ಕಾವ್ಯ ಸಂಗಾತಿ
ಡಾ ಶಾರದಾಮಣಿ ಹುನಶಾಳ
ಶುಭೋದಯ
ಶುಭ್ರ ಆಕಾಶಕ್ಕೆ
ರವಿ ಕಿರಣ
ಸುವರ್ಣ ಸಿಂಚನ
ಮಾಡುವಂತೆ..
ಕವಿಯ ಲೇಖನಿ
ಹೊಸ ಪದಗಳ
ಗಮಕ ಹಾಡುವಂತೆ..
ಚಿಲಿಪಿಲಿಗಳ ಕಲರಗಳ
ಇಂಪಂತೆ..
ಪಚ್ಚೆ ಪೈರಿನ ಹಚ್ಚ ಹಸಿರಿನ
ವನಸಿರಿಗೆ, ಶತಕೋಟಿ
ಜೀವಗಳ
ಪೊರೆವ ಅವನಿಗೆ
ಮಳೆ ಕಳೆತಂದಂತೆ..
ತರುಲತೆಯ ಮೇಲಿನ
ಇಬ್ಬನಿಯ
ಹನಿಯ ಹನಿಯಂತೆ
ಮುದ್ದಾಗಿರಲಿ
ದಿನವೆನುತ,
ಹಾರೈಸುವೆ ನಿಮಗೆ
ಶುಭ ವಾಗಲೆಂದು .
ಶುಭೋದಯ.
ನನ್ನ ಭಾವ ಜೀವಕೆ
ಡಾ ಶಾರದಾಮಣಿ ಹುನಶಾಳ
ಮೇಡಂ ನಿಮ್ಮ ಶುಭೋದಯದ ಹಾರೈಕೆ ಚೆನ್ನಾಗಿ ಮೂಡಿಬಂದಿದೆ
ಧನ್ಯವಾದ ಮೀನಾಕ್ಷಿ ಮೆಂ
ಶಾರದಾ ಕವಯಿತ್ರಿ ಸೂಕ್ಷ್ಮ ಸಂವೇದನಾ ಶೀಲ ಮನಸ್ಸು ವುಳ್ಳವರು…ತಂತ್ರಜ್ಞಾನ ದ ಭರಾಟೆಯಲ್ಲಿ ಕೃತ್ರಿಮ ಜಗತ್ತು ವಿದಾಯ ಹೇಳಿ ನಿಸರ್ಗ ಚೆಲುವು ಉಳಿಸಿ ಸವಿಯುವ ಕಳಕಳಿಯಿದೆ.
ಡಾ ಕಸ್ತೂರಿ ದಳವಾಯಿ. ಗದಗ
ಧನ್ಯವಾದ ಕಸ್ತೂರಿ ಮೆಂ