ವಾಣಿ ಯಡಹಳ್ಳಿಮಠ ಕವಿತೆ-ಕಥೆಯು ನಾನು

ಹುಟ್ಟಿ ಸಾಯುವ ಜೀವದ ಮೇಲೆ ಅದೆಷ್ಟು ಪ್ರೀತಿ
ಬಂದು ಹೋಗುವ ಭಾಂಧವರ ಮೇಲೆ ಅದೆಷ್ಟು ಪ್ರೇಮ
ಬರೀ ನನ್ನದೂ , ನನ್ನವರೂ ಎಂಬ ಅಭಿಮಾನ
ನಾ ಯಾರಿಗೂ ಸೋಲುವುದಿಲ್ಲವೆಂಬ ಬಿಗುಮಾನ
ಉಸಿರಿರುವ ತನಕವಷ್ಟೇ ಈ ಎದೆಯು ಭಾರ
ಮಡಿದ ಮರುಕ್ಷಣ ಹರಿದುಬಿಡುವುದು ಒಲವ ದಾರ

ನಾಲ್ಕು ದಿನಗಳ ಈ ಕಾಯದ ಮೇಲೆ
ಯಾಕಿಷ್ಟು ಕಾಳಜಿ ಕೊಟ್ಟೆ ?
ಬರೀ ಎರಡೇ ದಿನದ ನೇಹದ ಮೇಲೆ
ಯಾಕಿಷ್ಟು ಮೋಹ ಇಟ್ಟೆ ?
ಒಂಟಿಯಾಗಿ ಬಂದು ಒಂಟಿಯಾಗಿ
ಹೋಗುವುದೇ ದಿಟವಿದ್ದಾಗ ,,
ನಡುವೆ ಈ ಮೋಹ ಮಾಯಗಳ
ಹುಸಿಯಾಟವೇಕೆ ಇಟ್ಟೆ ?

ನನ್ನದೇ ಬದುಕ ಪುಸ್ತಕಕೆ, ನೀ ಲೇಖಕನಾದೆ
ನಾ ಕಲ್ಪಿಸದಂತೆ, ನೀ ಬರೆದು ತೆಗೆದೆ
ಮುನ್ನುಡಿಯೂ ನಿನ್ನದೇ ದೇವಾ
ಬೆನ್ನುಡಿಯು ನಿನ್ನದೇ ದೇವಾ
ಬರೀ ನೀ ಗೀಚಿದ ಕಥೆಯು ನಾನು
ನೀ ಜೀವ ನೀಡಿ,ಜೀವ ತೆಗೆವ
ಪಾತ್ರವು ನಾನು



Leave a Reply

Back To Top