ನಾಗರಾಜ ಜಿ. ಎನ್. ಬಾಡ ಕವಿತೆ-ಅನುಬಂಧ

ಹೇಳಿ ಕಳೆದು ಕೊಳ್ಳುವುದಕ್ಕಿಂತ
ಹೇಳದೆ ಮನಸ್ಸಿನಲ್ಲಿ
ಉಳಿಸಿಕೊಳ್ಳುವುದೇ ಚೆಂದ
ಹೇಳದೆ ಕೊರಗುತ್ತಾ ಕುಳಿತುಕೊಳ್ಳುವುದಕ್ಕಿಂತ
ಹೇಳಿ ಮನದ ಭಾವನೆಗಳನ್ನು ಸರಿಪಡಿಸಿಕೊಳ್ಳುವುದೇ
ಪ್ರೀತಿಯ ಬಂಧ
ಪಡೆದುಕೊಳ್ಳಬೇಕು ಒಲವಿನಿಂದ ಕಳೆದುಕೊಳ್ಳಬಾರದು ಮುನಿಸಿನಿಂದ ಬಿಟ್ಟುಕೊಡಬೇಕು ಪ್ರೀತಿಯಿಂದ
ಕಣ್ಣೀರು ಸುರಿಸುವುದಕ್ಕಿಂತ ಹಂಚಿಕೊಳ್ಳಬೇಕು ನಲಿವಿನಿಂದ ಯಾವುದನ್ನು ಕಳೆದುಕೊಳ್ಳಬಾರದು ಕೋಪದ ಮಾತಿನಿಂದ
ವಿಮುಖರಾಗಬಾರದು ಎಂದಿಗೂ
ಬದುಕಿನಿಂದ
ಸರಿಪಡಿಸಿ ಕೊಳ್ಳಬೇಕು
ಸಂಬಂಧವನ್ನು ಮಾತು ಕತೆಯಿಂದ  
ಗುಣವಾಗುಣಗಳನ್ನು ತಿದ್ದಿಕೊಳ್ಳಬೇಕು
ಜಾಣ್ಮೆಯಿಂದ
ಎಲ್ಲರ ಮನವನ್ನು ಗೆಲ್ಲಬೇಕು
ನಮ್ಮ ಒಳ್ಳೆಯತನದಿಂದ
ಎಲ್ಲರನ್ನೂ ಹುರಿದುಂಬಿಸುತ್ತ
ಬಾಳಬೇಕು ಕರುಣೆಯಿಂದ
ವೃದ್ಧಿಯಾಗಲಿ ಮಾನವೀಯ
ಮೌಲ್ಯಗಳು
ಬಿಗಿಯಾಗಲಿ ಶಾಂತಿ
ಸೌಹಾರ್ಧತೆಯ ಸಂಬಂಧಗಳು


One thought on “ನಾಗರಾಜ ಜಿ. ಎನ್. ಬಾಡ ಕವಿತೆ-ಅನುಬಂಧ

Leave a Reply

Back To Top