ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಇರುವಿಕೆ
ಅರಿವಾದ ಮಾತು
ತಿಳಿಯಾದ ಉಳಿಕೆ
ಬದುಕು ಭರವಸೆ
ಮಾತಲ್ಲಿ ಇರುವಿಕೆ
ನಗು ದಿನದ ಸಂತಸ
ಮೌನ ಮನದ ಕೌತುಕ
ಒಲವು ಹಲವು
ಪ್ರೀತಿ ಇರುವಲ್ಲಿ ಗೆಲುವು
ಹಸಿರ ನೆರಳಲ್ಲಿ ತಂಪಿನ
ಉಳಿವಿನ ಸೊಬಗು
ಮಣ್ಣ ಕಣಕಣದಿ
ಜೀವ ಭಾವದ ಬೆಳಗು
ಮುಗ್ಧತೆ ನಾಳೆಯ ಜೊತೆ
ಸ್ವಾಭಿಮಾನ ಬದುಕಿನ ಕತೆ
ಅನುಭವ ಸತ್ಯದ ಒರತೆ
ಜೀವಿತ ನಮ್ಮದೇ ಚರಿತೆ
ಕೂಡಿರುವ ಛಾಯೆ
ಬದುಕೊಲವ ಮಾಯೆ
ಸಂತಸ ಕ್ಷಣವ ಕಾಯೆ
ಬುವಿ ಪ್ರೀತಿಯ ತಾಯೆ
ನಾಗರಾಜ ಬಿ.ನಾಯ್ಕ