ಡಾಕ್ಟರ್ ವರದಾ ಶ್ರೀನಿವಾಸರವರ ನಾಟಕ “ಶರಣಂಬೆ ನಿಷ್ಟೆಯ ಗೆಳೆತನಕ” ಪರಿಚಯ-ವನಜಾಸುರೇಶ್

ಅತ್ಯಂತ ಪ್ರಬುದ್ಧವಾಗಿ  ಬರೆದು ಹೆಸರಾಗಿ ಬೆಳಕಕಾದ ಹಿರಿಯ ಸಾಹಿತಿಗಳ ಸಾಹಿತ್ಯ ಓದುಗರಿಲ್ಲದೆ ಮರೆಯಾಗುತ್ತಿರುವ , ಮಸುಕಾಗುತ್ತಿರುವ ಹೊತ್ತಿನಲ್ಲಿ ಆ ಚೇತನಗಳ ಬೆಳಕನ್ನು ಯುವ ಪೀಳಿಗೆಗೆ ಹರಡುತ್ತಾ ಯುವ ಬರಹಗಾರರ ಮನಸ್ಸಿನಲ್ಲಿ ತಾವು ಅನುಸರಿಸಬೇಕಾದ ಬರವಣಿಗೆಯ ಸಿದ್ಧಸೂತ್ರಗಳನ್ನು ಓದಿ ಪಾಲಿಸಿಕೊಳ್ಳಲು ಹಿರಿಯರ ಜಾಡಿನಲ್ಲಿ ನಡೆದು ಜೀವನವನ್ನು ಬರವಣಿಗೆಯನ್ನು ಹಸನೆಗೊಳಿಸಿಕೊಳ್ಳಲು ನೆರವಾಗುವುದರ  ಜೊತೆಗೆ ಹಿರಿಯರನ್ನು ಸ್ಮರಿಸುತ್ತಾ ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುವಂತಹ ಮಹತ್ವದ ಕಾರ್ಯ ಓದಿನಿಂದಾಗುತ್ತಿದೆ ಇದಕ್ಕಾಗಿ ತಮ್ಮ ಶ್ರಮ ಸಮಯವನ್ನು ಅಡವಿಡುತ್ತಾ ದುಡಿಯುತ್ತಿರುವ ಅಡ್ಮಿನ್ ಬಳಗಕ್ಕೆ ವಂದಿಸುವೆ.
ಇದೇ ಜುಲೈ 28-07-1950   ರಂದು ಮಂಗಳೂರಿನಲ್ಲಿ ಪ್ರಸಿದ್ಧ ಲೇಖಕರು ಎಸ್ ವಿ ಪರಮೇಶ್ವರ ಭಟ್ಟರ ಶಿಷ್ಯರೂ ಆದ ಪಿ ಕೆ ನಾರಾಯಣ್ ರವರ ಪುತ್ರಿಯಾಗಿ ಜುಲೈಮಾಹಿಯಲ್ಲಿ ಜನಿಸಿ ಇಲ್ಲಿಗೆ 73 ವಸಂತಗಳನ್ನು ಅತ್ಯಂತ ಸಾರ್ಥಕವಾಗಿಸಿಕೊಂಡು  ಬಾಳಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ  ಕೊಡುಗೆ ನೀಡಿದ ಹೆಮ್ಮೆಯ  ಲೇಖಕಿ ಡಾ. ವರದ ಶ್ರೀನಿವಾಸ್ ಮೇಡಮ್
ಅವರಿಗೆ ಅವರ 74ನೇ ವರ್ಷದ ಆದಿಗೆ ಶುಭ ಕೋರುತ್ತಾ ಎಲ್ಲರ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಹೇಳಬಯಸುತ್ತೇನೆ ಮೇಡಂ
ದೇವರು ನಿಮಗೆ ಮತ್ತಷ್ಟು ಆರೋಗ್ಯ ಆಯಸ್ಸನ್ನು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಅವರ “ಶರಣೆಂಬೆ ನಿಷ್ಠೆಯ ಗೆಳತನಕ” ನಾಟಕವನ್ನುಪರಿಚಯಿಸುತ್ತಿರುವೆ.

ಮೊದಲಿಗೆ ನಾನಿವರ ಶರಣಂಬೆ ನಿಷ್ಠೆಯ ಗೆಳೆತನಕ ಎಂಬ ಮೂರು ನಾಟಕಗಳನ್ನು ಒಳಗೊಂಡ ಕೃತಿಯ ಪರಿಚಯವನ್ನು ನಿಮ್ಮ ಮುಂದಿಡುತ್ತಿದ್ದೇನೆ
ಇದೊಂದು ಜಾನಪದ ಕಥನ ಗೀತೆಯನ್ನು ನಾಟಕವಾಗಿಸಿದ ರೂಪಕವಾಗಿದೆ. ನಿಂಗಣ್ಣ ಸಣ್ಣಕ್ಕಿ ಅವರು ಸಂಪಾದಿಸಿರುವ ಗಂಡಸರ ಜನಪದ ಹಾಡುಗಳು ಒಂದು ವಿಶೇಷ ಸಂಗ್ರಹ ಎಂಬ ಪುಸ್ತಕದಿಂದ ಆರಿಸಿಕೊಂಡ ಕಥನ ಗೀತೆಯನ್ನು ರೂಪಕವಾಗಿಸಿ ನಾಟಕದ ಶೈಲಿಗೆ ಅಳವಡಿಸಿದ್ದಾರೆ..
