ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
“ಒಲವ ಮಿಡಿತಗಳು”
ನೀನು ಎಲ್ಲೂ ಹೋಗದ ಹಾಗೆ
ನನ್ನದೆಯ ಗೂಡಲ್ಲಿ
ಬಚ್ಚಿಟ್ಟುಕೊಳ್ಳುವೆ
ನಿನ್ನೊಲವ ಕಚಗುಳಿಗೆ
ನಾ ಕಳೆದುಹೋಗುವೆ
ಈ ಉಸಿರ ಉಸಿರೊಳಗೆ ನೀ
ಬೆರೆತು ಹೋಗಿರುವೆ
ನೀನೇ ನನ್ನ ಚಂದಿರ
ನೀನು ಜೊತೆಯಲ್ಲಿರಲು
ಬದುಕು ಸುಂದರ
ಬೆಳದಿಂಗಳ ಜೊತೆ
ಹೆಜ್ಜೆ ಹಾಕಲು
ಪ್ರತಿ ಕ್ಷಣವೂ ಸುಮಧುರ
ಮನಸ್ಸಿಗೆ ಗಾಯ ಮಾಡಿ
ಹೋಗ ಬೇಡ
ಬದುಕಿನ ಖುಷಿಯ
ಕಸಿದು ಕೊಳ್ಳಬೇಡ
ಈ ಕ್ಷಣ ದೂರ ತಳ್ಳ ಬೇಡ
ಕನಸುಗಳ ಕನಸಾಗಿಸಬೇಡ
ಕನಸುಗಳ ಕೈ ಹಿಡಿದು
ಮುನ್ನಡೆಸು
ಒಂದೊಂದೇ ಕನಸುಗಳ
ನನಸಾಗಿಸು
ಬದುಕಿನ ಪ್ರತಿಕ್ಷಣವನ್ನು
ಸುಂದರಗೊಳಿಸು
ನಸು ನಗುವ ಬೀರುತ್ತಾ
ಜಗವ ಜಯಿಸು
ಬದುಕಿನ ದಾರಿಯನ್ನು
ಬೆಳಗಿಸಿ ಝಗಮಗಿಸು
ನಾಗರಾಜ ಜಿ. ಎನ್. ಬಾಡ
ಮನಸ್ಸಿನ ಮಾತುಗಳಲ್ಲಿ ಕವನದ ಸಾಲುಗಳು ರೂಪುಗೊಂಡಂತೆ ಕಂಡರೂ ಭಾವಗಳು ಸುಮಧುರವಾಗಿದೆ. ಕಾಲನ ಓಟದಲ್ಲಿ ಪ್ರೀತಿ,ಅಭಿಮಾನ ಬದುಕಿನ ಆಧಾರ. ಅಲ್ಲೊಂದು ಪ್ರೀತಿಸುವ ಪುಟ್ಟ ಮನಸಿದೆ. ಕನಸುಗಳ ಜೊತೆ ಸಾಗಿ ಕುಳಿತು ಮಾತಾಡುವ ಕೇಳುವ ಸಹಜ ಬದುಕಿನ ಭರವಸೆ ಇದೆ ಈ ಕವನದಲ್ಲಿ……..,
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ
ಕುಮಟಾ.
ಅದ್ಬುತವಾಗಿದೆ ನಿಮ್ಮ ಕವನ