ಡಾ.ಮೀನಾಕ್ಷಿ ಪಾಟೀಲ್ ಕವಿತೆ-ಬಳಲುತಿದೆ ಭೂಮಿ

ಕಂಗೆಟ್ಟ ಭೂಮಿಗೆ
ತಂಪೆರೆಯಬೇಕಾಗಿದೆ
ಕೋಟಿ ಕೋಟಿ ಜನ
ಬದುಕಬೇಕಾಗಿದೆ
ಭೂಮಿ ಸುಡು ಸುಡು ಕೆಂಡವಾದರೆ
ತಾಯಿಯ ಹಾಲೆ ನಂಜಾದಂತೆ
ಇರುವುದು ಒಂದೇ ಭೂಮಿ
ಬೇರಿಲ್ಲ ಕಾಣಿರೋ ಸತ್ಯವ
ಚಂದ್ರನ ಮೇಲೆ ಇಳಿದಾಯಿತು.
ಬರಿ ಬರಡೋ ಬರಡು
ಮಂಗಳ ಗುರು ಶನಿಗಳನ್ನೆಲ್ಲ ಸುತ್ತಿ ಆಯಿತು
ಎಲ್ಲೆಲ್ಲೂ ಜೀವದ ಸುಳಿವಿಲ್ಲ
ಯಂತ್ರದೂತರು
ಸಕಲ ಗ್ರಹಗಳ ಸಂದೇಶವಿತ್ತರು
ಭೂಮಿಯಂತಹ ಸ್ವರ್ಗ ಮತ್ತೊಂದಿಲ್ಲ
ಜೀವರಾಶಿ ತುಂಬಿ ತುಳುಕುವ
ಧರೆಯನ್ನೀಗ ಕಾಪಿಟ್ಟುಕೊಳ್ಳಬೇಕು
ಜೀವದ ಉಸಿರಿಗೆ
ಜೀವ ಜಲ ಸಿಂಚನವಾಗಬೇಕು
ಓ ಮನುಜ ಅತಿರೇಕದ ಬುದ್ಧಿ ಬೇಡ
ಅತಿ ಆಧುನಿಕತೆಯ ಬೆನ್ನ ಹಿಂದೆ ಓಡಬೇಡ
ಎಲ್ಲಿಯಾದರೂ ಯಾವಾಗಲಾದರೂ
ಎಡವಿ ಬಿದ್ದೆನೆಂಬ ಎಚ್ಚರವಿರಲಿ
ಕಾಡು ಬೆಳೆಸಬೇಕಿದೆ
ಶಕ್ತಿಮೂಲಗಳ ದುರ್ಬಳಕೆ ನಿಲ್ಲಿಸಬೇಕಿದೆ
ಭೂಮಿಗೆ ಭಾರವಾಗುವ ಪದಾರ್ಥಗಳನ್ನ ತ್ಯಜಿಸಬೇಕಿದೆ ವಿಜ್ಞಾನ ತಂತ್ರಜ್ಞಾನದ ಹೆಸರಿನಲ್ಲಿ
ಭಯಾನಕ ಭವಿಷ್ಯವನ್ನು
ಕಟ್ಟ ಹೊರಟಿದ್ದೇವೆ
ತಂತ್ರಜ್ಞಾನ ಮಂಡಿಯೂರಿದೆ
ಅಣುಯುದ್ಧ ಬರಗಾಲ ದುಃಖ ದಾರಿದ್ರ್ಯ
ಜನರ ಕಣ್ಣಲ್ಲಿ ಕಣ್ಣೀರಲ್ಲ ನೆತ್ತರು
ಜೀವಸಮತೋಲನವಿರಲಿ
ಪ್ರಗತಿ ಇರಲಿ
ಮಾರಕವಾಗದಂತಿರಲಿ
ಮಾರ್ಗ ಬದಲಿಸೋಣ
ವಿಚಾರಗಳು ಬದಲಾದಂತೆ
ಜಗದ ಜೀವ ಸಂಕುಲ
ಉಳಿಯಬೇಕು
ಭೂಮಿ ತಾಯಿಯ ಒಡಲು
ತಣ್ಣಗಾಗಬೇಕು

——————————————————–

2 thoughts on “ಡಾ.ಮೀನಾಕ್ಷಿ ಪಾಟೀಲ್ ಕವಿತೆ-ಬಳಲುತಿದೆ ಭೂಮಿ

Leave a Reply

Back To Top