ಈ ರೂಪಕವನ್ನು ಸೂಕ್ತ ಸಂಗೀತದೊಂದಿಗೆ ಲಯಬದ್ಧವಾಗಿ ಹಾಡಬಹುದು ಆದರೆ ಮೂಲ ರೂಪವಾದ ಗೀಗಿ ಎಂಬ ಸ್ವರವನ್ನು ಉಳಿಸಿಕೊಂಡರೆ ಜಾನಪದ ಮಧುರ ನಾದ ರೂಪಕ್ಕೆ ಕಳೆ ಕೊಡುತ್ತದೆ
ಗೀಗಿ ಪದದ ದಾಟಿಯಲ್ಲಿ ಇದನ್ನು ಹಾಡಬೇಕಾಗಿದೆ
ಲಾವಣಿಯಲ್ಲಿರುವಂತೆ ಪ್ರಧಾನ ಗಾಯಕ ಪ್ರಧಾನ ಗಾಯಕಿರಬೇಕು ಹಿಮ್ಮೇಳಕ್ಕೆ ಹೆಚ್ಚಿನ ಪುರುಷ ಮತ್ತು ಸ್ತ್ರೀ ದ್ವನಿಗಳನ್ನು ಸೇರಿಸಿಕೊಳ್ಳಬೇಕು ರೂಪಕದ ರಸ ಭಾವಗಳಿಗೆ ಅನುಗುಣವಾಗಿ ಪಾತ್ರ ಪೋಷಣೆ ಹೊಂದುವಂತೆ ಸೂಕ್ತ ಕಂಠದೊಂದಿಗೆ ಮೇಳದವರು ಇದನ್ನ ಹಾಡಬೇಕು.
ಹಾಡುವ ಹಾಡಿನೊಂದಿಗೆ ಪ್ರಧಾನ ಗಾಯಕರು ದಪ್ಪು ಎಂಬ ವಾದ್ಯ ಅಥವಾ ತಮ್ಮಟೆಯನ್ನು ಬಡಿಯುತ್ತಾ ಹಾಡಬೇಕು ಇನ್ನೊಬ್ಬರು ತುಂತುಡಿಯನ್ನು ನುಡಿಸಬೇಕು ಮತ್ತೊಬ್ಬ ಜಾಂಜಾ ಅಥವಾ ಕೈ ತಾಳವನ್ನು ಬಾರಿಸಬೇಕು ಇವುಗಳ ಜೊತೆಗೆ ಕಾಲುಗಳಿಗೆ ಗೆಜ್ಜೆ ಕಟ್ಟಿ ಅವರು ಗೀಯ ಗಾಗಿ ರಂಗದ ಮೇಲೆ ಬಂದು ನೃತ್ಯದ ಹೆಜ್ಜೆಯೊಂದಿಗೆ ಹಾಡುತ್ತ ಮತ್ತೆ ಆಚೆ ಈಚೆ ಹೊರಡಿ ಸ್ವಸ್ಥಾನಕ್ಕೆ ತೆರಳಬೇಕು ಆಗ ರಂಗದ ಮೇಲೆ ರೂಪಕ್ಕೆ ಮತ್ತಷ್ಟು ಕಳೆಕಟ್ಟುತ್ತದೆ ಎನ್ನುತ್ತಾ ಇವರು ಹಾಡುವ ಪರಿಯನ್ನು ರೂಪಕದ ಪ್ರಸ್ತಾವನೆಯ ವಿಶೇಷತೆಯನ್ನು ನಟಿಸುವವರಿಗೆ ಹಾಡುವವರಿಗೆ ತಿಳಿಸಿಕೊಟ್ಟಿದ್ದಾರೆ ಇದಕ್ಕೊಂದು ಸ್ಪಷ್ಟ ಸಮವಸ್ತ್ರ ಧರಿಸಿರಬೇಕು ಪುರುಷರು ತಲೆಗೆ ಮುಂಡಾಸು ಧರಿಸಬೇಕು ಸ್ತ್ರೀಯರು ಹೆರಳನ್ನು ಗಂಟು ಕಟ್ಟಿ ಹೂ ಮುಡಿದಿರಬೇಕು ಅನ್ನುವಂತಹ ವಸ್ತ್ರ ವಿನ್ಯಾಸವನ್ನು ಕೂಡ ಇದರಲ್ಲಿ ನಮೂದಿಸಿದ್ದಾರೆ.
