“ಸಾಧನೆಗೆ ಸ್ಫೂರ್ತಿ ಹೆಣ್ಣು” ಲೇಖನ-ಭಾರತಿ ಸಂ ಕೋರೆ (ಆಂಕಲಿ)

ರಾಷ್ಟ್ರಾದ್ಯಂತ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8ನೇಯ ತಾರಿಖೀನದಂದು ಆಚರಣೆಯನ್ನು ಮಾಡುತ್ತೇವೆ. ಅದನ್ನು ಏಕೆ ಆಚರಣೆ ಮಾಡುತ್ತೇವೆ? ಅದಕ್ಕೆ ಕಾರಣ ಏನು? ಇದನ್ನು ಸ್ವಲ್ಪ ತಿಳಿದುಕೊಳ್ಳೋಣ.

ಈ ದಿನವನ್ನು ಮಹಿಳೆಯರ ಸಮಾನ ಹಕ್ಕುಗಳು,ದೌರ್ಜನ್ಯ ಮತ್ತು ಸಂತಾನೋತ್ಪತ್ತಿ ಹಕ್ಕುಗಳ,ಪುರುಷರ ಸರಿಸಮಾನ ಕೆಲಸ ಅದಕ್ಕೆ ಸರಿಸಮನಾಗಿ ಸಂಬಳ ಹೋರಾಟ ಮಾಡಿದ ಮಹಿಳೆ 1908 ರಲ್ಲಿ ನ್ಯೂಯಾರ್ಕ್ ದ ಗಾರ್ಮೆಂಟ್ಸ್ ಒಂದರಲ್ಲಿ ಕಾರ್ಮಿಕಳಾಗಿ ದುಡಿಯುತ್ತಿದ್ದ ಒಬ್ಬ ಮಹಿಳೆಯ ಹೋರಾಟ ಮಾಡಿ ಜಯಶಾಲಿಯಾಗಿರುವ ದಿನವನ್ನು ಅಮೆರಿಕಾದಲ್ಲಿ ಫೆಬ್ರುವರಿ 28,1909 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಮಾಡಿದರು.
ಆದರೆ, ನಮ್ಮ ಭಾರತ ದೇಶದಲ್ಲಿ ವಿಶ್ವಸಂಸ್ಥೆಯು ಅಧಿಕೃತವಾಗಿ ಮಾರ್ಚ್ 8 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವನ್ನು ಆಚರಿಸಿತು. ಆದರೆ ಈ ಮಹಿಳಾ ದಿನಾಚರಣೆಯ ದಿನವನ್ನು ಇವತ್ತಿನ ಒಂದು ದಿನಕ್ಕೆ ಸೀಮಿತಗೊಳಿಸದೆ, ಪ್ರತಿ ದಿನವೂ ಮಹಿಳೆಗೆ ಗೌರವ ಕೊಡಬೇಕು.

ಸಾಧನೆಗೆ ಸ್ಫೂರ್ತಿ ಹೆಣ್ಣು, ಬದುಕಿಗೆ ದಾರಿ ಹೆಣ್ಣು, ಕುಟುಂಬದ ಶಕ್ತಿ ಹೆಣ್ಣು, ಎಲ್ಲರ ಬದುಕಿನಲ್ಲೂ ಅಮ್ಮನಾಗಿ, ಸಹೋದರಿಯಾಗಿ, ಅಜ್ಜಿಯಾಗಿ , ಅತ್ತೆಯಾಗಿ, ಶಿಕ್ಷಕಿಯಾಗಿ, ಸ್ನೇಹಿತೆಯಾಗಿ ಪ್ರತಿಯೊಂದು ಸ್ಥಾನವನ್ನು ತುಂಬುತ್ತಾಳೆ. ಬದುಕಿಗೆ ಚೈತನ್ಯ, ಬಲ ತರುತ್ತಾಳೆ. ಇಂತಹ ಪ್ರಮುಖ ಸ್ಥಾನ ಪಡೆದವಳು ಹೆಣ್ಣು, ಹೆಣ್ಣು ಇಲ್ಲದೆ ಗಂಡಿಗೆ. ಬದುಕೇ ಇಲ್ಲ. ಸಂಗಾತಿಯಿಲ್ಲದ ಬದುಕೇ ಇಲ್ಲ. ಆದರೂ ಸಹ ಪುರುಷ ಪ್ರಧಾನ ಸಮಾಜ ಎಂದು ಕರೆಸಿಕೊಳ್ಳಲು ಪುರುಷರು  ಮಹಿಳೆಯನ್ನು ಸರಿಸಮನಾಗಿ ನೋಡುತ್ತಿಲ್ಲ.

