ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ಹಾಯ್ಕುಗಳು
ಸಂಗಾತಿ ಪ್ರೀತಿ
ಹಾಲಿನಂತೆ ಶುಭ್ರವು
ಅಪರಿಮಿತ
ನಲ್ಲನ ಮಾತು
ಬೆಲ್ಲದಷ್ಟು ಮಧುರ
ಜೇನ ಹೊಳೆಯು
ಸಾಹಿತ್ಯದಿಂದ
ಜ್ಞಾನ ವಿಕಸನವು
ಮನಕಾನಂದ
ಸಂಗೀತವದು
ದೈವತಂದ ವರವು
ಮನೋಲ್ಲಾಸವು
ಗೆದ್ದು ಬೀಗದೆ
ಬಾಗಿ ನಡೆಯುತಿರೆ
ಮಾನ್ಯನಾಗುವೆ
ಸೋಲುವೆನೆಂಬ
ಭಯ ತೊರೆಯಬೇಕು
ಪ್ರಯತ್ನ ಬೇಕು
ಮರಿ ಹಕ್ಕಿಯ
ನಾಳಿನ ಕನಸಿಗೆ
ಸಾಕ್ಷಿ ದಿನಪ
ಬುವಿ ಕೆನ್ನೆಗೆ
ಮುತ್ತಿಕ್ಕುತ ಹೊರಟ
ದಿನಮಣಿಯು
ಮಧುಮಾಲತಿ ರುದ್ರೇಶ್
ತುಂಬು ಧನ್ಯವಾದಗಳು
ಹಾಯ್ಕುಗಳು ಚೆನ್ನಿವೆ…ಆದರೆ, ಹಾಲು ಇನ್ನೂ ಚೆನ್ನಾಗಿ ಕಾಯ್ದು ಕೆನೆಗಟ್ಟಲು ಉರಿ ಹೆಚ್ಚಿಗೆ ಹಾಕಬೇಕು.
೦ ಜಿ.ಎಸ್.ಪ್ರಕಾಶ್,ಬೆಂಗಳೂರು ೦
ಮೇಡಂ ಹಾಯ್ಕುಗಳು ತುಂಬಾ ಚೆನ್ನಾಗಿ ಮೂಡಿವೆ. ಅಭಿನಂದನೆಗಳು. : ಬಿ.ಟಿ.ನಾಯಕ್, ಬೆಂಗಳೂರು.