ಮಕ್ಕಳ ಸಂಗಾತಿ
ಮನ್ಸೂರ್ ಮುಲ್ಕಿ
ಅಜ್ಜಿ ಮನೆ
ಶಾಲೆಯ ರಜೆಯಲ್ಲಿ ಬಂದೆನು ನಾನು
ಅಜ್ಜಿಯ ಮನೆಗಿಂದು
ಮಾಮನು ಮನೆಯಲಿ ಇರಲು ನನಗೆ
ಸಿಹಿತಿಂಡಿಯ ಸುಖವಿಂದು
ಮನೆಯ ಬಳಿಯಲಿ ಇರುವ ಹೊಳೆಯಲಿ
ದೋಣಿಯ ಪಯಣವು ನನಗೆಂದು
ಅಜ್ಜಿಯ ದೋಸೆಯು ಖಾರದ ಚಟ್ನಿಯು
ಹೊಟ್ಟೆಯು ತುಂಬುದು ಎಂದೆಂದೂ
ಚಂದ್ರನ ಕಥೆಗಳು ಅಜ್ಜಿಯು ಹೇಳಲು
ಸುಖನಿದ್ದೆಯು ಬಂತಂದು
ಸಂಜೆಯ ಸವಾರಿ ಅಜ್ಜನ ಜೊತೆಗೆ
ಪೇಟೆಯ ಆಟಿಕೆ ನನಗಂದು
ಮನ್ಸೂರ್ ಮುಲ್ಕಿ