ಜಶೀಲ ..ಎಚ್. ಡಿ. ಕೋಟೆ ಹನಿಗಳು

ಅವನಿರದ ಹಗಲುಗಳು
ಕಗ್ಗತ್ತಲ ಕರಾಳ ರಾತ್ರಿಗಳು
ಈಗ ನನಗೆ ಹಗಲು ರಾತ್ರಿ
ಏನೂ ತಿಳಿಯುತ್ತಿಲ್ಲ
ಕಾರಣ ಬಳಿ ಅವನಿಲ್ಲ


ಬಳಿ ಇಲ್ಲದೆಯೂ
ಕಾಣದೆಯೂ ನನ್ನ
ಸ್ಪರ್ಶಿಸಿ ನನ್ನದೆಲ್ಲವನ್ನು
ದೋಚಿದ ಅವನೋ
ಮಹಾ ಜಾದುಗಾರ


ಅವನು ನಕ್ಕಿದ ಸೊಬಗಿಗೆ
ಮಲ್ಲಿಗೆಯ ಮೊಗ್ಗುಗಳೆಲ್ಲ
ಹಿಗ್ಗಿ ನನ್ನ ಮುಡಿಯೇರಿ
ಹೇಗೆ ಸಂಭ್ರಮಿಸುತ್ತವೆ !
ಅವನ ನಗುವೇನು
ಮಲ್ಲಿಗೆಯ ಮುತ್ತುಗಳೆ ?!!


ಈ ಜಗವೆಲ್ಲ ಗಂಡಸರನ್ನು
ಎಷ್ಟೇ ಜರಿದರೂ,
ನಾನಿವನನ್ನು ಜರಿಯಲಾರೆ
ಕಾರಣ ಇವನು ನನ್ನ ತನು
ಮನ ಬೆಳಗಿದ ರವಿ!!!


Leave a Reply

Back To Top