ಅರುಣಾ ನರೇಂದ್ರ ಅವರ ತರಹಿ ಗಜಲ್

ಕನಸುಗಳ ಕಡ ಕೇಳಬೇಡ ಡಾಲಿ ನಾನದರ ಗಾಯಗಳ ಹೆಕ್ಕುತ್ತಿರುವೆ
ಹೃದಯದ ಮಾತಾಡಬೇಡ ಡಾಲಿ ನಾನದರ ಚೂರುಗಳ ಹೆಕ್ಕುತ್ತಿರುವೆ

ನೋವು ನಿರಾಸೆಗಳಿಗೆ ಹಣೆಯ ಬರಹವೇ ಹೊಣೆ ಆಗಬೇಕೇನು
ಮನಸ್ಸಿನ ಬೆನ್ನು ಹತ್ತಬೇಡ ಡಾಲಿ ನಾನದರ ಭಾವಗಳ ಹೆಕ್ಕುತ್ತಿರುವೆ

ಬೇಲಿಯ ಮೇಲೆ ಅರಳಿದರೂ ಬೆರಗುಗೊಳಿಸುವ ಹೂವಾಗಬೇಕು
ಮಾತಿಗೆ ಸೋತು ಹೋಗಬೇಡ ಡಾಲಿ ನಾನದರ ಮೌನಗಳ ಹೆಕ್ಕುತ್ತಿರುವೆ

ತೊಟ್ಟು ಕಳಚಿದ ಎಲೆ ಗಿಡಕೆ ಗೊಬ್ಬರವಾಗಿ ಬಂಧ ಬೆಸೆಯುತ್ತದೆ
ಕರುಳ ಕೊರಗಿಸಬೇಡ ಡಾಲಿ ನಾನಾದರೆ ಸಿಕ್ಕುಗಳ ಹೆಕ್ಕುತ್ತಿರುವೆ

ಸೋಲಿನ ಭಯ ಮೆಟ್ಟಿನಿಂತ ಅರುಣಾ ಗೆಲುವೇ ತಾನಾಗಿದ್ದಾಳೆ
ಹಸಿವು ನೆನಪಿಸಡಬೇಡ ಡಾಲಿ ನಾನದರ ಬಾಧೆಗಳ ಹೆಕ್ಕುತ್ತಿರುವೆ

——————————-

Leave a Reply

Back To Top