ಕಾವ್ಯಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಸಾವಿರಾರು ಕನಸುಗಳೂ ನಿನ್ನನ್ನೇ ಕಾಣುತ್ತಿವೆ
ಭಾವನೆಗಳ ಕುಂಚವೂ ನಿನ್ನನ್ನೇ ಬಿಡಿಸುತ್ತಿವೆ
ಮರೆಯಬೇಕೆಂದರೂ ಮರೆಯಲಾಗದ ನೆನಪು
ತೊರೆದರೂ ಸುಮ್ಮನೆ ನಿನ್ನನ್ನೇ ಹುಡುಕುತ್ತಿವೆ
ಮೌನಿಯಾಗಿರುವೆ ಮಾತುಗಳ ಮರೆಮಾಚಿ
ಮಾಸದ ಕಣ್ಣ ಈರ್ಶೆ ನಿನ್ನನ್ನೇ ನೆನಪಿಸುತ್ತಿವೆ
ಎಷ್ಟೋ ಮೋಹಕ ಮೋಸದ ಕಥೆಗಳು ಕೇಳಿದ್ದೆ
ನಟನೆಯ ಕ್ಷಣಗಳು ನಿನ್ನನ್ನೇ ಮೋಹಿಸುತ್ತಿವೆ
ವೈರಾಗ್ಯಕ್ಕೆ ಕಾರಣ ನೀನೇ ಅಲ್ಲವೇ ಮಾಜಾ
ಹಗಲಿರುಳುಗಳು ಬಿಡದೆ ನಿನ್ನನ್ನೇ ಶಪಿಸುತ್ತಿವೆ
- ಮಾಜಾನ್ ಮಸ್ಕಿ