ಕಾವ್ಯ ಸಂಗಾತಿ
ಗಂಗಾ ಚಕ್ರಸಾಲಿ
ಸೀರೆ-ನಾರಿ
ನಾನೀಗ ಸೀರೆ ಧರಿಸಿರುವ ನಾರಿ
ಹೀಗೇಕೆ ನೋಡುವಿರಿ ತರಾವರಿ
ಹುಡುಗಿ ಸ್ಥಾನವ ಬಿಟ್ಟುಕೊಟ್ಟು
ಮಹಿಳೆ ಸ್ಥಾನಕ್ಕೇರಿದ್ದೇನೆ..
ಸೀರೆಯೇ ಸಂಪ್ರದಾಯವ ಹೇಳುತ್ತಿದೆಯಲ್ಲಾ….
ನಗುತ್ತಿರುವ ನಿರಿಗೆಯ ಹೂಗಳಲ್ಲಿ
ಎನ್ನ ಕುಟುಂಬದ ಕನಸುಗಳಿವೆ
ಒಪ್ಪವಾಗಿ ಎದೆಮೇಲೆ ಜೋಡಿಸಿದ
ಸೆರಗಿನ ಮಡಿಕೆಗಳಲ್ಲಿ
ಮಾಂಗಲ್ಯ ಮಾಲಿಕನ ಆಸೆಗಳಿವೆ…
ಬೆನ್ನಹಿಂದೆ ಇಳಿಬಿಟ್ಟ
ಸೆರಗಿನ ಪುಟ್ಟಪುಟ್ಟ ಮೊಗ್ಗುಗಳಲ್ಲಿ
ಎನ್ನ ಮಾತೃತ್ವದ ಕುಡಿಗಳಿವೆ
ಅಷ್ಟೇ ಏಕೆ…..
ದಡಿಯ ಅಂಚಿನ ಮಂದಿರಗಳಲ್ಲಿ
ಎನ್ನ ಮನದ ಭವ ಬಂಧನಗಳಿವೆ…
ಕಾಮದ ಕಂಗಳಿಂದ ನೋಡಿ
ಸೆರಗಿಗೆ ಕೈ ಸೋಕಿಸದಿರಿ…
ನಿಮಗದು ಕೇವಲ ಬಟ್ಟೆಯಾಗಿರಬಹುದು,
ನನಗದು ಹೆಣ್ತನದ ಮರ್ಯಾದೆ..
ಕಾರಣ ನಾನೀಗ ಸತಿ,ಮಾತೆ.…
ಗಂಗಾ ಚಕ್ರಸಾಲಿ
ಅದ್ಭುತ