ವ್ಯಾಸ ಜೋಶಿ ತನಗಗಳು

ಎಷ್ಟೊಂದು ಮಾತುಗಳು
ನಿನ್ನೊಡನೆ ಮಾತ್ರವೆ,
ನೀನಿಲ್ಲದಿರುವಾಗ
ಆಗಿರುವೆ ನಾ ಮೂಗ.
**
ಅರಳಿದ ಹೂವಿಗೆ
ಕೆರಳಿಸಿದ ದುಂಬಿ
ಗುಯ್ ಗುಟ್ಟಿ ಹೇಳಿತು
ಮಧುರವ ನೀಡೆಂದು.
*
ನಿರಿಗೆ ತಿದ್ದುವಿಕೆ
ಬಳಕುವ ನಡಿಗೆ
ಬಿಂಕು ಬಿನ್ನಾಣವೆಲ್ಲ
ಮದುವೆಯ ವರೆಗೆ.
**
ಹಾಲಿನಂಥ ಮನಸು
ಬೆಚ್ಚಗಿನ ಅಪ್ಪುಗೆ
ಪ್ರೀತಿಯು ಹೆಪ್ಪಾಗಿದೆ
ಒಲವಿಂದ ಮೆಚ್ಚುಗೆ.


ಶೋಭನ ಮರುದಿನ
ಮದುವಣಗಿತ್ತಿಯು
ಮಳೆಗೆ ಹದವಾದ
ಇಳೆಯಂತೆ ಕಂಡಳು.
**
ಪ್ರಸಾಧನ ಒಂದಿಂಚು
ಮದರಂಗಿ ಕೂದಲು
ಮರೆವಂತೆ ವಯಸ್ಸು
ನಿವೃತ್ತಿ ದಿನದಲ್ಲೂ.

——————

Leave a Reply

Back To Top