ಇನ್ನು ಇಡೀ ರೂಪಕದ ಕಥಾ ಸಾರಾಂಶವನ್ನು ಹೀಗೆ ತೆರೆದಿಡುತ್ತಿದ್ದಾರೆ

ಶರಣಂಬೇ ನಿಷ್ಠೆಯ ಗೆಳೆತನ ಎಂಬ ನಾಟಕದಲ್ಲಿ ಚಾಮರಾಯ ಭೀಮರಾಯರ ಗೆಳೆತನದ ವಿಶೇಷತೆಯನ್ನ ರೂಪಕವಾಗಿ ಸಿದ್ದಾರೆ ಯಾವ ಮನುಷ್ಯನು ಆಸೆಯಿಂದ ಹೊರತಲ್ಲ ಆಸೆಯೂ ಜೀವನಕ್ಕೆ ಪ್ರೇರಣೆ ಆಸೆ ಇರಬೇಕು ಅದು ಪಾಸಿಟಿವ್ ಆಗಿರಬೇಕು ಅದು ನಕಾರಾತ್ಮಕವಾಗಿ ಇರಬಾರದು ಅನ್ನೋದಕ್ಕೆ ನಮ್ಮ ಸರ್ವಜ್ಞ ಕವಿ ಒಂದು ಮಾತನ್ನ ಹೇಳ್ತಾರೆ
ಹೆಣ್ಣನ್ನು ಹೊನ್ನನ್ನು ಮಣ್ಣನ್ನು
ಕಣ್ಣಲ್ಲಿ ಕಂಡು ಮನದಲ್ಲಿ ಬಯಸದಿಹ
 ಅಣ್ಣಗಳು ಯಾರು ಸರ್ವಜ್ಞ.

ಯಾವುದೇ ಅಂಶವನ್ನು ಸಕಾರಾತ್ಮಕವಾಗಿ ನಕಾರಾತ್ಮಕವಾಗಿ ಎರಡೂ ದೃಷ್ಟಿಯಿಂದ ಅಳೆಯುವಂತ ಸಾಧ್ಯತೆಗಳಿವೆ ಇಲ್ಲಿಯೂ ಹಾಗೆ ಒಂದು ಒಳ್ಳೆಯ ಬಂಗಾರದ ಒಡವೆಯನ್ನ ಕಂಡ ಹೆಣ್ಣು ಮಗಳ ಮನಸ್ಸು ಅಯ್ಯೋ ಎಷ್ಟು ಚೆನ್ನಾಗಿದೆ ನನಗೂ ಒಂದು ಇತರ ಇದ್ದಿದ್ರೆ ಅಂತ ಅಥವಾ ಇಂಥದ್ದು ನಾನೊಂದು ತಗೊಳ್ಬೇಕು ಅಂತ  ಬೈಸ್ತಾಳೆ ,
ಸಕಲ ಸೊಬಗು ಸೌಂದರ್ಯ ಸವಲತ್ತುಗಳನ್ನು ಹೊಂದಿದ ಸುಂದರ ಬಂಗಲೆಯನ್ನು ನೋಡಿದಂತಹ ಸದ್ಗೃಹಸ್ಥ ಸದ್ಗೃಹಿಣಿ , ಎಷ್ಟು ಚಂದವಿದೆ ಅದ್ಭುತ ಅಂತ ಹೊಗಳುವುದರೊಂದಿಗೆ  ತನ್ನ ಸಾಮರ್ಥ್ಯದಲ್ಲಿ ದುಡಿದು ನಾನು ಇಂಥದೊಂದು ಬಂಗಲೆಯನ್ನು ನಾವು ಕಟ್ಟಬೇಕು ಅಂತ ಆಶಿಸ್ತಾಳೆ ,
ತುಂಬಾ ಚಂದವಾಗಿರುವಂತಹ ಹೆಣ್ಣನ್ನ ಹೆಣ್ಣು ಮಕ್ಕಳನ್ನ ನೋಡಿದಾಗ ಸಕಾರಾತ್ಮಕವಾಗಿ ಅಯ್ಯೋ ಎಷ್ಟು ಚಂದ ಇದ್ದಾಳೆ ಇಂಥ ಮಗಳಿರಬೇಕು ಇಂಥ ಸೊಸೆ ಇರಬೇಕು ಇಂತಹ ಮಡದಿ ಇರಬೇಕು ಅಂತ ಅನ್ನಿಸೋದು ಕೂಡ
ಸಹಜವೇ ಸಕಾರಾತ್ಮಕವೇ.
ಆದರೆ ಇಂಥದ್ದೆಲ್ಲವನ್ನು ಹೇಗಾದರೂ ಮಾಡಿ ಪಡೆದುಕೊಳ್ಳಲೇಬೇಕು ಅಂತ ಕಟುಕುತನಕ್ಕೆ ಇಳಿಯುವ ರಾಕ್ಷಸ ವಿಕೃತ ಮನಸ್ಸುಗಳು ಮಾತ್ರ ಆಗಬಾರದು ಅಲ್ಲವೇ . ಹೆಣ್ಣು ಒಂದು ವಸ್ತು ಅಲ್ಲ ಅದೊಂದು ಸೌಂದರ್ಯ ಅದೊಂದು ಸೃಷ್ಟಿಯ ಸೊಬಗು ಆನಂದಿಸಬೇಕು. ಎಂದು ಹೇಳ್ತಾ ಶಾಮರಾಯ ಭೀಮರಾಯರ  ರೂಪಕದ ವಿಚಾರಕ್ಕೆ  ಬರುತ್ತೇನೆ.
