ಧಾರಾವಾಹಿ
ಭಾರತಿ ಸಂ ಕೋರೆ
ಏಳನೆ ಕಂತು
ಪ್ರೀತಿಯ ಪಯಣ
ಕಾಯುವ ಮಾತು
ರಾಜನು ಸಂಜೆ ಬೇಟಿಯಾಗುವೆ ಎಂದಾಗ ಸರಿ ಎಂದು ದೇವಕಿಗೆ ಸ್ವಲ್ಪ ನಿರಾಳವಾಗಿ ಸ್ವಲ್ಪ ಊಟ ಮಾಡಿ ಮತ್ತೆ ವರ್ಕ್ ಮಾಡಲು ಕುಳಿತರು ಆಗಲೂ ರಾಜನದೇ ಧ್ಯಾನ,ಅವನ ಬಗ್ಗೆಯೇ ಯೋಚನೆ ಮಾಡುತ್ತ ಸಂಜೆಯಾಗಿದ್ದೆ ಗೊತ್ತಾಗುವುದಿಲ್ಲ.
ದೇವಕಿ ಕೆಲಸ ಮುಗಿಸಿ ಆಫೀಸ್ ಬಿಟ್ಟು, ನಿತ್ಯ ತಾವಿಬ್ಬರೂ ಭೇಟಿಯಾಗುವ ಜಾಗಕ್ಕೆ ಹೋಗಿ ರಾಜನಿಗಾಗಿ ವೈಟ್ ಮಾಡುತ್ತ ಇರುವಾಗ,ಮತ್ತೆ ಅದೇ ಯೋಚನೆ ರಾಜ ಹೀಗೆ ಯಾಕೆ ಮಾಡಿದ? ನಿಜವಾಗಿ ನನ್ನ ಪ್ರೀತಿ ಮಾಡುತ್ತಾನೆಯೇ ಎನ್ನುವುದು ಇವಳ ಗೊಂದಲ. ಅಷ್ಟರಲ್ಲಿ ರಾಜನು ಬರುತ್ತಾನೆ. ಅವನು ಬಂದು ನಿಂತಿರುವುದು ಗಮನಿಸದಷ್ಟೂ ಗಾಢವಾದ ಯೋಚನೆಯಲ್ಲಿ ಮುಳುಗಿರುತ್ತಾಳೆ. ಆಗ ರಾಜ ಭುಜ ತಟ್ಟಿ ಹೆಲ್ಲೋ ಎಲ್ಲಿ ಕಳೆದು ಹೋಗಿದ್ದಿರಿ ಎಂದಾಗ, ಓಹ್ ನೀವಾ ಎನ್ನುತ್ತಾಳೆ.ಹೌದು ನನ್ನ ಬಿಟ್ಟು ಮತ್ತಾರೂ ಇರೋಕೆ ಸಾದ್ಯ ಎಂದು ನಗುತ್ತಾನೆ.
ಏನು ಮೊನ್ನೆ 15 ದಿವಸ ಯಾಕೆ ಮೆಸೇಜ್,ಕಾಲ್ ಬ್ಲಾಕ್ ಮಾಡಿದ್ದೆ ಅಂತ ಯೋಚನೆ ಮಡತಿದಿರಾ? ಎಂದಾಗ, ದೇವಕಿಯ ಪ್ರತ್ಯುತ್ತರ ಹೌದು ಮತ್ತೆ ಏನು ಹೇಳದೆ ಕೇಳದೆ ಬ್ಲಾಕ್ ಮಾಡಿದರೆ ನಾನೇನು ಮಾಡಬೇಕುರಿ. ನಿಮ್ಮನ್ನ ನಂಬಿ ಪ್ರೀತಿ ಮಾಡಿದ್ದಕ್ಕೆ ನೀವು ಈ ರೀತಿ ಮಾಡುವುದು ಸರಿನಾ ಹೇಳಿ ಎನ್ನುತ್ತ ಮತ್ತೆ ಅಳಲು ಶುರು ಮಾಡುತ್ತಾಳೆ. ಆಗ ರಾಜನಿಗೂ ತುಂಬಾ ಬೇಜಾರಾಗುತ್ತೆ. ಹಾಗೇನು ಇಲ್ಲಪ್ಪಾ ಅಣ್ಣನ ಜೊತೆಗೆ ಪಾರ್ಟಿ ಮೀಟಿಂಗ್ ನಲ್ಲಿ ಇದ್ದೆ. ಪದೇ ಪದೇ ನಿನ್ನ ಕಾಲ್ ನೋಡಿ ಅಣ್ಣ ಕೇಳಿದ್ರು ರಾಜ ಯಾರದ ಅದು ಕಾಲ್ ಅಂತ ಅದಕ್ಕೆ ಹೆದರಿ ಬ್ಲಾಕ್ ಮಾಡಿದೆ ಪ್ಲೀಸ್ ಬೇಜಾರಾಗಬೇಡಿ ಅಂತ ಹೇಳುತ್ತಾನೆ. ಆಗ ದೇವಕಿ ಏನ್ರೀ ನಿಮ್ಮನ್ನ ಎಸ್ಟೊಂದು ಪ್ರೀತಿ ಮಾಡತೀನಿ ಅಂತ ಗೊತ್ತಿಲ್ಲವಾ ನಿಮಗೆ ಎಂದಾಗ ರಾಜ್ ನಗುತ್ತಾ ನಂಗೇನೂ ಗೋತ್ತಿಲ್ಲಪ್ಪ ಎನ್ನುತ್ತಾನೆ. ಮೊದಲೇ ಕೋಪದಲ್ಲಿದ್ದ ದೇವಕಿ ನೀವು ನನ್ನ ನಿಜವಾಗಿ ಪ್ರೀತಿ ಮಾಡತಿದಿರಾ ಇಲ್ಲ ಟೈಮ್ ಪಾಸ್ ಗೆ ಮಾಡ್ತಿದಿರಾ ಎಂದು ಸಿಟ್ಟಿನಿಂದ ಕೇಳುತ್ತಾಳೆ. ಅಯ್ಯೋ ಹೊಡೆದು ಗಿಡಿದು ಬಿಟ್ಟಿರಿಪಾ ನನ್ನ ಮೊದಲೇ ನೀವು ಸ್ಟ್ರಾಂಗ್ ಎಂದು ಹೇಳುತ್ತ ದೇವಕಿಯ ನಗಿಸಿಯೇ ಬಿಡುತ್ತಾನೆ ರಾಜ. ಆಗ ದೇವಕಿಯ ನಗು ನೋಡಿ ರಾಜನಿಗೆ ಸಮಾಧಾನ ಆಗುತ್ತದೆ. ಆಗ ದೇವಕಿಯ ಕೈ ಹಿಡಿದು ನೀವು ಯಾವಾಗಲೂ ಹೀಗೆ ನಗುತ್ತ ಇರಬೇಕು. ಇನ್ನ ಯಾವತ್ತೂ ಕಣ್ಣಲ್ಲಿ ನೀರು ಹಾಕಬೇಡಿ ಎಂದು ಸಮಾಧಾನ ಪಡಿಸುತ್ತಾನೆ.
ರಿ ರಾಜಾ ಪ್ಲೀಸ್ ನನ್ನ ನೆಗ್ಲೆಕ್ಟ್ ಮಾಡಬೇಡಿ,ನನಗೆ ತಡಕೋ ಶಕ್ತಿ ಇಲ್ಲ, ನಿಮ್ಮನ್ನ ಬಿಟ್ಟ ಇರುವ ಶಕ್ತಿಯು ಇಲ್ಲ ಅರ್ಥ ಮಾಡಿಕೊಳ್ಳಿ ಎನ್ನುತ್ತಾಳೆ. ಆಗ ರಾಜ ಇಲ್ಲಪ್ಪಾ ಜೊತೆಗೆ ಯಾರಾದರೂ ಇದ್ದಾಗ, ಕೆಲಸದಲ್ಲಿ ಬ್ಯುಸಿ ಇದ್ದಾಗ ಸ್ವಲ್ಪ ಹಿಂಗೆ ಆಗುವುದು ಸಹಜ. ಅದಕ್ಕೆ ಪ್ಲೀಸ್ ಬೇಜಾರಾಗಬೇಡಿ ಎಂದು ಸಮಾಧಾನ ಪಡಿಸುತ್ತಾನೆ. ನಾನು ನಿಮ್ಮನ್ನ ತುಂಬಾ ಇಷ್ಟ ಪಟ್ಟು ಪ್ರೀತಿ ಮಾಡಿದೀನಿ, ಈ ವಿಷಯದಲ್ಲಿ ನನಗೂ ಕೂಡ ಬೇಜಾರಿದೆ. ಸಾರಿಪಾ ಎನ್ನುತ್ತ ಅವಳ ಕೈ ಹಿಡಿದು ಕ್ಷಮೆ ಕೇಳುತ್ತಾನೆ. ಹಾಗೆಲ್ಲ ಸಾರಿ ಕೇಳಬೇಡಿ ನೀವು. ನಂದೆ ತಪ್ಪು ನಾನು ಕಾಲ್ ಮಾಡಬಾರದಿತ್ತು. ವೈಟ್ ಮಾಡಿದ್ರೆ ಸರಿ ಆಗುತ್ತಿತ್ತು ಎಂದು ಮತ್ತೆ ದೇವಕಿ ಸಪ್ಪಗಾಗುತ್ತಾಳೆ. ಆಗ ರಾಜನು ಇಬ್ಬರು ಮನಸಾರೆ ಇಷ್ಟ ಪಟ್ಟು ಪ್ರೀತಿ ಮಾಡಿದೀವಿ. ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗೋಣ ಎನ್ನುತ್ತಾನೆ. ಹೌದು ಮೊನ್ನೆ ನೀವು ಯಾವ ನಂಬರ್ ನಿಂದಾ ಕಾಲ್ ಮಾಡಿದ್ರಿ ಎಂದು ರಾಜ ಕೇಳಿದಾಗ, ದೇವಕಿ ನಮ್ಮ ಮನೆ ಪಕ್ಕದಲ್ಲಿ ಇಬ್ಬರು ಮನೆ ಕಟ್ಟುತ್ತಿದ್ದಾರೆ. ಆ ಲೇಬರ್ ಫೋನ್ ತೊಗೊಂಡು ನಿಮಗೆ ಕಾಲ್ ಮಾಡಿದ್ದೆ ಎನ್ನುತ್ತಾಳೆ. ಇನ್ನ ಹಾಗೆಲ್ಲ ಬೇರೆಯವರ ಫೋನ್ ನಿಂದ ಕಾಲ್ ಮಾಡಬೇಡಿ. 1 ಮೆಸೆಜ್ ಮಾಡಿ ,ನಾನು ಪ್ರೀ ಮಾಡಿಕೊಂಡು ಕಾಲ್ ಮಾಡುತ್ತೇನೆ ಎಂದು ಇಬ್ಬರು ಮಾತನಾಡಿಕೊಂಡು ನಿರ್ಧಾರ ತೋಗೋತಾರೆ.
