮಾಡುವವರು  ಎಂಬದು ಆಡು ಭಾಷೆ, ಕೆಟ್ಟದಾಗಿ ವೇಶ್ಯೆಯರು ಎನ್ನುತ್ತಾರೆ

ಪುರಾತನ ಕಾಲದಿಂದಲೂ ಗಣಿಕಾ ಸ್ತ್ರೀ, ವೇಶ್ಯೆಯರ  ಮನೆ ಇರುತ್ತಿತ್ತು. ಹಣವನ್ನು ಪಡೆದು ರಾತ್ರಿ ಆಕೆಯ ಮನೆಯಲ್ಲಿ ಕಳೆದು ಬರುತ್ತಿದ್ದರು. ಸಮಾಜದಲ್ಲಿ ಅವರ ಬಗ್ಗೆ ಕೆಟ್ಟ ಅಭಿಪ್ರಾಯಗಳಿವೆ. ಆದರೆ ಎಲ್ಲರೂ ಕೂಡಾ ಬೇಕಾಗಿ ಬಯಸಿ  ವೇಶ್ಯಾ ವೃತ್ತಿ ಆರಿಸಿ ಕೊಂಡಿರುವುದಿಲ್ಲ. ಕೆಲವರು ಪರಂಪರೆಯಿಂದ ಆದರೆ ಕೆಲವರು ಅನಿವಾರ್ಯತೆ ಅಸಹಾಯಕತೆಯಿಂದ ಈ ವೃತ್ತಿಯಲ್ಲಿರುತ್ತಾರೆ. ಸಮಾಜದಲ್ಲಿ ಅವರನ್ನು ಉತ್ತಮ ಕೆಲಸಗಳಿಗೆ ಕರೆಯುವುದಿಲ್ಲ. ಮನೆಹಾಳು ಮಾಡುವವರು ಎಂಬ ಪಟ್ಟ ಕಟ್ಟಿ ದೂರ ಇಟ್ಟಿರುತ್ತಾರೆ.

ಆದರೆ ವಿಷಾದನೀಯ ವಿಷಯವೆಂದರೆ  ತಮ್ಮ ಮನೆಯ ಗಂಡಸರು ಹೋಗಿ ಬಂದರೂ ತಪ್ಪಿತಸ್ಥರು ಆ ಹೆಣ್ಣು ಮಕ್ಕಳೇ, ಇಂತಹ ಹೆಣ್ಣುಮಕ್ಕಳು 1975ರಲ್ಲಿ 100 ಜನ  ಲೈಂಗಿಕ ಕಾರ್ಯಕರ್ತೆಯರು ಚರ್ಚ್ ನಲ್ಲಿ ಹೋಗಿ ತಮಗೂ ತಮ್ಮ ಮಕ್ಕಳಿಗೂ ಉತ್ತಮ ಜೀವನ ನಡೆಸುವ ಅಧಿಕಾರ ಕೇಳಿದ ದಿನವನ್ನು “ಅಂತಾರಾಷ್ಟ್ರೀಯ ವೇಶ್ಯೆಯರ ದಿನ ” ಎಂದು ಆಚರಿಸಲು ಆರಂಭಿಸಿದರು

ಲೈಂಗಿಕ ಕಾರ್ಯಕರ್ತರ ಸಮಸ್ಯೆ ವಿಶ್ವ ವ್ಯಾಪಿಯಾಗಿದೆ. ಹಿಂದಿನ ಶತಮಾನದಲ್ಲಿ ಕೇವಲ ಹೆಣ್ಣು ಮಕ್ಕಳ ಸಮಸ್ಯೆಯಾಗಿದ್ದು ಇಂದು ಗಂಡು ವೇಶ್ಯೆಯರೂ ಇದ್ದಾರೆ. ನಾಲ್ಕರು ಜನರ ಜೊತೆಗೆ ಸಂಪರ್ಕ ಇಟ್ಟು ಕೊಳ್ಳಲು ಸಾಮಾನ್ಯ ಜೀವನ ನಡೆಸಲು ಅವಕಾಶ ಕೊಡುವುದಿಲ್ಲ ಇದು ದೊಡ್ಡ ಸಮಸ್ಯೆ, ವೇಶ್ಯೆಯರ ಹೆಣ್ಣು ಮಕ್ಕಳು ವೇಶ್ಯೆ ಅಥವಾ ಗಂಡು ಮಕ್ಕಳಾದರೆ ದಲ್ಲಾಳಿಗಳು ಎಂಬ ಕಾಲ ಇದ್ದಿತು. ಪಾಶ್ಚಾತ್ಯರಲ್ಲೂ ಇಂತಹದೇ ಶೋಷಣೆ ಕಾಣ ಬಹುದು   ಆದ್ದರಿಂದ ಅಸಮಾನತೆ ಬಿಟ್ಟು ಉತ್ತಮ ಜೀವನದ ಅವಕಾಶ  ಅವರಿಗೂ ಸಿಗಬೇಕು ಎಂಬ ಉದ್ದೇಶದಿಂದ ಇಂತಹ ದಿನಾಚರಣೆಯ ಆರಂಭವಾಯಿತು

