ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ
ನನ್ನ ಬುದ್ದನ ಹುಟ್ಟಿದ ದಿನ
ದಿನ ತಿಥಿ ನಕ್ಷತ್ರ
ಒಂದೇ
ಆದರೂ ಆಗಲಿಲ್ಲ ನಾ
ಬುದ್ಧ.
ಆಸೆ ಬಿಡಲಿಲ್ಲ
ಮೋಹ ತೊರೆಯಲ್ಲ
ಮೋಸ ಮುಂದುವರಿಸದೆ ಇರಲಿಲ್ಲ .
ಹೇಗೆ ಆಗಲಿ ನಾನೂ ಒಬ್ಬ ಬುದ್ಧ!
ತಂದೆ
ನೀನು ಆಗಿ
ಹೋಗಿದ್ದು
ಸಹಸ್ರಾರು ಸಂವತ್ಸರಗಳ
ಹಿಂದೆ.
ಕಾಲ ಬದಲಿದೆ ಈಗ
ಸ್ವಾರ್ಥಿ ಮನವೀಗ ಕಲುಷಿತವಾಗಿದೆ
ನಿನ್ನ
“ಆಸೆಯೇ ದುಃಖಕ್ಕೆ ಮೂಲ”
ಈಗ
ನೀತಿ ಪಾಠದಲ್ಲಷ್ಟೆ ಮೂಲ
ನಿನ್ನ
ರಾಜ್ಯ ಕೋಶ ಸಂಸಾರ
ತೊರೆವ ಮನಸ್ಥಿತಿ,
ನಿನ್ನ ದೇಶ ದೇಹಗಳ ಮೀರಿ
ಮುಕ್ತಿ ಹೊಂದುವ ಧಾಟಿ
ಈಗೆಲ್ಲ ವರ್ಜ್ಯ !
ತ್ಯಾಜ್ಯ ಈಗೆಲ್ಲ ನಿನ್ನ
ಸಾಧನೆ ಸಂಕೀರ್ತನೆ
ಉಪದೇಶ ಪರಿವರ್ತನೆ
ಈಗ
“ಆಸೆಯೇ ಸುಖದ ಮೂಲ”
ಗುರಿ
“ಧನವೇ ಸುಖದ ಮೂಲ “
ಎಂದೇ ನನ್ನ
ಹುಟ್ಟಿದ ದಿನ
ತಿಥಿ ಘಳಿಗೆ ಕಾಲ
ನಿನ್ನದೇ ಆದರೂ
ಕಾಲ ಬದಲಾಯಿಸಿದೆ
ಕಾಲ ಚಕ್ರನ ಓಘ!
ಕಾಲಾಯ ತಸ್ಮೈನಮಃ
ಡಾ ಡೋ.ನಾ.ವೆಂಕಟೇಶ
happy Buddha jayanthi birthday to you
ಬುದ್ಧ ಬಸವ ಅಂಬೇಡ್ಕರ ಬಂದು ಹರಿಸಿ ಹೋದರು
ನಾವು ಸ್ಮರಿಸಿ ಕೊಂಡರೂ ಇಲ್ಲ ತತ್ವಾಚರಣೆ
ಮತ್ತದೇ ಖಾಲಿ ಡಬ್ಬಿ ಸದ್ದು
ಅಶೋಕ್ ಹಂಪಣ್ಣವರ
ಸವದತ್ತಿ
ನಿಮ್ಮ ಭಾವನೆಗಳನ್ನು
ಸುಂದರವಾಗಿ ವ್ಯಕ್ತಪಡಿಸಿದ್ದೀರಿ.
ಕವಿತೆ ಪ್ರಭಾವಶಾಲಿಯಾಗಿದೆ.