ಹೀಗೆ ದಿನ ಕಳೆದಂತೆ ಇಬ್ಬರಿಗೂ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತೆ. ಇತ್ತ ದೇವಕಿ ಮನೆಯಲ್ಲಿ ಹಿರಿಯ ಮಗಳು ಇರೋದರಿಂದ ಅವಳ ಮದುವೆಗೆ ಅವಸರ ನಡಿಯುತ್ತ ಇರುತ್ತೆ. ಈ ವಿಷಯವಾಗಿ ರಾಜನಿಗೆ ಕೇಳಿದಾಗ ರಾಜನು ನಮ್ಮ ಅಣ್ಣನ ಮದುವೆ ಫಿಕ್ಸ್ ಆದ ಮೇಲೆ ನಮ್ಮ ವಿಷಯ ಹೇಳುವೆ.ಅಲ್ಲಿಯವರೆಗೆ ನಾವು ಸ್ವಲ್ಪ ಕಾಯಬೇಕು ಎನ್ನುತ್ತಾನೆ.
ಕಥೆಯ ಮುಂದುವರೆದ ಭಾಗ ಮುಂದಿನ ಮಂಗಳವಾರ .
ಭಾರತಿ ಸಂ ಕೋರೆ
ಭಾರತಿ ಸಂ ಕೋರೆ.
(ಲೇಖಕರು.ಸಾಹಿತಿಗಳು.
ಅಂಕಲಿ ಬೆಳಗಾವಿ ಜಿಲ್ಲೆ) ಇವರು ಪ್ರತಿಷ್ಠಿತ ಕೆ.ಎಲ್. ಇ ಸಂಸ್ಥೆಯ ಸಿ.ಎಸ್.ಕಿತ್ತೂರು ಪ್ರೌಢಶಾಲೆ ಅಥಣಿಯಲ್ಲಿ ಶಿಕ್ಷಕಿಯಾಗಿ ಒಂಬತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ (ಫ್ಯಾಷನ್ ಡಿಸೈನರ್) ಎಂ.ಎ.ಬಿ ಇಡಿ. ಇವರು ಶಾಲೆಯಲ್ಲಿ ಹಂಚಿಕೊಂಡ ಶಾಲಾ ವಿಭಾಗಗಳು – 04
ಸಾಹಿತ್ಯ ಕ್ಷೇತ್ರ ಮತ್ತು ಸಂಘಗಳು – 08 ಇವರ ಪ್ರಕಟಿತ ಕೃತಿ – 01(ಶಾರದಾ ಪ್ರಭೆ ಡಾ.ಪ್ರಭಾಕರ ಕೋರೆಯವರ ಕುರಿತು)
ಬಿಡುಗಡೆ ಹಂತದಲ್ಲಿರುವ ಕೃತಿಗಳು – 02
ಇವರ ಆಸಕ್ತಿ : ಕಥೆ,ಕವನ,ಕಾದಂಬರಿ ಬರೆಯುವುದು,ಓದುವುದು, ಸಂಗೀತ,ನೃತ್ಯ,ಚಿತ್ರಕಲೆ ಮುಂತಾದವು.
ಇನ್ನು ಇವರನ್ನು ಅರಸಿ ಬಂದ ಪ್ರಶಸ್ತಿಗಳು
04 ರಾಜ್ಯ ಪ್ರಶಸ್ತಿಗಳು
03 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ಭಾರತಿ ಕೋರೆಯವರು ಶಿಕ್ಷಕ ವೃತ್ತಿಯ ಜೊತೆಗೆ ನುಡಿ ಮುತ್ತುಗಳು,ಹನಿಗವನ,ಅಂಕಣ ಬರಹ ಮುಂತಾದವುಗಳನ್ನು ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.