“ವಿಶ್ವ ತಾಯಂದಿರ ದಿನ”ಮಾಧುರಿ ದೇಶಪಾಂಡೆ ಅವರ ಲೇಖನ

ದಿನ ನಿತ್ಯವೂ ತಾಯಂದಿರ ದಿನವೇ. ಮುಂಜಾನೆಯಿಂದ ರಾತ್ರಿಯವರೆಗೂ ಹುಟ್ಟಿನಿಂದ ಸಾವಿನವರೆಗೂ ತನ್ನ ಮಕ್ಳಿಗಾಗಿ ಮಿಡಿಯುವ ಜೀವ ತಾಯಿ. ನಾವು ಭೂಮಿಯನ್ನು ತಾಯಿ ಎನ್ನುತ್ತೇವೆ, ನದೀಯನ್ನು ಪ್ರಕೃತಿಯನ್ನು ಕೂಡ ಮಾತೆ ಎನ್ನುತ್ತೇವೆ ಏಕೆಂದರೆ ನಿಸ್ವಾರ್ಥದಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ನೀಡುವವಳು ತಾಯಿ ಮಾತ್ರ. ತಾಯಿಯ ಮಹತ್ವ ಮತ್ತು ಬೆಲೆ ಇರುವವರಿಗೆ ತಿಳಿದಿರುವುದಿಲ್ಲ ತಿಳಿಯುವ ಹೊತ್ತಿಗೆ ಕಳೆದು ಕೊಳ್ಳವವರೇ ಪ್ರಪಂಚದಲ್ಲಿ ಹೆಚ್ಚು.

ಭಾರತೀಯ ಸಂಸ್ಕೃತಿಯಲ್ಲಿ ಮುಂಜಾನೆ ಎದ್ದು ತಾಯಿಗೆ ನಮಸ್ಕರಿಸಬೇಕೆಂದು ಇದೆ. ತಾಯಿಯನ್ನು ಪ್ರತ್ಯಕ್ಷ ದೇವರು ಎಂದು ಕೂಡ ಪೂಜಿಸುತ್ತೇವೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ತಾಯಿಯನ್ನು ನೆನಯಲು ಒಂದೇ ದಿನ ನಮ್ಮಲ್ಲಿ ಪ್ರತಿದಿನವೂ ತಾಯಿಯರ ದಿನವೇ . ಹಬ್ಬ ಹರಿದಿನ ಯಾವುದೇ ಇರಲಿ ಹೆಣ್ಣು ಗಂಡ ಮತ್ತು ಮಕ್ಕಳ ಆಯುಷ್ಯ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾಳೆ. ಸ್ವಾರ್ಥ ಬಿಟ್ಟು ತನ್ನ ಮಕ್ಕಳಿಗಾಗಿ ಬದುಕುವ, ತನ್ನವರಿಗಾಗಿ ತನ್ನನ್ನು ತಾನು ಸವೆಸಿಕೊಳ್ಳುವ ಹೆಣ್ಣು ತಾಯಿ. ಮಕ್ಕಳನ್ನು ಹೆತ್ತವರು ಮಾತ್ರ ತಾಯಂದಿರಲ್ಲ ಮಾತೃ ಹೃದಯ ಇರುವವರೆಲ್ಲರೂ ತಾಯಂದಿರು.

