ಅನಸೂಯ ಜಹಗೀರದಾರ ಅವರ ʼತರಹಿ ಗಜಲ್ʼ

ಸ್ನೇಹಿತರು ಸೇರಿದಾಗೊಮ್ಮೆ ಕೇಳುತ್ತಾರೆ ಅವಳೆಲ್ಲಿ
ಅತಿಥಿಗಳು ಬಂದಾಗೊಮ್ಮೆ ಕೇಳುತ್ತಾರೆ ಅವಳೆಲ್ಲಿ

ಮೊಲ್ಲೆಮಾಲೆ ನೆನಪು ಮಾಸಿಲ್ಲ ನಿನ್ನೆ ಮೊನ್ನೆಯಂತಿದೆ
ಹೂ ತಂದವರು ಕಂಡಾಗೊಮ್ಮೆ ಕೇಳುತ್ತಾರೆ ಅವಳೆಲ್ಲಿ

ಕೇಳಿದವರಿಗೆಲ್ಲ ತತ್ತರಿಸಿ ಉತ್ತರಿಸಿ ಸಾಕುಸಾಕಾಗಿದೆ
ಓಣಿ ಚಿಣ್ಣರು ಸಿಕ್ಕಾಗೊಮ್ಮೆ ಕೇಳುತ್ತಾರೆ ಅವಳೆಲ್ಲಿ

ಬರವಣಿಗೆಗೆ ಅಕ್ಕರಗಳು ಮುಷ್ಕರ ಹೂಡುತ್ತವ ಹೀಗೆ
ಕವಿಮಿತ್ರರು ಕೂಡಿದಾಗೊಮ್ಮೆ ಕೇಳುತ್ತಾರೆ ಅವಳೆಲ್ಲಿ

ಕಾಣದ ಕ್ರಿಮಿಗೆ ಬಲಿ ಕಾಣದೂರಿನ ಪಯಣ ನಿನ್ನದು
ಪರಿಚಿತರು ಸಂಧಿಸಿದಾಗೊಮ್ಮೆ ಕೇಳುತ್ತಾರೆ ಅವಳೆಲ್ಲಿ

ಗದ್ಘದ ದನಿಯಲಿ ನಾನೂ ತಡವರಿಸುವೆ ಅನು
ನಿನ್ನ ಬಲ್ಲವರು ಕಲೆತಾಗೊಮ್ಮೆ ಕೇಳುತ್ತಾರೆ ಅವಳೆಲ್ಲಿ

——————————-

Leave a Reply

Back To Top