ಇಂದಿನ ಸಭ್ಯ ಸಮಾಜ ಒಪ್ಪಿ ಕೊಳ್ಳಲೇ ಬೇಕಾದ ಕಟು ಸತ್ಯ ಎಂದರೆ ಈ ರೀತಿಯ ವೇಶ್ಯಾವಾಟಿಕೆ ಗಳಿಂದಲೇ ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗಿವೆ. ಇಲ್ಲದೇ ಹೋದಲ್ಲಿ ಬಹಳಷ್ಟು ದೊಡ್ಡ ಪ್ರಮಾಣದ ಅತ್ಯಾಚಾರಗಳು ನಡೆಯುತ್ತಿದ್ದವೇನೋ ಎನಿಸುತ್ತದೆ.

ಲೈಂಗಿಕ ಕಾರ್ಯಕರ್ತೆಯರು ಯಾವ ಕಾರಣಕ್ಕೆ ಇರಲಿ ಈ ವೃತ್ತಿಗೆ ಇಳಿದರೂ ಅವರಿಗೆ ಕೂಡಾ ಸಾಮಾನ್ಯ ಜನರಂತೆ ಬದುಕುವ ಹಕ್ಕಿದೆ. ಅವರಿಗೂ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಹೋರಾಟ ಬಹಳ ಹಿಂದಿನಿಂದಲೂ ನಡೆದು ಬಂದಿದೆ.

ಒಬ್ಬ ಜಾಗರೂಕ ಪ್ರಜೆಯಾಗಿ ನಾವುಗಳು ಲೈಂಗಿಕ ಕಾರ್ಯಕರ್ತೆಯರ  ಅವಹೇಳನ ಮಾಡದೇ ಅವರನ್ನು ಹೀಯಾಳಿಸದೇ ಇದ್ದರೆ ನಾವು ಅವರಿಗೆ ಅವರ ಜೀವನ ಸಾಮಾನ್ಯ ರೀತಿಯಲ್ಲಿ ನಡೆಸಲು ಬಿಟ್ಟು ಉಪಕಾರ ಮಾಡಬೇಕು.

3 thoughts on ““ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿವಸ”ಮಾಧುರಿ ದೇಶಪಾಂಡೆ

  1. ಈ ಭೂಮಿಯ ಮೇಲೆ ಎಲ್ಲರಿಗೂ ಅವರದೇ ಆದ ಬದುಕಿದೆ ಅದನ್ನು ಪ್ರಶ್ನಿಸುವ ಮೊದಲು ಅವರನ್ನು ಆ ಸ್ಥಿತಿಗೆ ತರಲು ಏನು ಕಾರಣ ಎಂದು ತಿಳಿದುಕೊಂಡರೆ ಒಳ್ಳೆಯದು. ಇಂಥ ಒಂದು ದಿನವನ್ನು ಆಚರಿಸುವ ಬಗ್ಗೆ ಗೊತ್ತಿರಲಿಲ್ಲ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
    ಎಚ್.ಮಂಜುಳಾ,ಹರಿಹರ.

  2. ಉತ್ತಮ ಮಾಹಿತಿಯಿದೆ ತಮ್ಮ ಲೇಖನದಲ್ಲಿ.

    ಶುಭಲಕ್ಷ್ಮಿ ನಾಯಕ

Leave a Reply

Back To Top