ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ

ಬಿಸಿಲ ಕೆಂಡದ ಮೇಲೆ
ಥಖಥೈ ಹೆಜ್ಜೆಯ ಕುಣಿತ
ಬೆವರು ಮಜ್ಜನ
ಬಿಸಿಲುಘೆಯ ಧೂಪ
ಕೆಂಡದ್ಹೂಗಳ ಅರ್ಚನೆ
ಝಳದ ಗುಣಗಾನ
ತಂಗಾಳಿಗಾಗಿ ಪ್ರಾರ್ಥನೆ
ಸೂರ್ಯನಿಗೆ ಕೋರಿಕೆ
ತಣ್ಣಗಾಗಲು ಬೇಡಿಕೆ
ಇಲ್ಲ ಅವನಿಗೆ ಕರುಣೆ
ಬಂದಾಗಿದೆ ಅವನಿಯ ಸನಿಹಕೆ
ಅವಳಿಗಿದೆ ಸಹನೆ
ತಣ್ಣಗಾಗಿಸುವಳು
ಅವನ ಅಸಹನೆ

2 thoughts on “ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ

Leave a Reply

Back To Top