ಪ್ರಪಂಚದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಹಲವಾರು ದೌರ್ಜನ್ಯಗಳು ನಡೆಯುತ್ತಿವೆ. ತಾಯಿಯ ಗರ್ಭದಲ್ಲಿ ಮೂಡಿದಾಗಿನಿಂದ ಅಪರಾಧಗಳಿಗೆ ಬಲಿಯಾಗುತ್ತಿದ್ದಾಳೆ. ಈ ಎಲ್ಲ ದೌರ್ಜನ್ಯ ಸಾಮಾನ್ಯವಾಗಿ ಕೌಟುಂಬಿಕ, ಲೈಂಗಿಕ,ಹೆಣ್ಣು ಭ್ರೂಣ ಹತ್ಯೆ,ವರದಕ್ಷಣೆ ಕಿರುಕುಳ,ಲಿಂಗ ತಾರತಮ್ಯ ಹೀಗೆ ಹಲವಾರು ಅಪರಾಧಗಳು ಹೆಣ್ಣಿನ ಮೇಲೆ ನಡಿತಾನೆ ಇವೆ. ಇವೆಲ್ಲ ಪುರುಷರಿಂದಲೇ ನಡೆಯುತ್ತಿವೆ. ಗರ್ಭಧಾರಣೆ ಸಮಯದಲ್ಲಿ ಲಿಂಗ ಪತ್ತೆ ಮಾಡಲು ಬಳಸುವ ಸಾಧನಗಳು ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗಿವೆ. ಅನೇಕ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಅನೇಕ ಮಹಿಳೆಯರು ತಮ್ಮ ಪತಿ ಮತ್ತು ಅವರ ಕುಟುಂಬದವರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಲ್ಪಡುತ್ತಿದ್ದಾರೆ. ಲಿಂಗ ಆಧಾರಿತ ಹಿಂಸಾಚಾರ ಅತೀ ವಿನಾಶಕಾರಿ. ಇದು ಮಹಿಳೆಯರ ಮಾನಸಿಕ ಮತ್ತು ದೈಹಿಕ ಪರಿಣಾಮಗಳಿಗೆ ಕಾರಣವಾಗಿದೆ.

ಇತಿಹಾಸದ ಆರಂಭದಿಂದಲೂ ಮಹಿಳೆಯನ್ನು ಸಮಾಜದ ದುರ್ಬಲ ವರ್ಗವೆಂದು ಪರಿಗಣಿಸಿದ್ದಾರೆ. ಮಹಿಳೆಯರ ಮೇಲಿನ ಹಿಂಸೆಯನ್ನು ನಮ್ಮ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದು ರಾಮಾಯಣದಲ್ಲಿ ಮಾತೇ ಸೀತಾದೇವಿಯ ಅಪಹರಣ ಆಗಿರಬಹುದು, ಮಹಾಭಾರತದ ದ್ರೌಪದಿಯ ವಸ್ತ್ರಾಪಹರಣ ಆಗಿರಬಹುದು. ಕೌಟಿಲ್ಯನ ತಾನು ಬರೆದ ಅರ್ಥಶಾಸ್ತ್ರ ಪುಸ್ತಕದಲ್ಲಿ ಮಹಿಳೆ ಮದುವೆಯಾಗಿ, ಮಕ್ಕಳು ಹೇರುವುದು, ಮನೆಕೆಲಸ, ಮನೆಯವರ ಸೇವೆ ಮಾಡುವುದು ಮುಖ್ಯ ಜವಾಬ್ದಾರಿ ಅಷ್ಟೇ ಎಂದು ಹೇಳುತ್ತಾನೆ. ಆದರೆ ಮಹಿಳೆ ಪುರುಷನಿಗಿಂತ ನೂರು ಪಟ್ಟು ಬಲಿಷ್ಠಳು, ಗಂಡಿಗಿಂತ ಆತ್ಮಸ್ಥೈರ್ಯ ಹೆಚ್ಚು ಅಂತ ಗೊತ್ತಿಲ್ಲ.

