ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮನವೆಂಬ ಮನೇಲಿ
ಸೇರುವವು ಆಗಾಗ
ಕಸ ಕಡ್ಡಿ ಹೊಲಸು
ನಿತ್ಯ ಸ್ವಚ್ಛಗೊಳಿಸು.
ಕಾಯುತಿರುವ ಬಂಜೆ
ತಯಾರಿಸಿ ಅಡುಗೆ,
“ಅಮ್ಮಾ” ಎಂದು ಕೂಗುವ
ಬಿಕ್ಷುಕನ ಧ್ವನಿಗೆ.
ವೃದ್ಧಾಪ್ಯದಿ ಕೈ ಕಾಲು
ಕಣ್ಣು ಕಿವಿ ನಿಶ್ಯಕ್ತ,
ಮಾತು ಮತ್ತು ರುಚಿಗೆ
ಜಿವ್ಹೆ ಚಪಲಾಸಕ್ತ.
ಬಯಕೆ ಹೆಚ್ಚಾದರೆ
ಬದುಕು ಬಂಡೆಗಲ್ಲು
ಆಸೆ ಮಿತವಾದರೆ
ಹೂವಿನಷ್ಟು ಹಗುರ.
ಕಾಂಕ್ರೀಟ್ ಕಾಡಿನಲಿ
ಹಕ್ಕಿ ಹುಡುಕಾಡಿತು
ಸಿಗಲಿಲ್ಲ, ಹೊಟ್ಟೆಗೆ
ಮರಳಿತು ಹಳ್ಳಿಗೆ.
ಗುರುತಿಸಿಕೋ ನಿನ್ನ
ಪರೋಪಕಾರದಿಂದ,
ಸದ್ದಿಲ್ಲದೆ ಬೆಳಕು
ಕೊಡುವ ದೀಪದಂತೆ.
ಈ ಸಮಾಜ ಸಮಯ
ಇದ್ಯಾವುದು ಕೆಟ್ಟಿಲ್ಲ
ನಾವುಗಳೇ ಕೆಟ್ಟಿದ್ದು
ಆತ್ಮಸಾಕ್ಷಿ ವಿರುದ್ಧ.
ವ್ಯಾಸ ಜೋಶಿ.
ತನಗ ಎಂದರೆ ಏನು??ಪ್ರತಿ ಸಾಲಿನಲ್ಲಿ ಏಳು ಅಕ್ಷರಗಳು ಇವೆ