ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ ಕವಿತೆ-
ಮುಗ್ದತೆ
ಈ ಬಣ್ಣಗಳಲ್ಲಿ ಅದೆಷ್ಟು
ಮುಗ್ಧತೆ ಮಗುವಿನಂತೆ
ಒಂದೊಂದು ಒಂದು ಬಣ್ಣ
ಸಿಂಗರಿಸಿ ನಿಂತರೂ
ಅದೇ ಕೌತುಕ ಮನಕೆ
ಮೌನದಲ್ಲೂ ಚಂದ ಮಾತು
ಮತ್ತೆ ಮೌನದ ಪರಿಭಾಷೆಯಲ್ಲಿ
ವ್ಯಕ್ತವಾದ ಅವ್ಯಕ್ತತೆ
ಜೀವವಿಲ್ಲ ಬಣ್ಣಕ್ಕೆ
ಆದರೆ ಜೀವಂತಿಕೆ ತುಂಬಿ
ಬದುಕುವ ನಗು ಅದು
ಹಮ್ಮು ಬಿಮ್ಮು ಒಂದೂ ಇಲ್ಲ
ಮಾಸದ ಮುಗುಳು ನಗು
ಸಂತಸದ ಹೂವಂತೆ
ಎಷ್ಟು ಬಣ್ಣಗಳು ಲೋಕದಿ
ಚಿತ್ತಾರ ಚೆಲ್ಲಿದಲ್ಲಿ
ಬಣ್ಣದ ಬುವಿಯಲ್ಲಿ
ಮಣ್ಣ ಕಣದ ಅಂತರ್ಯದಲ್ಲಿ
ಭರವಸೆ ಮಾತ್ರ ಸೂಚಕ
ಮತ್ತೆ ಮೌನ ತುಂಬಿದ
ಸಹಜತೆ ಜೀವಂತಿಕೆ…….
ನಾಗರಾಜ ಬಿ.ನಾಯ್ಕ
ಮುಗ್ದತೆ ಎನ್ನುವುದು ಮಗುವಿನ ಪ್ರತಿಕ. ಮಗುವಿನ ಮನಸ್ಸಿನಲ್ಲಿ ಯಾವುದೇ ಕಪಟತೆ ಇರುವುದಿಲ್ಲ. ಬಣ್ಣಕ್ಕೆ ಜೀವವಿಲ್ಲ.. ನೋಡುವ ಕಣ್ಣಿಗೆ ಜೀವಂತಿಕೆಯನ್ನು ನೀಡುತ್ತದೆ. ಮೌನ.., ಮೌನದೊಳಗಿನ ಮಾತು ನಮ್ಮನ್ನು ಸೆಳೆಯುತ್ತದೆ. ಕವಿತೆಯ ಆಂತರ್ಯ ಸುಂದರವಾಗಿದೆ.
ನಾನಾ
ಧನ್ಯವಾದಗಳು ತಮ್ಮ ಓದಿಗೆ