ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಪ್ರಜ್ವಲನ
ಅವಮಾನ ಹೇರಲಿ ಧೀರ ಹೆಜ್ಜೆಗಳಿರಲಿ
ನಿರ್ವಾಣ ದೀಕ್ಷೆಯಲಿ ನಿರ್ವಾತ ಸಂಧಿಯಲಿ
ಉತ್ಕಟ ಕ್ಷಣಗಳಲಿ ಜೀವನ ಸಮರದಲಿ
ಭ್ರಮೆಯ ಭುವಿಸಾಲಲ್ಲಿ ದಿಗ್ಭ್ರಮೆಯ ದಿಬ್ಬದಲಿ
ಹೊಂಚುಗಳ ಸಂಚಿನಲಿ ಭ್ರಷ್ಟತೆಯ ಬುಗ್ಗೆಯಲಿ
ನಿರ್ಮಿತ್ರನಿರಲು ಕಲಿ ಕಿಂಚಿತ್ತು ಪಯಣದಲಿ
ಭವ್ಯತೆಯ ಭಾವದಲಿ ಸಾಗು ನೀ ತೀರದಲಿ
ಸರ್ವರ ಒಲವಿನಲಿ ನಿನ್ನದು ಪಾಲಿರಲಿ
ಬಂದದ್ದು ಬರಲಿ ಹೋದದ್ದು ಹೋಗಲಿ
ಧರ್ಮನಿಷ್ಠೆಯಲಿ ಆತ್ಮಪ್ರತಿಬಿಂಬ ಕಾಣಲಿ
ಬಾನ ವಿಸ್ತಾರದಲಿ ಕೋಲ್ಮಿಂಚು ಹರಿಯಲಿ
ಪ್ರೀತಿ ವಿಶ್ವಾಸಗಳ ಮಳೆ ಸುರಿಯಲಿ; ಅಂಧತೆಯ ಪ್ರಕ್ಷೋಪ ಕೊನೆಗಾಣಲಿ
ಎಲ್ಲೆಡೆಯೂ ಮಂದಹಾಸದ ತಂಪೆರೆಯಲಿ; ಕೋಟಿಕಿರಣಗಳು ತುಸು ಬೆಚ್ಚಗಿರಲಿ
ಧರೆಯ ಮಡಿಲಲಿ ದಿವ್ಯತೆಯ ಪ್ರಜ್ವಲನವಾಗಲಿ
ಶಾಲಿನಿ ಕೆಮ್ಮಣ್ಣು
ಅದ್ಭುತ ಕವನದ ಸಾಲುಗಳೂ
Sripad Algudkar ✍️
ಪುಣೆ