ಅತಿ ಒಳ್ಳೆತನ ಅತಿ ಪ್ರಾಮಾಣಿಕತೆ ತನ್ನಿಂದ ತನ್ನವರಿಗೆ ಎಲ್ಲರಿಗೂ ಒಳ್ಳೆಯದೇ ಆಗಬೇಕು ಯಾರಿಗೂ ನೋವಾಗ್ಬಾರ್ದು ಅಂತ ಹೊರಟ ಯಾವ ಮನುಷ್ಯನ ಅಪೇಕ್ಷೆಯೂ ಸುಖಾಂತ್ಯ ಕಂಡಿರುವುದನ್ನು ನಾವು ನೋಡಿಲ್ಲ  ಅತಿ ಪ್ರಾಮಾಣಿಕತೆ ಅತಿ ವಿನಯ ಅತಿ ಒಳ್ಳೆಯತನ  ಹೊಂದಿರುವ ಪಾತ್ರಗಳೆಲ್ಲವೂ ಜೀವನದಲ್ಲಿ ಕಷ್ಟ ನಷ್ಟಗಳನ್ನೇ ಅನುಭವಿಸುತ್ತಾ ನರಳುತ್ತಾನೆ ಒದ್ದಾಡಿ ಒದ್ದಾಡಿ ಸಂಕಟದ ವಿಷ ವರ್ತುಲ ದೊಳಗೆ ತಮ್ಮನ್ನೇ ತಾವು ಹಿಂಸಿಸಿಕೊಂಡೇ ಬದುಕಿ ಹೋಗಿರುವುದನ್ನು  ಬದುಕುತ್ತಿರುವುದನ್ನು  ಸಾಕಷ್ಟು ಉದಾಹರಣೆಗಳೊಂದಿಗೆ ನಿದರ್ಶನಗಳೊಂದಿಗೆ ತೋರಿಸಬಹುದು.
ಉದಾಹರಣೆಗೆ ಕರ್ಣನ ಬದುಕು ಭೀಷ್ಮನ ಬದುಕು, ಊರ್ಮಿಳಯ ಬದುಕು ಪುರಾಣದಲ್ಲಿ ನೆನಪಿಸಿಕೊಳ್ಳುತ್ತಾ ಹೋದರೆ ಇನ್ನೂ ಸಾಕಷ್ಟು ಇಂತಹ ತಮ್ಮ ತ್ಯಾಗದಿಂದನೇ ನೋವು ಸಂಕಟ ತೊಳಲಾಟಗಳನ್ನು ಪಡೆದುಕೊಂಡು  ದಾರುಣ  ಹಿಂಸೆ ಸಾವು  ಅನುಭವಿಸಿರುವಂತಹ ಘಟನೆಗಳು ನಿದರ್ಶನಗಳು ಕಣ್ಮುಂದೆ ತೆರೆದುಕೊಳ್ತವೆ .
ಹಾಗೆ ಇಲ್ಲಿ ಶಾಮರಾಯ ಭೀಮರಾಯ ಇಬ್ಬರು ಗರಡಿ ಮನೆ ಗೆಳಯರು ಇಬ್ಬರು ಕಸರತ್ತು ಮಾಡುವ ಕುಸ್ತಿಪಟುಗಳು.

ಒಂದು ದಿನ ಶಾಮರಾಯನ ಹೆಂಡತಿಯನ್ನು ದಾರಿಯಲ್ಲಿ ಕಂಡ ಭೀಮರಾಯ ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಆಕೆ ತನ್ನವಳಾಗಬೇಕೆಂದು ಬಯಸುತ್ತಾನೆ ಆಕೆ ಶಾಮರಾಯನ ಪತ್ನಿ ಎಂದು ಆತನಿಗೆ ತಿಳಿದಿರುವುದಿಲ್ಲ
ಇತ್ತ ಶಾಮರಾಯ ಭೀಮರಾಯನ ಗೆಳೆತನವನ್ನು ಕೆಡಿಸಿಕೊಳ್ಳಬಾರದೆಂದು ತನ್ನ ಪತ್ನಿಯನ್ನು  ಪತ್ನಿ ಎಂದು ಹೇಳದೆ ‘ಸೂಳೆ’-ಎಂದು ಹೇಳುತ್ತಾ ಗೆಳೆಯನ ಬಯಕೆ ತೀರಿಸುವ  ಆಲೋಚನೆ ಮಾಡಿಕೊಂಡು  ಭೀಮನಿಗೆ ಗೆಳೆಯ ನನಗವಳು ಗೊತ್ತು ಹೇಗಾದರೂ ಮಾಡಿ ಅವಳು ನಿನಗೆ ಸಲ್ಲುವಂತೆ ನಾನು ಯೋಜನೆ ರೂಪಿಸ್ತೀನಿ ಎಂದು ಭರವಸೆ ಕೊಟ್ಟು  ಮನೆಗೆ ಬಂದು ತನ್ನ ಹೆಂಡತಿಗೆ ಭೀಮರಾಯನಿಗೆ ಸುಖ ನೀಡುವಂತೆ ಪತ್ನಿಯನ್ನು ಇನ್ನಿಲ್ಲದಂತೆ ಹೇಳಿ ವಾದ ಮಾಡಿ ಒಪ್ಪಿಸುತ್ತಾನೆ. ಪತ್ನಿಯು ಪತಿಯ ಕೋರಿಕೆಯನ್ನು ತಳ್ಳಿ ಹಾಕುವಾಗ ಪತಿ ಪತ್ನಿಯ ನಡುವೆ ಆಪ್ತವಾದ ಒಂದು ಸಂಘರ್ಷವೇ ನಡೆಯುತ್ತೆ ಅದನ್ನ ಪಾತ್ರಗಳ ಮುಖೇನ ಅತ್ಯಂತ ಸಮರ್ಥವಾಗಿ ಕಟ್ಟಿಕೊಡುವ ಕೆಲಸವನ್ನು ವರದಾ ಮೇಡಂ ಮಾಡಿದ್ದಾರೆ


ಶರಣೆ ನಿಷ್ಠೆಯ ಗೆಳೆತನಕ ಎಂಬ ನಾಟಕದ ಪಾತ್ರವರ್ಗ ಹೀಗಿದೆ
ಶಾಮರಾಯ ವಿವಾಹಿತ
ಚೆನ್ನವ್ವ ಶಾಮ ರಾಯನ ಹೆಂಡತಿ
ಭೀಮರಾಯ ಶಾಮರಾಯನ ಸ್ನೇಹಿತ
ಭಾಗಿರತಿ ಚೆನ್ನವನ ಗೆಳತಿ
ಗುರುಗಳು ಕರಡಿಮನೆ ಗುರುಗಳು
ಮಾದೇವ ಗರಡಿಮನಿ ಶಿಷ್ಯ
ಬಸವ ಗರಡಿಮನಿ ಶಿಷ್ಯ
ಹಿಮ್ಮೇಳದಲ್ಲಿ ಪ್ರಧಾನ ಗಾಯಕ ಪ್ರಧಾನ ಗಾಯಕಿ
ಮೇಲದಲ್ಲಿ ಮೂವರು ಪುರುಷರು ಮೂವರು ಮಹಿಳೆಯರು
ಇಷ್ಟು ಪಾತ್ರಗಳಲ್ಲಿ ಸಮರ್ಥ ಸಂಭಾಷಣೆಯನ್ನ ಹಂಚಿ
ನಾಟಕಕ್ಕೆ ಸಿದ್ಧ ರೂಪವನ್ನು ಕೊಟ್ಟಿದ್ದಾರೆ.


ಬೆಳಗಾಗ ನಾನೆದ್ದು ಯಾರು ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಣ ಎನ್ನುವ ಪ್ರಾರ್ಥನಾ ಗೀತೆಯೊಂದಿಗೆ ಮೊದಲ ದೃಶ್ಯ ಪ್ರಾರಂಭವಾಗುತ್ತದೆ.
ದೃಶ್ಯ ಒಂದು ತೆರೆ ಸರಿದಾಗ
ಪ್ರಧಾನ ಗಾಯಕರು ಒಂದು ತತ್ವಪದದ ಮೂಲಕ ಕಥೆಯ ಸಾರಕ್ಕೆ ಮುನ್ನುಡಿ ಬರೆದಿದ್ದಾರೆ
ಚಾಮರಾಯ ಭೀಮರಾಯ ಜೋಡಿ ಲಿಬರ ಗೆಳೆಯರ ನಿಷ್ಠಕಂಡಿದಾರ ಮುಕ್ತಿ ಮಾರ್ಗವನ ಕೇಳಿರಿ ಎಂದು ನಿಧಾನವಾಗಿ ಜಾನಪದ ಗೀಗಿ ಪದದ ಶೈಲಿಯಲ್ಲಿ ಹಾಡಿದ್ದಾರೆ.
ದೃಶ್ಯ—2

ಮುಸ್ಸಂಜೆ ಹೊತ್ತು ಶಾಮ ರಾಯನ ಮನೆಯಲ್ಲಿ ಅವನ ಮಾಡಿದೆ ಚೆನ್ನವ್ವ ಶಿವ ಪೂಜೆ ಮಾಡುತ್ತಾ
ಹಾರ್ಯಾಗ ಏಳುತ್ತಲೇ ಹರ ನಿನ್ನ ನೆನದೇನು,
ಪಾತಾಳ ಗಂಗ್ಯಾಗ ಜಳಕಾವೋ
ಪಾತಾಳ ಗಂಗ್ಯಾಗ ಜಳಕಾವ ಮಾಡಿದಂತ ಹರ ನಿನ್ನ ಮೊದಲ ನೆನೆದೇನು

ಮಾದೇವ ನಿನ ಹೊರತು ನಾನ್ಯಾರ ನಂಬಿಲ್ಲ
ನಾ ಮಾಡೇನೆಂಬ   ಅಳವಿಲ್ಲ ಮಲ್ಲಯ್ಯ
 ನೀ ನಡಿಸು ನನ್ನ  ಸರುವೆಲ್ಲ.
