ಶೋಭಾ ನಾಗಭೂಷಣ ಮನದ ಹೈಕುಗಳು

ಬೇಡದ ನೋವು
ಹತ್ತಿಸಿಕೊಳ್ಳದೆಯೇ
ಬದುಕಿಬಿಡಿ

ಸಮಾಜದಲಿ
ತುಳಿವರ ಸರಿಸಿ
ಮುನ್ನುಗ್ಗಿಬಿಡು

ಹಿಂದೆ ತಳ್ಳುವ
ಜನರನು ಎಂದಿಗೂ
ಲೆಕ್ಕಿಸದಿರು

ಜೊತೆಗಿರುವ
ಶತ್ರುವನು ಎಂದಿಗೂ
ಮರೆಯದಿರು

ನಗು ನಗುತ
ಮಾತನಾಡುವರಿಗೆ
ಮಣಿಯದಿರು


Leave a Reply

Back To Top