ಶೃತಿ ಮಧುಸೂದನ್ ಕವಿತೆ-ಅವನೆಂದರೆ ಒಲವು

ಅವನೆಂದರೆ ಒಲವ ಗೀತೆ ಸಾಲೆ.
ಅವನೆಂದರೆ ಚೆಲುವ  ಹೂವಿನ ಮಾಲೆ.

ಹಾಳೆಯ ಮೇಲೆ ಗೀಚಿ ಬರೆದ ಕವಿತೆಯ ರೂಪವೇ
ಎದೆಯ ಮೇಲೆ ತಣ್ಣಗೆ ಸೆಳೆದ ಕಾವ್ಯದ ಅಂದವೇ

!! ಅವನೆಂದರೆ!!

ಚರಣ 1.



ಕರಿ ಮೋಡ ಧರೆಗಿಳಿದು
ಮಳೆ ಸುರಿಸಿದ ಸೋಗೆ
ಭೂಮಿ ತಂಪಾಗಿ ನಿನ್ನ
ಬರ ಸೆಳೆದು ಅಪ್ಪಿದ ಹಾಗೆ

ಜೇನ ಸಿಹಿ ಮಧುರ ಅದರದಿ
ಮಿಂಚಿದ ಕಾಮನಬಿಲ್ಲೇ
ಬಾನ ಚಂದಿರನ ಬಿಂಬದಿ
ಹಚ್ಚಿದ ತಾರೆಗಳ ಹೂಮಲ್ಲೇ

!!ಅವನೆಂದರೆ!!

ಚರಣ 2.

ನೈದಿಲೆಯು ಮೊಗ್ಗಾಗಿ
ಕಂಡ ಕನಸು ಪಲ್ಲವಿಗಳಲ್ಲೇ
ನನಸಾದ ನಲ್ಲನ ಆಗಮನ
ಮನಸು ಹಿಗ್ಗಿ ಅರಳಿತಿಲ್ಲೆ…

ರಾಗ ಶೃತಿಯೂ ಬೆರೆತು
ಸಮಾಗಮ ಸಂಗೀತದಲ್ಲೇ
ಭಾವ ಝರಿಯು ಹರಿದು
ಸಂಗಮ ನಿನ್ನ ಹೆಸರಿನಲ್ಲೇ…

! ಅವನೆಂದರೆ!


Leave a Reply

Back To Top