ಎಂದು ಹಾಡಿ ಶಿವನಿಗೆತ್ತಿದ ಆರತಿಯನ್ನು ಗಂಡನೆಡೆಗೂ ಹಿಡಿತಾಳೆ
ಅತ್ಯಂತ ಪ್ರೀತಿಯಿಂದ ಆರತಿಯನ್ನು ಪಡೆದ ಶಾಮರಾಯ ಚೆನ್ನಿ ಚೆನ್ನಿ ಐತೇನೋ ನಿನ್ನ ಪೂಜೆ ಬಾರೆ ಇಲ್ಲಿ ಹತ್ತಿರ ಎಂದು ಕೈಹಿಡಿದು ಆಕೆಯನ್ನ ಪಕ್ಕಕ್ಕೆ  ಸೆಳೆದು ರಮಿಸುತ್ತಾ
ಮುತ್ತಿನೋಲೇ ಬೇಕೇನಾ ,ರತ್ನದೋಲೆ ಬೇಕೇನಾ ನನ್ನ ಹೆಣ್ಣೇ  ನಿನಗೇನ ಬೇಕಾ  ಆಕೆಯನ್ನ ಖುಷಿಪಡಿಸಿ ತನ ಮನದಿಂಗಿತವನ್ನು ಹೇಳುವ ಸಲುವಾಗಿ ಅವಣಿಸುತ್ತಾನೆ
ಚೆನ್ನವ್ವ ತನ್ನ ಗೆಳತಿ ಕೂಸು ಎತ್ಕೊಂಡು ತೌರ್ಬಣ್ಣ ಹುಟ್ಕೊಂಡು ಹೊಂಟದನ್ನ ನೋಡಿ ತನಗೂ ಏನು ಬೇಕೆಂಬುದನ್ನು ಹೀಗೆ ಹೇಳ್ತಾಳೆ
ಮುತ್ತಿನೊಲೆ ಬೇಡ ರತ್ನದೂಲೇ ಬೇಡ ಸರಕಾರದಾಗ ಸಪಾಲು ತರುವ  ಮಗ ಬೇಕು ಮಾರಾಯ
ಎಂದು ಉತ್ತರಿಸಿದಾಗ ಚಿಂತಿ ಯಾತಕ್ಕ ನನ್ನ ಮಡದಿ, ಚಿಂತಿ ಯಾತಕ
ಶಿವನುಲಿದರೆ ಹಡೆಯುವಿ ನೀ  ಹೊಸಕೂಸ
ಅದು ತನಕ ನಾನೇ ನಿನ್ನ ಕೂಸ ಅಲ್ಲವೇ ನಾ
ಏನುವಲ್ಲಿ , ಹೆಣ್ಣು ಮಕ್ಕಳಿಗಿರುವ ತಾಯ್ತನದ  ಹಂಬಲದ ವ್ಯಕ್ತವಾಗುತ್ತದೆ
ದೃಶ್ಯ ಎರಡರಲ್ಲಿ ಸುಂದರ ದಾಂಪತ್ಯದ ಸಾಂಗತ್ಯದ ಮೆರುಗು ಹಾಗೂ ಪ್ರಾಂಜಲ ಪ್ರೀತಿಯ ಎರಡೂ ಹೃದಯಗಳನ್ನಿಲ್ಲಿ ಕಾಣಬಹುದು.
ದೃಶ್ಯ ಮೂರಕ್ಕೆ ಹೊರಟರೆ
ಪ್ರಧಾನ ಗಾಯಕ ಮೇಳದವರು ಹಾಡುವ ಹಾಡಿನಲ್ಲಿ ಗರಡಿ ಮನೆಯ ಎಲ್ಲ ಜಟ್ಟಿಗಳುಗಳು ತಮ್ಮ ತಮ್ಮ ಕಸರತ್ತುಗಳಲ್ಲಿ ನಿರತರಾಗಿದ್ದಾರೆ ಆ ಸಮಯದಲ್ಲಿ ಅತಿ ಎತ್ತರದಮುರಿದ ಮಲ್ಲಕಂಬವನ್ನೇರಿ ಕಸರತ್ತಿನಲ್ಲಿರುವಾಗ ಪರಪರ ಎಂದು ಶಬ್ದ ಮಾಡುತ್ತಾ ಮುರಿದು ಬಿದ್ದ ಕಂಬದಿಂದ ಶಾಮನನ್ನು ಭೀಮ ಓಡಿಬಂದು ಬಾಹುಗಳಲ್ಲಿ ಆಂತು ಜೀವ ಉಳಿಸುತ್ತಾನೆ
ಶಾಮ ಕೃತಜ್ಞತೆಯಿಂದ ಭಿಮ್ಯ ನೀ ಇದ್ದೆ ಅಂತ ನನ್ನ ಪ್ರಾಣ ಉಳಿಯಿತು ಈ ನಿನ್ನ ಋಣಾನ ನಾ ಹ್ಯಾಂಗ ತೀರಿಸಲಿ ಹ್ಯಾಂಗ ತೀರಿಸಲಿ ಎಂದು ಅಪ್ಪಿಕೊಳುತಾನೆ  
ಈಗಲೂ ಮೇಳದವರು ಇವರಿಬ್ಬರ ಸ್ನೇಹದ ಪರಕಾಷ್ಟೆಯನ್ನ ತಮ್ಮ ಹಾಡಿನಲ್ಲಿ ಸಭಿಕರಿಗೆ ತಿಳಿಯುತ್ತದೆ.