ಕಾಲಾನಂತರದಲ್ಲಿ ಮಹಿಳೆಯರ ಬಗ್ಗೆ ಗೌರವ ಸಾಮಾಜಿಕ ಸ್ಥಾನಮಾನದೊಂದಿಗೆ ಬೆಳಕಿಗೆ ಬರಲು ಪ್ರಾರಂಭವಾಯಿತು. ಅಡುಗೆ ಮನೆಯಿಂದ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವುದು ಈಗ ಎಲ್ಲರೂ ನೋಡುವಂತಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಂಡಿನ ಸರಿ ಸಮನಾಗಿ ದುಡಿಯುವ ಮೂಲಕ ತನ್ನನ್ನು ತಾನು ಸಾಬೀತುಪಡಿಸಿಕೊಂಡಿದ್ದಾಳೆ.ನಾಡಿಗಾಗಿ ಹೋರಾಡಿದ ಹೋರಾಡಿದ ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ,ಅಬ್ಬಕ್ಕ, ಒನಕೆಓಬವ್ವ,ಶಿಕ್ಷಣ ಕ್ಷೇತ್ರದಲ್ಲಿ ಸಾವಿತ್ರಿಬಾಯಿ ಫುಲೆ,ಅನೇಕ ಅವಮಾನ ಸಹಿಸುವುದರೊಂದಿಗೆ ಅಕ್ಷರ ಮಾತೇ ಎನೀಸಿಕೊಡಿದ್ದಾಳೆ. ಏಷ್ಟೋ ನಮ್ಮಂತಹ ಮಹಿಳಾ ಶಿಕ್ಷಕಿಯರಿಗೆ ಮಾರ್ಗದರ್ಶಕಿಯಾಗಿದ್ದಾರೆ.ರಾಜಕೀಯ ಕ್ಷೇತ್ರದಲ್ಲಿ ಇಂದಿರಾಗಾಂಧಿ, ಕ್ರೀಡಾ ಕ್ಷೇತ್ರದಲ್ಲಿ ಪಿ. ಟಿ ಉಷಾ ಚಿನ್ನದ ಪದಕ ಗಳಿಸುವ ಮೂಲಕ ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾಳೆ. ಸ್ನೇಹಿತರೆ,
ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಏನಾದರೂ ಇದ್ದರೆ ಅದು ಇರುವುದು ಮಹಿಳೆಗೆ ಮಾತ್ರ. ಸ್ನೇಹಿತರೆ
ನನ್ನ ತಾಯಿ ನನ್ನ ಬದುಕಿನ ಸರ್ವಸ್ವ. ಅವಳೇ ನನಗೆ ಜನ್ಮ ನೀಡಿಲ್ಲದಿದ್ದರೆ ಇವತ್ತು ನಾನು ಶಿಕ್ಷಯಾಗಿ ಸೇವೆ ಸಲ್ಲಿಸುತ್ತಿರಲಿಲ್ಲ. ನಿಸ್ವಾರ್ಥ ಸೇವೆಗೆ ನಾ ಎಂದು ಚಿರಋಣಿಯಾಗಿರುವೆ ಅಮ್ಮ. ನಿನಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.

ನನ್ನ ಎಲ್ಲ ಮಹಿಳಾ ಬಳಗಕ್ಕೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ.


2 thoughts on ““ಸಾಧನೆಗೆ ಸ್ಫೂರ್ತಿ ಹೆಣ್ಣು” ಲೇಖನ-ಭಾರತಿ ಸಂ ಕೋರೆ (ಆಂಕಲಿ)

Leave a Reply

Back To Top