ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬತ್ತದಿರಲಿ ವರತಿ
ನನ್ನ ನಿನ್ನ ಸ್ನೇಹ ಪ್ರೀತಿಗೆ
ಮೂರು ವರುಷ ಥಳಕು
ನಿತ್ಯ ಪಯಣದ ಗಟ್ಟಿ ಹೆಜ್ಜೆ
ಮೂರು ದಶಕದ ಬೆಳಕು
ಎಲ್ಲವನ್ನು ಹಂಚಿಕೊಳ್ಳಲು
ಉಳಿದ ಭಾವ ಬುತ್ತಿ
ಕನಸು ಕಾವ್ಯ ಹೆಣೆದುಕೊಂಡವು
ತಂಪಾಯಿತು ಸುಡು ನೆತ್ತಿ
ನನಗೆ ನೀನು ನಿನಗೆ ನಾನು
ಒಲವು ಪ್ರೇಮ ಆನು ತಾನು
ಬದುಕ ದಾರಿ ದಿಣ್ಣೆಹತ್ತಿ
ಗೆಲ್ಲಬೇಕು ಜಗವ ಸುತ್ತಿ
ನಗೆ ನಲುಮೆ ಬಾಳ ಸ್ಫೂರ್ತಿ
ಸಾಗಬೇಕು ಸಮತೆ ಪ್ರೀತಿ
ಎಂದೂ ಬತ್ತದಿರಲಿ ವರತಿ
ಉಳಿದು ಬೆಳೆಯಲಿ ಪ್ರೇಮ ಕೀರ್ತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅತ್ಯುತ್ತಮ ಭಾವ
ಚೆನ್ನಾಗಿ ಮೂಡಿ ಬಂದಿದೆ ಸರ್
Excellent poem
Very beautiful
फार सुंदर काव्य रचना
Very beautiful poem
ನಿಜಕ್ಕೂ ತುಂಬಾ ಸುಂದರ ಕವನ ಸರ್
ಎಷ್ಟು ಚೆಂದ ಕವನ ಮೂಡಿ ಬಂದಿದೆ ಸರ್
ಚಂದದ ಕವನ ಸರ್
ನಿಮ್ಮ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್
ಕವನ ಚೆನ್ನಾಗಿ ಮೂಡಿ ಬಂದಿದೆ ಸರ್
ಭಾವ ಗೀತೆ ನಿಮ್ಮ ಕಾವ್ಯ
ಮೂರು ದಶಕದ ಬೆಳಕು ಎಂದೂ ಬತ್ತುವುದಿಲ್ಲ
ಸದಾಕಾಲ ಜಿನಗುತ್ತದೆ ನಿಮ್ಮ ಪ್ರೀತಿಯ ವರತೆ
ಅಕ್ಕಮ
ಭಾವ ಪೂರ್ಣ ಕವನ