ದೃಶ್ಯ ನಾಲ್ಕರಲ್ಲಿ
ಕುಸ್ತಿಯ ಕಣ ಶಾಮರಾಯ ಭೀಮರಾಯ ಪ್ರತಿಸ್ಪರ್ಧಿಗಳು ಪದ್ಯ ನಡೆಯುತ್ತಿದೆ ಭೇಷ್ಮ ಹೊಡಿ ಭೀಮ ಹೊಡಿ ಹಾಗೆ ಹಾಗೆ ಶಭಾಷ್ ಹೀಗೆ ಒಮ್ಮೆ ಭೀಮನಿಗೆ ಒಮ್ಮೆ ಶಾಮನಿಗೆ ಜಯಕಾರ ಹಾಕ್ತಿದ್ದಾರೆ ಇಬ್ಬರು ಮದಿಸಿದ ಆನೆಗಳಂತೆ ಭೀಮ ದುರ್ಯೋಧನರಂತೆಯೇ ಕಾಳಗದಲ್ಲಿ ನಿರುತರಾಗಿದ್ದಾರೆ.

ಇನ್ನೇನು ಶಾಮ ಗೆದ್ದೇಬಿಟ್ಟ ಎಂದು ಜಯಕಾರ ಹಾಕಬೇಕು ಅನ್ನೋ ಅಷ್ಟರಲ್ಲಿ ಶಾಮ ನೆಲಕ್ಕೆ ಬಿದ್ಬಿಡ್ತಾನೆ

ಭೀಮ ಉದ್ವೇಗದಿಂದ ನೀ ಹಾಕ ಹಿಂಗ್ ಮಾಡ್ದೆ ಇದು ಕುಸ್ತಿ ಕಣೋ ಇಲ್ಲಿ ನಾನ್ ನಿನ್ ಗೆಳೆಯ ಅಲ್ಲ ನಾನು ಸ್ಪರ್ಧೆ ನೀನು ಪ್ರತಿಸ್ಪರ್ಧಿ ಇಲ್ಲಿಯ ಸೋಲು ಗೆಲುವು ನನ್ನ ನಿನ್ನ ಗೆಳೆತನಕ್ಕೂ ಯಾವ ಸಂಬಂಧ ಇಲ್ಲ ನೀ ಯಾಕ ಬಿದ್ದಿ ಸೋತಿ ಯಾಕ
ಎಂದು ಭೀಮ ಶಾಮನನ್ನು ಕೇಳ್ತಾ ಇದ್ದಾನೆ. ಶಾಮ ಭೀಮನನ್ನು ಗೆಲ್ಲಿಸಬೇಕು ಅನ್ನೋ ಕಾರಣಕ್ಕಾಗಿ ತಾನೇ ಬೇಕಾಗಿ ಸೋತಿರುತ್ತಾನೆ. ಇಲ್ಲಿ ನಿಷ್ಠೆಯ ಗೆಳೆತನದ ಪರಾಕಾಷ್ಟೆ ಯನ್ನು   ಮೇಡಂ ಬಹಳ ನೈಜವಾಗಿ ಕಸೂತಿ ಹಾಕಿ  ಹೆಣದಿದ್ದಾರೆ.
ಇಲ್ಲಿ ಗೆಳೆಯರಿಬ್ಬರ ಆಪ್ತ ಸಂಭಾಷಣೆ
ಸಲುಗೆ ಸ್ನೇಹ ಮಾಧುರ್ಯ ನಾವಿಬ್ರೂ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯಬಾರದು ಅನ್ನೋ ತೀರ್ಮಾನ
ಒಟ್ಟಿಗೆ ಸಾಯಬೇಕೆಂಬ ಹಂಬಲ ಸ್ನೇಹದ ಪರಕಷ್ಟೇ ನಾ ತಿಳಿಸಿಕೊಡುತ್ತದೆ  ಮೇಳದವರ ಹಾಡು ಪ್ರಮುಖ ಪಾತ್ರ ವಹಿಸಿವೆ .
ದೃಶ್ಯ ಐದರಲ್ಲಿ ಗಾಯಕರು
ಬಜಾರಿಗೆ ಹೋಗುವ ದಾರಿಯ ಬಗ್ಗೆ ವಿವರಿಸುತ್ತಿದ್ದಾರೆ ಶಾಮರಾಯನ ಹೆಂಡತಿ ತಂಬಾಕು ತರೋ ಗೋಸೆ ಕಾರಣದಲ್ಲಿ ಬಜಾರಿಗೆ ಹೋಗ್ತಾ ಇದ್ದಾಳೆ ಅಲ್ಲಿ ಚೆನ್ನೀಗೆ ಗೆಣಕಾತಿ  ಬಾಗಿ ಜೊತೆಯಾಗ್ತಾಳೆ, ಗಡಾನ ತಂಬಾಕು ತಗೊಂಡು ಬಾ ಅವನಿಗೆ ಕೊಟ್ಟು ಮಾದೇಶ್ವರನ ಜಾತ್ರೆ ಹೋಗೋಣ ಎಂದು ಮಾತನಾಡಿಕೊಳ್ಳುವ ಸನ್ನಿವೇಶ ಕಾಣುತ್ತೆ
ಚೆನ್ನಿ  ಹೀಗೆ ಬಜಾರ್ ಕಡೆ ಹೋಗುವಾಗಿನ ಆಕೆಯ ಬೆಡಗು ಬಿನ್ನಾಣ ಸೌಂದರ್ಯವನ್ನು ಮೇಳದವರ ಹಾಡಿನಲ್ಲಿ ಕಾಣಬಹುದಾಗಿದೆ
ಚೆನ್ನವ್ವನ  ಚೆಲುವು ಕಂಡ ಭೀಮ ಹದ್ದಿನ ಕಲ್ಲಲ್ಲಿರುವ ಬೆಟ್ಟದ ಹನುಮಂತ ಬೆಡಗಿ ಹೆಣ್ಣು ಒಲಿದರೆ ಹನುಮಂತ ನಾನು ಮುತ್ತ ಬಾಗಿಲಿಗೆ ಹೆಣ ಸೇನು ಎಂದು ಹರಕ್ಕೆ ಹೊರುತ್ತಾ  
ಆಕಿಯನ್ನು ಪಡಿಬೇಕು ಎಂಬ ಹಂಬಲಕ್ಕೆ ಬೀಳ್ತಾನೆ.