ನಮ್ಮ ತಂದೆ ಸದಾ ನನ್ನ ಮಕ್ಕಳಿಗೆ ಒಂದು ಕತೆ ಹೇಳುತ್ತಾರೆ. ಒಂದು ರಜ್ಯದಲ್ಲಿ ರಾಜನಿಗೆ ಒಬ್ಬ ಮಗ 5 ರಾಣಿಯರಿದ್ದರು ಎಲ್ಲರೂ ಪ್ರೀತಿ ಮಾಡುತ್ತಿದ್ದರು. ಅವನಿಗೆ ತನ್ನ ಸ್ವಂತ ತಾಯಿ ಯಾರೆಂದು ತಿಳಿಯಲಿಲ್ಲ ಗುರುಗಳಿಗೆ ಕೇಳಿದಾಗ ಅನವಶ್ಯಕ ಹಠ ಮಾಡು ಯಾರು ನಿನಗೆ ಹೊಡೆದು ಕರೆದು ಕೊಂಡು ಹೋಗುತ್ತಾಳೆಯೋ ಅವಳೇ ನಿನ್ನ ತಾಯಿ ” ಎಂದು ಹೇಳಿದರಂತೆ. ನನ್ನ ಮಕ್ಕಳು ನಾನು ಬೈದು ಶಿಕ್ಷಿಸಿದಾಗ ಬೇಸರ ಮಾಡಿಕೊಂಡಾಗಲೊಮ್ಮೆ ಈ ಕಥೆಯನ್ನು ಹೇಳುತ್ತಾರೆ.

ತಾಯಿಗೆ ಮಕ್ಕಳು ತನ್ನನ್ನು ಪ್ರೀತಿ ಮಾಡಲೇ ಬೇಕೆಂಬ ಹಂಬಲ ಇರುವುದಿಲ್ಲ ಆದರೆ ತನ್ನ ಮಕ್ಕಳು ಸರಿದಾರಿಯಲ್ಲಿ ನಡೆಯುವ ಸತ್‌ಪ್ರ ಜೆಯಾಗಿ ಬಾಳಬೇಕು. ಉತ್ತಮ ಹೆಸರು ಮಾಡಬೇಕು ಎಂಬುದಾಗಿಯೇ ಇರುತ್ತದೆ. ಅಂತಹವಳೇ ನಿಜವಾದ ತಾಯಿ. ತನ್ನ ಕರ್ತವ್ಯ ಮಾಡುತ್ತಾ ಮಕ್ಕಳಿಗೆ ಅವರ ಕರ್ತವ್ಯವನ್ನು ಕಲಿಸುವವಳೇ ತಾಯಿ. ಊಟಕ್ಕೆ ಹಾಕಿ ಪ್ರೀತಿ ಮಾಡುವಾಗ ಇತರರ ಮಕ್ಕಳನ್ನು ತನ್ನ ಮಕ್ಕಳೆಂದು ಪ್ರೀತಿಸುವವಳು ತಾಯಿ. ಆದರೆ ಬೇರೆಯವರ ಮಕ್ಕಳಿಗೆ ಪ್ರೀತಿ ವಿಶ್ವಾಸ ಮಾಡುವ ಅಧಿಕಾರ ಇರುತ್ತದೆ. ನಮ್ಮನ್ನು ತಾಯಿಯಂತೆಯೇ ಪ್ರೀತಿ ಅಥವಾ ಕರ್ತವ್ಯ ಮಾಡಿರಿ ಎಂದು ಹೇಳುವ ಅಧಿಕಾರ ನಮಗೆ ಇರುವುದಿಲ್ಲ ಹೀಗಾಗಿ ಎಲ್ಲರಿಗೂ ಒಂದೇ ಆದರು ಸ್ವಂತ ಮಗುವಿರಬೇಕೆಂಬ ಹಂಬಲ ಇರುತ್ತದೆ.

ತಾಯಿ ಮಕ್ಕಳಲ್ಲಿ ತನ್ನ ಪ್ರತಿರೂಪವನ್ನು ಕಾಣುತ್ತಾಳೆ ಉತ್ತಮ ಗುಣಗಳನ್ನು ಬೆಳೆಸಲು ಬಯಸುತ್ತಾಳೆ. ಅಂತಹ ಯಾವುದೇ ಸ್ವಾರ್ಥವೆಲ್ಲದೇ ತನ್ನ ಜೀವವನ್ನು ಮುಡುಪಾಗಿಡುವ ತಾಯಿಯಂದಿರಿಗೆ “ವಿಶ್ವ ತಾಯಂದಿರ ದಿನ”ದ ಶುಭಾಶಯಗಳು


Leave a Reply

Back To Top