ಮೌನದ ಹಿಂದೆ
ಹೇಳಲಾರದ
ಅಗಾಧ ನೋವಿದೆ
ನಲಿವಿನ ಹಿಂದೆ ಕಾಣದ
ಪರಿಶ್ರಮವು ಅಡಗಿದೆ
ಏನೇ ಆದರೂ ಕಣ್ಣ ತುಂಬ
ಕರಗದ ಕನಸಿದೆ
ಸೋಲಿಗೂ ಕೊನೆಯಿದೆ
ಗೆಲುವಿಗೂ ಮಿತಿಯಿದೆ
ಬದುಕಿಗೆ ಅದರದೇ ಸೊಗಸಿದೆ
ಅರಿಯ ಬೇಕಿದೆ
ಬೆರೆಯ ಬೇಕಿದೆ
ನೋವಿನಾಚೆಗೆ ಸುಂದರ
ಬದುಕಿದೆ
ಗೆಲುವು ನಿನಗೆ ಕಾದಿದೆ
ಕಣ್ಣೀರಿಗೆ ಕೊನೆಯಿದೆ
ಪ್ರತಿ ಬದುಕಿಗೂ ಇಲ್ಲಿ
ಬೆಲೆ ಇದೆ
ನೆಲೆ ಇದೆ
ಬೇವ ತಿಂದ
ನಿನ್ನದೇ ಜೀವ
ಗೆಲುವ ಸವಿಯ
ಬೇಕಿದೆ
ನಿನ್ನದೇ ನೋವ
ನೀನೇ ದಾಟಿ
ಮುಂದೆ ಸಾಗಬೇಕಿದೆ
ಕನಸು ಕರಗುವ
ಮುನ್ನವೇ
ಗುರಿಯ ಸೇರಬೇಕಿದೆ.


One thought on “

  1. ಪ್ರತಿ ಬದುಕಿಗೂ ಯಾರೂ ಗುರುತಿಸದ ಮೌನ ಸಾಲುಗಳ ಹೊದಿಕೆ ಯಾವಾಗಲೂ ಇರುತ್ತದೆ. ನೋವೆಂಬ ಅಪರಿಚಿತ ಪರಿಚಿತನಂತೆ ಅಡಗಿ ಕುಳಿತಿರುತ್ತಾನೆ. ಏನಿದ್ದರೂ ನಲಿವು ಇದ್ದರೆ ಬದುಕು ಭರವಸೆಯಾಗುತ್ತದೆ. ಸೋಲು ಗೆಲುವಾಗುತ್ತದೆ. ಶ್ರಮ ಪರಿಶ್ರಮವಾಗಿ ಬದಲಾದರೆ ಯಶದ ದಾರಿ ಸುಲಭ ಮತ್ತು ಆಪ್ತವಾಗುತ್ತದೆ. ಜೀವನ ಇಷ್ಟವಾದರೆ ಬದುಕು ಪರಮಾಪ್ತ. ಪ್ರತಿ ಗೆಲುವೊಂದು ನಗುವಾಗಿ ಉಳಿದರೆ ಬಾಳು ಸುಂದರ ಎನ್ನುವ ಸಾಲುಗಳು ಕವನದ ಸೂಕ್ಷ್ಮತೆ ಎನಿಸುತ್ತದೆ……..ಚೆಂದಾಗಿದೆ……ಕವನ

    ನಾಗರಾಜ ಬಿ.ನಾಯ್ಕ.
    ಹುಬ್ಬಣಗೇರಿ.
    ಕುಮಟಾ.
    .

Leave a Reply

Back To Top