ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ನನ್ನ ನಾ ಕಂಡಂತೆ
ಎನ್ನೊಳಗೆ ಆಗಾಗ ಮಿಂಚoತೆ ಸಂಚರಿಸಿ
ಒಳಗಿದ್ದ ತುಮುಲಕ್ಕೆ ಇಂಬನ್ನು ನೀಡಿತ್ತು
ಬಿಳಿಹಾಳೆ ತೆರೆಯುತ್ತ ನನ್ನೆದುರು ಇರಿಸಿ
ಭವಿತವ್ಯ ಬರೆಯಲೆಂದು ಕಾಡುತ್ತಲಿತ್ತು
ಭಾವಗಳು ಅಲೆಯಂತೆ ಮೊರೆಯಿಕ್ಕಿದಾಗ
ಭೋರ್ಗರೆದು ಧುಮ್ಮಿಕ್ಕುವ ಜಲಪಾತದಂತೆ
ಮಿಡಿತದಲು ಪರಿಪರಿಯ ಜಿಜ್ಞಾಸೆಯಾಗ
ಹೊರಗೆಡವೋ ಕಲೆಯೊಂದು ಕೈಗೂಡಿದಂತೆ
ಇoತಿರಲು ಸ್ವಂತಿಕೆಯೇ ಕಳೆದಂತಿರಲು
ತೊರೆದಂತ ಬಾಳಲ್ಲಿ ನನ್ನ ನಾ ಕಂಡಂತೆ
ದೇಹದೊಳು ಆತ್ಮ ಸಮ್ಮಿಲನವಾಗಿರಲು
ವ್ಯರ್ಥವಾಗದೆ ಜನುಮ ಉತ್ತಮವಾದಂತೆ
ಭನ್ನಗಳ ಬದುಕಲ್ಲಿ ಒಲುಮೆಯ ಕಾಣದೆ
ಬಿತ್ತಿ ಬೆಳೆಯುತಿರುವ ಬೇಧ ಭಾವಗಳ
ಸುಳಿಯಲ್ಲಿ ಸಿಲುಕಿರುತ ನಲುಗುತ್ತಲಿರಲು
ಪ್ರತ್ಯಕ್ಷವಾಯ್ತು ಪ್ರತಿಭೆಯೆoಬ ಪ್ರಭೆಯೊಂದು
——————————————–
ಮಾಲಾ ಚೆಲುವನಹಳ್ಳಿ
ಸಕಾರಾತ್ಮಕ ಕವನ.