     ಗರಡಿ ಮನೆಗೆ ಬಂದ ಗೆಳೆಯ ಭೀಮ ಯಾವುದರಲ್ಲೂ ಆಸಕ್ತಿಯನ್ನು ತೋರಿಸಿದೆ ಮಂಕನಾಗಿರುವುದನ್ನ ಕಂಡು ಶಾಮ ಗೆಳೆಯನ ಅಂತರಾಳವನ್ನು ಕೆದಕುತ್ತಾನೇ
ಭೀಮ ಮುಚ್ಚುಮರೆ ಇಲ್ದೆ ತನ್ನ ಅಂತರಾಳದ ಬಯಕೆಯನ್ನು ಹೇಳಿದಾಗ ಯಾರಿರಬಹುದು ಎಂದು ತನ್ನ ಮನಸ್ಸಿನಲ್ಲೆ ಸಾಧ್ಯತೆಗಳನ್ನ ಎಣಿಕೆ ಹಾಕ್ತಾ
ತನ್ನ ಮಡದಿನೇ ಇರಬಹುದು ಎಂಬ ಅನುಮಾನ ಬಂದಿತ್ತಾದರೂ ಮಡದಿ ಅಂತ ಹೇಳ್ದೆ ಆಕೆ ನನಗೆ ಗೊತ್ತು ಆಕೆ ಈ ಊರಿನ ವೇಶ್ಯೆ ನಾನ್ ನಿನಗೆ ಅವಳು ದೊರೆಯುವಂತೆ ಮಾಡ್ತೀನಿ ಗೆಳೆಯ ಅಂತ ಅಭಯವನಿತ್ತು  ಮನೆಗೆ ಹೋಗ್ತಾನೆ
ಹೀಗೆ ಮುಂದುವರೆಯುವ ಕಥೆ ಅತ್ಯಂತ ರೋಚಕ ತಿರುವನ್ನ ಪಡೆದುಕೊಳ್ಳುತ್ತದೆ ತನ್ನ ಹೆಂಡತಿಯನ್ನು ಅತ್ಯಂತ ಪ್ರೀತಿಯಿಂದ ರಮಿಸಿ ಒಪ್ಪುಸುತ್ತಾನೆ
ಮುಂದಿನದನ್ನ ನೀವು ಪುಸ್ತಕವನ್ನು ಓದಿಯೇ ಅಸ್ವಾದಿಸಿರಿ
ಇದು ಒಟ್ಟು 12 ದೃಶ್ಯಗಳನ್ನ ಹೊಂದಿದೆ ನಾನೀಗ 6 ದೃಶ್ಯದವರೆಗೂ ಬಂದಿದ್ದೇನೆ.
ಇಂತಹ ಸ್ನೇಹವೂ ಇತ್ತ ಎಂದು ಯೋಚಿಸುವಂತೆ ಮಾಡುವ ಕಥನ ರೂಪಕವಿದು
ಅತ್ಯಂತ ಸರಳ  ಆಪ್ತ ಸಂಭಾಷಣೆಯೊಂದಿಗೆ ಎಲ್ಲಿಯೂ ಅತಿರೇಕವಿರದಂತೆ  ಚಿತ್ರಿಸಿರುವ  ಇವರ ಲೇಖನೆಯ ಶಕ್ತಿಗೆ ಶರಣೆನ್ನಬೇಕು.
ಕಪಟವರಿಯದ  ಮೂರೂ ಹೃದಯಗಳ ತೊಲಾಟ
ಅಂತ್ಯವನ್ನು ಅರಿಯಲು ಕೃತಿಯನ್ನೊಮ್ಮೆ ಓದಲೇ ಬೇಕು
ಈ ಕೃತಿಯಲ್ಲಿ ಇದಲ್ಲದೆ ಮತ್ತೆರಡು ಐತಿಹಾಸಿಕ ಪೌರಾಣಿಕ ನಾಟಕಗಳನ್ನು ಕಾಣಬಹುದು ಅವುಗಳೆಂದರೆ ಪ್ರೇಮ ದುರಂತ
ಇದು ಮಹಾಭಾರತದ ಅಂಬೆ ಕಥೆಯಾಗಿದೆ
ಮತ್ತೊಂದು ಅಹಿಂಸೆ ಪರಮೋಧರ್ಮ
ಎಂಬುದು ಯಶೋಧರ ಚರಿತ್ರೆಯಲ್ಲಿ ಬರುವ ಅಭಯ ರುಚಿ ಅಭಯಮತಿಯ ಕಥೆಯಾಗಿದೆ
—————————————

Leave a Reply

Back To Top